ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಕಾರಿ ಆಸ್ಪತ್ರೆಗಳ ವಿರುದ್ಧ ಅಪಪ್ರಚಾರ ಸಲ್ಲದು : ಆರೋಗ್ಯ ಸಚಿವ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು ಡಿಸೆಂಬರ್ 10: ಬಡ ರೋಗಿಗಳ ಹಿತದೃಷ್ಟಿಯಿಂದ ಕಾರ್ಯಾಚರಿಸುವ ಸರಕಾರಿ ಆಸ್ಪತ್ರೆಗಳ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಹೇಳಿದರು.

ವೈದ್ಯಕೀಯ ಕ್ಷೇತ್ರವು ಲಾಭದ ನಿರೀಕ್ಷೆಯ ಕ್ಷೇತ್ರವಲ್ಲ. ಇದು ಸೇವಾಮನೋಭಾವದ ಕ್ಷೇತ್ರವಾಗಿದೆ. ಸರಕಾರಿ ಆಸ್ಪತ್ರೆಗಳ ಮತ್ತಷ್ಟು ಸೇವೆಯನ್ನು ಜನರಿಗೆ ನೀಡಲು ಇಲಾಖೆ ಕಟಿಬದ್ಧವಾಗಿದೆ. ಹಾಗಾಗಿ 'ಡಿ' ಗ್ರೂಪ್ ನೌಕರರಿಂದ ಹಿಡಿದು ವೈದ್ಯರು, ಅಧಿಕಾರಿಗಳು ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಸಹಕರಿಸಬೇಕು ಸಚಿವರು ತಿಳಿಸಿದರು.[ಸೌಂದರ್ಯ ವರ್ಧಕ, ಕೂದಲು ಕಸಿ ಚಿಕಿತ್ಸೆಗೆ ನೋಂದಣಿ ಕಡ್ಡಾಯ]

Health minister inaugurates new facilities at Wenlock hospital

'ವೆನ್ಲಾಕ್ ಆಂಬ್ಯುಲೆನ್ಸ್ ರೆಸ್ಪಾಂಟ್ ಸರ್ವಿಸ್, ಜನಸಂಜೀವಿನಿ ಔಷಧಿ ಮಳಿಗೆ, ಸಂಯುಕ್ತ ಆಯುಷ್, ವಿಶೇಷ ಚಿಕಿತ್ಸಾ ಘಟಕ, ಹೊರರೋಗಿ ಕ್ಷ-ಕಿರಣ ವಿಭಾಗ, ನವೀಕೃತ ಸೆಲ್‌ವಾರ್ಡ್'ನ್ನು ಶುಕ್ರವಾರ ಉದ್ಘಾಟಿಸಿದರು.

ಸರಕಾರಿ ಆಸ್ಪತ್ರೆಯ ಸಿಬ್ಬಂದಿಯಿಂದ ಹಿಡಿದು ವೈದ್ಯರು, ಅಧಿಕಾರಿಗಳು ಹಸನ್ಮುಖಿಗಳಾಗಿ ಸೇವೆ ಸಲ್ಲಿಸಬೇಕು. ಅದರೆ ಸರಕಾರಿ ಆಸ್ಪತ್ರೆಯಲ್ಲಿ ಲಂಚಕ್ಕೆ ಪೀಡಿಸಲಾಗುತ್ತಿದೆ. ಸಮರ್ಪಕ ಸೇವೆ ನೀಡಲಾಗುತ್ತಿಲ್ಲ ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತದೆ. ಇಲ್ಲಿ ಅಂತಹ ಸೇವೆ ನೀಡಲಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗುವ ಶ್ರೀಮಂತರು ಕೂಡ ಮುಂದೊಂದು ದಿನ ಸರಕಾರಿ ಆಸ್ಪತ್ರೆಗೆ ಬರುವಂತಹ ವಾತಾವರಣವನ್ನು ಎಲ್ಲ ಸಿಬ್ಬಂದಿ-ಅಧಿಕಾರಿ ವರ್ಗ ಸೃಷ್ಟಿಸಬೇಕು ಎಂದು ರಮೇಶ್ ಕುಮಾರ್ ಕರೆ ನೀಡಿದರು.[1.25ಲಕ್ಷ ಸಂಬಳಕ್ಕೂ ವಿಶೇಷ ವೈದ್ಯರು ಸೇವೆಗೆ ಸಿಗುತ್ತಿಲ್ಲ]

