ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಟರ ಸಂಘದ ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ

By Madhusoodhan
|
Google Oneindia Kannada News

ಮಂಗಳೂರು, ಮೇ. 13: ಬಂಟ ಸಮುದಾಯ ಶಿಕ್ಷಣ , ವೈದ್ಯಕೀಯ , ಉದ್ಯಮ, ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ನಾನಾ ಕ್ಷೇತ್ರದಲ್ಲಿ ಸಾಧನೆ ಮೆರೆದು ಸಾಧನಶೀಲ ಸಮಾಜವಾಗಿ ಹೊರಹೊಮ್ಮಿದೆ. ಈ ಮೂಲಕ ಹಿರಿಯರು ಕಟ್ಟಿ ಬೆಳೆಸಿದ ಕನಸನ್ನು ನಿಜಕ್ಕೂ ಸಾಕಾರಗೊಳಿಸಿದಂತಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಎನ್ ವಿನಯ ಹೆಗ್ಡೆ ಹೇಳಿದರು.

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ಗುರುವಾರ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣ ನಿರ್ಮಾಣದ ಶಿಲಾನ್ಯಾಸ ಸಮಾರಂಭದಲ್ಲಿ ನಾಮಫಲಕ ಅನಾವರಣ ಮಾಡಿ ಮಾತನಾಡಿದರು.[ನಿಡ್ಡೋಡಿಯ ರೈತನ ಮಗಳು ಮಿಶಲ್ ಯುಪಿಎಸ್ಸಿ ಸಾಧಕಿ!]

mangaluru

ರಾಜಕೀಯವಾಗಿಯೂ ಬಂಟರು ಬಲಾಢ್ಯವಾಗಿದ್ದಾರೆ. ಹಿಂದುಳಿದ ವರ್ಗ ಎಂಬ ಹಣೆಪಟ್ಟಿಯನ್ನು ಮೀರಿಬೇಳೆದ ಸಮುದಾಯ . ನಾವು ಸಮಾಜದಿಂದ ಪ್ರಯೋಜನ ಪಡೆದುಕೊಂಡ ಮೇಲೆ ಅದನ್ನು ಅರ್ಪಿಸುವ, ಋಣ ತೀರಿಸುವ ಮನೋಭಾವ ಬೆಳೆಸಬೇಕು ಎಂದು ಹೇಳಿದರು.[ಬಿಸಿಲ ಧಗೆಯ ನಡುವೆ ಕರಾವಳಿಗೆ ತಂಪೆರೆದ ವರುಣ]

ಐಜಿಪಿ ಓಂ ಪ್ರಕಾಶ್ ಮಾತನಾಡಿ, ರಾಷ್ಟ್ರದಲ್ಲೇ ಬಂಟ ಸಮುದಾಯ ಪ್ರಗತಿಶೀಲ ಸಮಾಜವಾಗಿ ಮೂಡಿಬಂದಿದೆ. ಈ ರೀತಿ ಐಕ್ಯತೆ ಸರ್ವ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಿದ ಸಮಾಜ ದೇಶದಲ್ಲಿ ಇನ್ನೊಂದು ಇರಲಿಕ್ಕಿಲ್ಲ ಎಂದರು.

ಹೊಸ ಕಟ್ಟಡದ ವಿಶೇಷತೆಗಳು
ಬಂಟರ ಯಾನೆ ನಾಡವರ ಮಾತ್ರ ಸಂಘ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ , ಶತಮಾನದ ಸವಿನೆನಪಿಗಾಗಿ ಯೋಜನೆ ಹಾಕಿಕೊಳ್ಳಲಾಗಿದೆ. ಈ ಸಂಕೀರ್ಣ ಅಂದಾಜು 230 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

