ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ನಗರಕ್ಕೆ ಸಿಸಿಟಿವಿ ಕಣ್ಗಾವಲಿಲ್ಲ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜೂ.30 : ಸರಗಳ್ಳತನ, ಹಿಟ್ ಅಂಡ್ ರನ್ ಕೇಸ್, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ನೆರವು ನೀಡುವುದು ಸಿಸಿಟಿವಿಗಳು. ಆದರೆ, ಮಂಗಳೂರು ನಗರದಲ್ಲಿರುವ ಸಿಸಿಟಿವಿಗಳು ಕೆಲಸ ಮಾಡುತ್ತಿಲ್ಲ ಎಂಬುದು ಜನರ ಆರೋಪ.

ಮಂಗಳೂರು ನಗರದ ಹೃದಯಭಾಗದಲ್ಲಿರುವ ಲಾಲ್ ಬಾಗ್ ವೃತ್ತದಲ್ಲಿರೋ ಸಿಸಿಟಿವಿ ಕ್ಯಾಮರಾದ ಸುತ್ತ ಮರದ ಕೊಂಬೆಗಳು ಹರಡಿಕೊಂಡಿವೆ. ಕ್ಯಾಮರಾ ಜನರ ಕಣ್ಣಿಗೆ ಕಾಣುವುದಿಲ್ಲ. ಈ ಕ್ಯಾಮರಾದಲ್ಲಿ ಎಂತಹ ದೃಶ್ಯಗಳು ಸೆರೆಯಾಗುತ್ತವೆ?. ಇದು ಪೊಲೀಸರಿಗೆ ಹೇಗೆ ನೆರವಾಗುತ್ತದೆ ಎಂಬುದಕ್ಕೆ ಪೊಲೀಸರೇ ಉತ್ತರ ಕೊಡಬೇಕು. [ಬೆಂಗಳೂರು : ಹೊಯ್ಸಳ ಜೀಪಿಗೂ ಬಂತು ಸಿಸಿಟಿವಿ]

cctv

ನಗರದ ಹಲವು ಕಡೆ ಕ್ಯಾಮರಾಗಳು ಮರಗಳ ಎಲೆಗಳಿಂದ ಮುಚ್ಚಿ ಹೋಗಿದ್ದರೆ ಮತ್ತೆ ಕೆಲವು ಕಡೆ ಕಾರ್ಯ ನಿರ್ವಹಿಸುತ್ತಿಲ್ಲ. ಇಂತಹ ಸಿಸಿಟಿವಿಗಳಿಂದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವುದು ಸಾಧ್ಯವಿಲ್ಲ ಎಂದು ಜನರು ಹೇಳುತ್ತಾರೆ. [ಅರಕಲಗೂಡು ಸಂಚಾರಿ ಸುವ್ಯವಸ್ಥೆಗೆ ಕ್ಯಾಮೆರಾ ಕಣ್ಣು]

ನಗರದಲ್ಲಿ ಎಷ್ಟು ಸಿಸಿಟಿವಿಗಳಿವೆ? : ನಗರದಲ್ಲಿ ಮೊದಲ ಬಾರಿಗೆ 2011ರಲ್ಲಿ 33 ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು. ಖಾಸಗಿ ಸಂಸ್ಥೆಯೊಂದು ಇದನ್ನು 1.25 ಕೋಟಿ ಖರ್ಚು ಮಾಡಿ ಆಳವಡಿಸಿತ್ತು. ನಂತರ 2014-15ರಲ್ಲಿ 18 ಕ್ಯಾಮರಾಗಳನ್ನು ಆಳವಡಿಸಲಾಯಿತು. [ಬೆಂಗಳೂರನ್ನು ಕಾಯಲಿವೆ 3,500 ಸಿಸಿ ಕ್ಯಾಮರಾಗಳು]

60 ಅತ್ಯಾಧುನಿಕ ಕ್ಯಾಮರಾ : ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 2016ರೊಳಗೆ ಮಹಾನಗರ ಪಾಲಿಕೆ ಸಹಕಾರದೊಂದಿಗೆ ನಗರದಲ್ಲಿ 60 ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾಗಳನ್ನು ಆಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ.

English summary
Most of the CCTV cameras in Mangaluru city not working properly. Mangaluru police installed 33 cameras in 2011 and 15 cameras in 2014-15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X