Health minister inaugurates new facilities at Wenlock hospital

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಯೇ ಪ್ರಮುಖವಾದುದು, ಪ್ರಾಮಾಣಿಕವಾಗಿ ರೋಗಿಯ ಆರೈಕೆ, ಸುಶ್ರೂಷೆ ನೀಡುವುದು ಮುಖ್ಯವಾಗಿದೆ. ಒಂದು ವೇಳೆ ನಿರ್ಲಕ್ಷ್ಯ ಅಪ್ರಮಾಣಿಕತೆಯಿಂದ ಪ್ರಾಣ ಕಸಿದರೆ ಅದು ಕೊಲೆ ಮಾಡಿದವನಿಗಿಂತಲೂ ಹೀನ ಕೆಲಸ ಎಂದು ರಮೇಶ್ ಕುಮಾರ್ ನುಡಿದರು.

ಅನಿಯಂತ್ರಿತವಾಗಿ ಔಷಧಗಳ ದರ ನಿಯಂತ್ರಣಕ್ಕಾಗಿ ಜನರಿಕ್ ಔಷಧ ಮಳಿಗೆಗಳನ್ನು ತೆರೆಯಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳುವಂತೆ ಸಚಿವರು ತಿಳಿಸಿದರು.[ಸರ್ಕಾರಿ ಆಸ್ಪತ್ರೆಗೆ ದಾಖಲಾದ ಸಚಿವ ರಮೇಶ್ ಕುಮಾರ್]

Health minister inaugurates new facilities at Wenlock hospital

ಸ್ಪಂದನ ಏಕಗವಾಕ್ಷಿ ಕೇಂದ್ರಕ್ಕೆ ಚಾಲನೆ:
ಕಂದಾಯ ಇಲಾಖೆ ಮತ್ತು ಇತರ ಇಲಾಖೆಗಳ ವಿವಿಧ ಸರಕಾರಿ ಸೇವೆಗಳನ್ನು ಒಂದೇ ಸೂರಿನಡಿ ನೀಡುವ 'ಸ್ಪಂದನ' ಏಕಗವಾಕ್ಷಿ ಕೇಂದ್ರಕ್ಕೆ ದ.ಕ.ಜಿಲ್ಲಾಧಿಕಾರಿ ಕಚೇರಿಯನ್ನು ಆರೋಗ್ಯ ಸಚಿವ ರಮೇಶ್ ಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು.

ಸಾರ್ವಜನಿಕರು ಸರಕಾರದ ವಿವಿಧ ಇಲಾಖೆಗಳ ಸೇವೆಗೆ ಸಂಬಂಧಪಟ್ಟ ಇಲಾಖಾ ಕಚೇರಿಗೆ ಅಲೆದಾಡುವ ಬದಲು ಈ 'ಸ್ಪಂದನ' ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. ಇಲ್ಲಿ ಸಲ್ಲಿಸಿದ ಅರ್ಜಿಗಳು ಸಂಬಂಧಿಸಿದ ಇತರ ಇಲಾಖೆಗಳಿಗೆ ರವಾನೆಯಾಗುವುದು. ಬಳಿಕ ನಿಗದಿತ ಅವಧಿಯಲ್ಲಿ ಪ್ರಮಾಣಪತ್ರ/ ಅನುಮತಿ ಪತ್ರ ದೊರೆಯುವಂತೆ ವ್ಯವಸ್ಥೆ ರೂಪಿಸಲಾಗಿದೆ.ಅಟಲ್‌ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಸಾರ್ವಜನಿಕರಿಗೆ ಸಿಗುತ್ತಿರುವ ಎಲ್ಲ 40 ಸೇವೆಗಳು ಸ್ಪಂದನದಲ್ಲಿ ದೊರೆಯಲಿದೆ.

ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವ, ಕೆ. ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

English summary
Health Minister inaugurates Wenlock ambulance response service, Jana Sanjeevini generic medical store, integrated AYUSH special treatment unit, outpatient X-ray department and renovated cell ward for undertrials at the district Wen lock hospital here on Friday, December 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X