2000 ಆಸನದ ಸಭಾಭವನ
ವಿನ್ಯಾಸಕಾರ ಎಸ್ ಕೆಎಸ್ ಸನತ್ ಕುಮಾರ್ ಶೆಟ್ಟಿ ಮಾತನಾಡಿ , ಕಟ್ಟಡದಲ್ಲಿ 2000 ಆಸನ ವ್ಯವಸ್ಥೆಯಿರುವ ಸುಸಜ್ಜಿತ ಸಭಾಭವನ , ಸಭೆ ಸಮಾರಂಭ ಏರ್ಪಡಿಸಲು ಎರಡು ಸಭಾಭವನ ನಿರ್ಮಾಣವಾಗಲಿದೆ. 1250 ರಷ್ಟು ವಾಹನ ನಿಲುಗಡೆಗೆ ವಿಸ್ತಾರವಾದ ಅವಕಾಶ , 4 ನೇ ಮಹಡಿಯಲ್ಲಿ 50 ಸಾವಿರ ಚದರ ಅಡಿಯಷ್ಟು ಓಪನ್ ಟೆರೇಸ್, ಸುಮಾರು ಆರು ಲಕ್ಷ ಚದರ ಅಡಿ ವಾಣಿಜ್ಯ ಸಂಕೀರ್ಣ ಹಾಗೂ ವಿಶ್ವ ದರ್ಜೆಯ ಜಿಮ್ ಮತ್ತು ಕ್ಲಬ್ ಇರುತ್ತದೆ ಎಂದರು.

ದಕ ಜಿಲ್ಲಾ ಉಸ್ತುವಾರಿ ಸಚಿವ ರಾಮನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಶಕುಂತಲಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ , ಮಾಜಿ ಸಚಿವ ನಾಗರಾಜ ಶೆಟ್ಟಿ, ಮಂಗಳೂರು ಪೊಲೀಸ್ ಕಮಿಷನರ್ ಚಂದ್ರಶೇಖರ್, ಎಸ್ ಪಿ ಎಸ್ . ಡಿ. ಶರಣಪ್ಪ , ಎಂಆರ್ಜಿ ಗ್ರೂಪ್ ಚೇರ್ಮನ್ ಪ್ರಕಾಶ್ ಶೆಟ್ಟಿ , ಮುಂಬಯಿ ಬಂಟರ ಸಂಘದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಕರ್ನಿರೆ, ಡಾ. ಎಜೆ. ಶೆಟ್ಟಿ ಮಾತನಾಡಿ ಹಾಜರಿದ್ದರು.

ಬ್ರಿಗೇಡಿಯರ್ ಐ, ಎನ್. ರೈ, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಮೇರ್ಕಳ ತ್ಯಾಂಪಣ್ಣ ಶೆಟ್ಟಿ, ಕೊಲ್ಲೂರು ಮೂಕಾಂಬಿಕ ದೇವಳ ಮಾಜಿ ಆಡಳಿತ ಮೋಕೆಸ್ತರ ಅಪ್ಪಣ್ಣ ಹೆಗ್ಡೆ, ಉದ್ಯಮಿ ಪದ್ಮನಾಭ , ಡಾ. ಆಶಾಜ್ಯೋತಿ ರೈ, ಪ್ರೇಮಲತಾ ಸತೀಶ್ಚಂದ್ರ ಹೆಗ್ಡೆ, ಲತಾ ಜಯರಾಮ ಶೆಟ್ಟಿ, ಆಶಾ ಮನೋಹರ ಹೆಗ್ಡೆ , ಮಂಜುಳಾ ಶೆಟ್ಟಿ ಹಾಗೂ ನಾನಾ ಬಂಟ ಸಂಘಗಳ ಪದಾಧಿಕಾರಿಗಳು, ಬಂಟರ ಯಾನೆ ನಾಡವರ ಮಾತೃ ಸಂಘದ ಜತೆ ಕಾರ್ಯದರ್ಶಿ ಹೇಮನಾಥ ಶೆಟ್ಟಿ, ನವೀನ್ ಶೆಟ್ಟಿ ಮತ್ತು ರಾಜೇಶ್ವರಿ ಶೆಟ್ಟಿ ಇದ್ದರು. ಎಸ್ ಕೆಎಸ್ ಸನತ್ ಕುಮಾರ್ ಶೆಟ್ಟಿ ಮತ್ತು ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದ ನಿವ್ಯಾ ಪಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

English summary
Mangaluru: The foundation laying ceremony for the centenary complex of Bantara Yane Nadavara Mathru Sangha held on Bunts hostel premises Mangaluru on Thursday, May 12, 2016. Complex will be constructed at an estimated cost of Rs 230 crore. Bantara Yane Nadavara Mathru Sangha leaders witnessed this event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X