ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೈಟ್ ಹೌಸ್ ಹಿಲ್ ರಸ್ತೆಗೆ ಸುಂದರರಾಮ ಶೆಟ್ಟಿ ಹೆಸರಿಲ್ಲ : ಹೈಕೋರ್ಟ್

|
Google Oneindia Kannada News

ಮಂಗಳೂರು, ಆಗಸ್ಟ್ 17 : ಇಲ್ಲಿನ ಲೈಟ್ ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರಿಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಈ ಮೂಲಕ ಲೈಟ್ ಹಿಲ್ ರಸ್ತೆ ಮರು ನಾಮಕರಣ ವಿವಾದ ಕೊನೆಯಾಗಿದೆ.

ಈ ಹಿಂದೆಯೇ ಲೈಟ್ ಹಿಲ್ ರಸ್ತೆಗೆ ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ಇದೇ ರಸ್ತೆಗೆ ಮುಲ್ಕಿ ಸುಂದರ ರಾಮ ರಸ್ತೆ ಎಂದು ಮರುನಾಮಕರಣ ಮಾಡಲು ಪಾಲಿಕೆ ಮುಂದಾಗಿತ್ತು. ಇದನ್ನು ವಿರೋಧಿಸಿ ಅಲೋಶಿಯಸ್ ಕಾಲೇಜು ಪರವಾಗಿರುವವರು ನಡೆಸಿದ್ದರಿಂದ ಮರು ನಾಮಕರಣಕ್ಕೆ ಸರಕಾರ 2017 ಜುಲೈ 1ರಂದು ತಡೆ ನೀಡಿತ್ತು.

HC rejects the plea of renaming Alyosius college road as Sundraram Shetty Road

ಇದೀಗ ಮರುನಾಮಕರಣವನ್ನು ತಡೆ ಹಿಡಿದಿದ್ದ ಮಹಾನಗರ ಪಾಲಿಕೆಯ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮಂಗಳೂರು ಮಹಾನಗರ ಪಾಲಿಕೆ ಕ್ರಮವನ್ನು ಪ್ರಶ್ನಿಸಿ ವಿಜಯ ಬ್ಯಾಂಕ್ ಉದ್ಯೋಗಿಗಳ ಸಂಘ ಮತ್ತು ಸಂಘದ ಅಧ್ಯಕ್ಷ ಕರುಣಾಕರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಪೀಠ ತಿರಸ್ಕರಿಸಿದೆ.

"ಆರಂಭದಲ್ಲಿ ಮುಲ್ಕಿ ಸುಂದರ ರಾಮ ಶೆಟ್ಟಿ ಎಂದು ನಾಮಕರಣ ಮಾಡಲು ಹೊರಡಿಸಿದ ಆದೇಶ ಆಡಳಿತಾತ್ಮಕ ಆದೇಶವಾಗಿದೆ. ಆಡಳಿತಾತ್ಮಕ ಆದೇಶವನ್ನು ತಡೆ ಹಿಡಿಯುವ ಅಧಿಕಾರ ಮಂಗಳೂರು ಮಹಾನಗರ ಪಾಲಿಕೆ ಮತ್ತು ಸರಕಾರಕ್ಕಿದೆ," ಎಂದು ಹೇಳಿದ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

"ನಗರ ಪಾಲಿಕೆ ಹೊರಡಿಸಿದ ಆದೇಶವು ಶಾಸನಬದ್ಧ ಆದೇಶವಾಗಿದೆ. ಒಮ್ಮೆ ಹೊರಡಿಸಿದ ಶಾಸನಬದ್ಧ ಆದೇಶವನ್ನು ತಡೆಹಿಡಿಯಲಾಗದು," ಎಂದು ಪೀಠ ಅಭಿಪ್ರಾಯಪಟ್ಟಿದೆ.

ಲೈಟ್ ಹೌಸ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡುವಂತೆ ಮಹಾನಗರ ಪಾಲಿಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ ಈ ವಾದವನ್ನು ಕೂಡ ನ್ಯಾಯಪೀಠ ಒಪ್ಪಲಿಲ್ಲ.

English summary
The Karnataka Hight court has rejected the plea of renaming Alyosius college road as Sundraram Shetty Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X