ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವರು ನಮ್ಮೊಳಗೆ ಇದ್ದಾನೆ : ಫಾದರ್ ಫ್ರಾನ್ಸಿಸ್ ಝೇವಿಯರ್

By Prasad
|
Google Oneindia Kannada News

ಸುರತ್ಕಲ್, ಜೂನ್ 27 : "'ದೇವರು ನಮ್ಮೊಳಗೆ ಇದ್ದಾನೆ. ನಾನು ಯಾವ ಕೆಲಸವನ್ನೂ ಮಾಡಬಲ್ಲೆ ಎಂಬ ವಿಶ್ವಾಸ, ನಾನ್ಯಾವತ್ತೂ ಜಯಶೀಲ, ಈ ದಿನ ನನ್ನದು' ಎಂಬ ಭಾರತದ ಶ್ರೇಷ್ಠ ವಿಜ್ಞಾನಿ ಅಬ್ದುಲ್ ಕಲಾಂನಂತೆ ಮಹಾತ್ವಾಕಾಂಕ್ಷೆಯಿಂದ ಬದುಕಿದರೆ ಜೀವನದಲ್ಲಿ ಗೆದ್ದೇ ಗೆಲ್ಲುತ್ತೇವೆ."

ಹೀಗೆಂದು ನುಡಿದವರು ಮೂಲ್ಕಿ ಚರ್ಚ್ ನ ಧರ್ನಗುರುಗಳಾದ ಫಾದರ್ ಫ್ರಾನ್ಸಿಸ್ ಝೇವಿಯರ್ ಗೋಮ್ಸ್. ಅವರು ಕ್ಯಾಥೊಲಿಕ್ ಸಭಾ ಮಂಗಳೂರು ವತಿಯಿಂದ ಸುರತ್ಕಲ್‌ನ ಸೆಕ್ರೆಡ್ ಹಾರ್ಟ್ ಚರ್ಚ್ ಸಭಾಂಗಣದಲ್ಲಿ ಭಾನುವಾರ ನಡೆದ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

God is within us : Rev Francis Xavier Gomes

ವಿಧಾನ ಪರಿಷತ್ ಸದಸ್ಯ, ಮುಖ್ಯ ಸಚೇತಕರಾದ ಐವನ್ ಡಿಸೋಜಾ ಮಾತಾಡಿ, ನಾವು ಸಾಹಸದ ಕೆಲಸವನ್ನು ಮಾಡಬೇಕು. ಯಾಕೆಂದರೆ ಇಂದು ಸಾಧನೆ ಮಾಡಿದವರು ಮಾತ್ರ ಸಾಧಕರಾಗಿದ್ದಾರೆ ಪ್ರತಿಯೋರ್ವರೂ ಸುಖ ದುಃಖ ನೋವು ನಲಿವನ್ನು ಕಂಡಿದ್ದಾರೆ. ಆದರೆ ಪರಿಶ್ರಮದಿಂದ ಯಶಸ್ಸು ಸಾಧಿಸಿದ್ದಾರೆ ಎಂದು ನುಡಿದರು.

ಸುರತ್ಕಲ್ ಬಂಟರ ಭವನದಲ್ಲಿ ವಿದ್ಯಾರ್ಥಿ ವೇತನ ವಿತರಣೆಸುರತ್ಕಲ್ ಬಂಟರ ಭವನದಲ್ಲಿ ವಿದ್ಯಾರ್ಥಿ ವೇತನ ವಿತರಣೆ

ಕಾರ್ಯಕ್ರಮದಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ದಕ್ಷಿಣ ಕನ್ನಡ ಇದರ ಅಧ್ಯಕ್ಷರಾದ ಜೀವನ್ ಸಲ್ಡಾನಾ ಹಾಗೂ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರು ಹೆನ್ರಿ ಬ್ರಿಟ್ಟೋ ಅವರನ್ನು ಸನ್ಮಾನಿಸಲಾಯಿತು.

God is within us : Rev Francis Xavier Gomes

ಸುರತ್ಕಲ್ ವಾರಡೊ ಹಂತದಲ್ಲಿ ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಸರಕಾರಿ ನೌಕರಿ ಹಾಗೂ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಯಿತು. 8, 9, 10 ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಆಯ್ಕೆಯ ತಿಳಿವಳಿಕೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ವಾರಡೊ ವಿಗಾರ್‌ವಾರ್ ಇದರ ಫಾ.ಪಾವ್ಲ್ ಪಿಂಟೋ ವಹಿಸಿದ್ದರು. ಕ್ಯಾಥೊಲಿಕ್ ಸಭಾ ಸುರತ್ಕಲ್ ಆಧ್ಯಾತ್ಮಿಕ ನಿರ್ದೇಶಕರಾದ ಫಾ ಒಲ್ವಿನ್ ಡಿಕುನ್ನಾ ಕಾರ್ಯಕ್ರಮ ಉದ್ಘಾಟಿಸಿದರು.

ಮುಕ್ಕ ಚರ್ಚ್ ಧರ್ಮಗುರುಗಳಾದ ಫಾ. ನೋಬರ್ಟ್ ಲೊಬೋ ಹಾಗೂ ತೋಕೂರು ಚರ್ಚ್ ಧರ್ಮಗುರುಗಳಾದ ಫಾ. ಪೀಟರ್ ಫೆರ್ನಾಂಡಿಸ್ ಸಾಧಕರನ್ನು ಸನ್ಮಾನಿಸಿದರು.

ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಕೇಂದ್ರೀಯ ಅಧ್ಯಕ್ಷರಾದ ಅನಿಲ್ ಲೊಬೋ ಪೆರ್ಮಾಯಿ ಮುಖ್ಯ ಅತಿಥಿಗಳಾಗಿದ್ದರು.

English summary
God is within us. If we have the confidence to do any work, urge to win and if we believe that the day belongs to us, we can succeed, said Rev Francis Xavier Gomes of Mangaluru Discese. He was addressing the students in Suratkal, Dakshina Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X