ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸಂಸದೆ ರಮ್ಯಾ ಕಾರಿಗೆ ಹಿಂದೂ ಸಂಘಟನೆಗಳಿಂದ ಮುತ್ತಿಗೆ

By Mahesh
|
Google Oneindia Kannada News

ಮಂಗಳೂರು, ಆಗಸ್ಟ್ 25: 'ಪಾಕಿಸ್ತಾನ ನರಕವಲ್ಲ' ಎಂದು ಹೇಳಿರುವ ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ ವಿರುದ್ಧ ಮಂಗಳೂರಿನಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬಜ್ಪೆ ವಿಮಾನ ನಿಲ್ದಾಣದ ಬಳಿ ರಮ್ಯಾ ಅವರಿದ್ದ ಕಾರಿಗೆ ಮುತ್ತಿಗೆ ಹಾಕಲಾಗಿದ್ದು, ಪ್ರತಿಭಟನೆ ಮುಂದುವರೆದಿದೆ.

ಕದ್ರಿಯಲ್ಲಿ ಆಯೋಜನೆಗೊಂಡಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಮ್ಯಾ ಅವರು ಮಂಗಳೂರಿಗೆ ಗುರುವಾರ ಆಗಮಿಸಿದ್ದರು. ಬಜ್ಪೆ ವಿಮಾನ ನಿಲ್ದಾಣದಲ್ಲೇ ಮೊಟ್ಟೆ ಎಸೆದು ಸ್ವಾಗತಿಸಲಾಯಿತು.['ರಮ್ಯಾ ಹೇಳಿಕೆಯಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ']

Former MP Ramya's car attacked in Kenjaru Mangaluru

ಬಜ್ಪೆ ವಿಮಾನ ನಿಲ್ದಾಣದಿಂದ ನಗರದ ಕಡೆಗೆ ತೆರಳುತ್ತಿದ್ದ ರಮ್ಯಾ ಅವರಿದ್ದ ಕಾರಿಗೆ ಮುತ್ತಿಗೆ ಹಾಕಲಾಯಿತು. ರಸ್ತೆ ಮೇಲೆ ಮಲಗಿದ ಪ್ರತಿಭಟನಾಕಾರರು ಕಾರನ್ನು ಕೆಲಕಾಲ ತಡೆದರು. ಪೊಲೀಸರ ಮಧ್ಯ ಪ್ರವೇಶದಿಂದ ಈಗ ಕಾರು ಕದ್ರಿ ಕಡೆಗೆ ಹೊರಟಿದೆ.[ಪಾಕಿಸ್ತಾನ ನರಕವಲ್ಲ, ನನ್ನ ಹೇಳಿಕೆ ಬದ್ಧಳಾಗಿದ್ದೇನೆ: ರಮ್ಯಾ ಲೇಖನ]

Former MP Ramya's car attacked in Kenjaru Mangaluru

ಬಿಜೆಪಿ ಬೆಂಬಲಿತ ಹಿಂದೂ ಪರ ಸಂಘಟನೆಗಳು ವಿಮಾನ ನಿಲ್ದಾಣದಿಂದ ನಗರಕ್ಕೆ ತೆರಳುವ ಮಾರ್ಗದ ಹಲವೆಡೆ ಕಪ್ಪು ಪಟ್ಟಿ ಧರಿಸಿ ರಮ್ಯಾಗೆ ಧಿಕ್ಕಾರ ