ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಗದು ರಹಿತ ವಹಿವಾಟಿಗೆ ಕೇಂದ್ರ ಸಚಿವ ಪರಿಕ್ಕರ್ ಕರೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 25: ದೇಶದ ಜನರು ನಗದು ರಹಿತ ವ್ಯವಸ್ಥೆ ಆಳವಡಿಸಿಕೊಳ್ಳಬೇಕು ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಕರೆ ನೀಡಿದರು.

ಭಾನುವಾರ ಮಂಗಳೂರಿನ ಜ್ಯೋತಿಯಲ್ಲಿರುವ ಕೆಎಂಸಿ ಆಸ್ಪತ್ರೆಯ ನೂತನ ಕಟ್ಟಡವನ್ನ ಉದ್ಘಾಟಿಸಿ ಮಾತನಾಡಿದ ಅವರು, ನಗದು ರಹಿತ ಸೇವೆ ಬಳಸಲು ಕರೆ ನೀಡಿದ ಅವರು ಗೋವಾದಲ್ಲಿ 25 ಖಾಸಗಿ ಆಸ್ಪತ್ರೆಗಳು ಈ ಸೇವೆ ಒದಗಿಸುತ್ತಿವೆ. ಇದು ಇನ್ನಷ್ಟು ವ್ಯಾಪಕವಾಗಿ ಪಸರಿಸಬೇಕು ಎಂದರು.

ಅಲ್ಲದೇ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಮುಂದಾಗಬೇಕು ಎಂದು ಹೇಳಿದರು.

Go for the cashless system says defence minister govt of india Manohar Parrikar

ಅಧಿಕ ಮುಖಬೆಲೆಯ ನೋಟು ನಿಷೇಧದಿಂದಾಗಿ ದಿನನಿತ್ಯದ ಖರ್ಚುಗಳಿಗೆ ಹಣದವಿಲ್ಲದೆ ಸಾರ್ವಜನಿಕರು ಪರದಾಡುತ್ತಿರುವುದರಿಂದ ನಗದು ರಹಿತ ವ್ಯವಹಾರವನ್ನೇ ಪ್ರೇರೆಪಿಸಲು ಸರ್ಕಾರ ಹಲವು ಕ್ರಮ ಗಳನ್ನು ಕೈಗೊಳ್ಳುತ್ತಿದೆ.

ಈ ವೇಳೆ ಸಂಸದ ನಳೀನ್ ಕುಮಾರ್ ಕಟೀಲ್, ಮಣಿಪಾಲ ಆಸ್ಪತ್ರೆಯ ಚೇರ್ ಮನ್ ಡಾ. ಸುದರ್ಶನ್ ಬಳ್ಳಾಲ್, ಶಾಸಕ ಲೋಬೋ ಮುಂತಾದವರು ಉಪಸ್ಥಿತರಿದ್ದರು.

English summary
Go for the cashless system says defence minister govt of india Manohar Parrikar during KMC hospital inauguration function at Jyothi, Mangaluru on December 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X