ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಶೀಘ್ರವೇ ಹಜ್ ಭವನ ನಿರ್ಮಾಣ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 04 : ಮಂಗಳೂರು ನಗರದಲ್ಲಿ ಶೀಘ್ರವೇ ಹಜ್ ಭವನ ನಿರ್ಮಾಣಗೊಳ್ಳಲಿದೆ. ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್.ರೋಷನ್ ಬೇಗ್ ಭರವಸೆ ನೀಡಿದ್ದಾರೆ.

ಬುಧವಾರ ಮಂಗಳೂರಿನಲ್ಲಿ ಮಾತನಾಡಿದ ರೋಷನ್ ಬೇಗ್ ಅವರು, 'ಹಜ್ ಭವನವನ್ನು ಕೇವಲ ಹಜ್ ಯಾತ್ರೆಯ ಸದರ್ಭದಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿದೆ. ಮಂಗಳೂರಿನಲ್ಲಿ ಹಜ್ ಭವನವನ್ನು ಮದುವೆಗೆ ಹೊರತು ಪಡಿಸಿ ಉಳಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.[ಬೆಂಗಳೂರಲ್ಲಿ ಉದ್ಘಾಟನೆಗೆ ಸಜ್ಜಾದ ಹಜ್ ಘರ್]

Roshan Baig

ಹಜ್ ಭವನ ನಿರ್ಮಾಣಕ್ಕಾಗಿ ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಕೆಂಜಾರುವಿನಲ್ಲಿ ನಿವೇಶನವನ್ನು ಕಾಯ್ದಿರಿಸಲಾಗಿದೆ. ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಸಚಿವರಿಗೆ ಮನವಿ ಮಾಡಿದರು.[ಹಜ್ ಯಾತ್ರಿಗಳು ಶಾಂತಿಯುತ ಸಮಾಜಕ್ಕಾಗಿ ಪ್ರಾರ್ಥಿಸಿ]

ಹಿಂಸೆ ಹೇಳಿಕೊಡುವುದಿಲ್ಲ : ದೇಶ ಹಾಗೂ ವಿದೇಶಗಳಲ್ಲಿ ನಡೆಯುತ್ತಿರುವ ಬಾಂಬ್ ಸ್ಫೋಟ ಪ್ರಕರಣಗಳು, ಭಯೋತ್ಪಾದನಾ ಘಟನೆಗಳ ಬಗ್ಗೆ ಮಾತನಾಡಿದ ಸಚಿವ ರೋಷನ್ ಬೇಗ್ ಅವರು, 'ಇತರ ಧರ್ಮಗಳಂತೆಯೇ ಇಸ್ಲಾಂನಲ್ಲಿಯೂ ಹಿಂಸೆಯನ್ನು ಹೇಳಿಕೊಡುವುದಿಲ್ಲ. ಇಸ್ಲಾಂ ಧರ್ಮ ಶಾಂತಿಯನ್ನು ಪ್ರತಿಪಾದಿಸುವ ಧರ್ಮ. ಹಿಂಸೆಯಲ್ಲಿ ತೊಡಗಿರುವವರು ಯಾವುದೇ ಕಾರಣಕ್ಕೂ ಇಸ್ಲಾಂ ಧರ್ಮದವರಲ್ಲ' ಎಂದರು.

dakshina kannada

ಹಜ್ ಯಾತ್ರೆ ಆರಂಭ : 138 ಯಾತ್ರಾರ್ಥಿಗಳ ಮೊದಲ ತಂಡ ಮಂಗಳೂರು ವಿಮಾನ ನಿಲ್ದಾಣದಿಂದ ಆಗಸ್ಟ್ 4ರಂದು ಹಜ್ ಯಾತ್ರೆಗೆ ತೆರಳಿದೆ. ಮಂಗಳೂರಿನಿಂದ ಐದು ಜಿಲ್ಲೆಗಳ ಒಟ್ಟು 630 ಯಾತ್ರಿಗಳು ಹಜ್‌ಗೆ ತೆರಳಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಯಾತ್ರಾರ್ಥಿಗಳು ಮಂಗಳೂರಿನಿಂದ ಹೊರಡಲಿದ್ದು, 630 ಯಾತ್ರಿಗಳ ಪೈಕಿ 406 ಜನರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ.

English summary
Minister for Urban Development and Haj Roshan Baig said government will release fund for construct Hajj Bhavan in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X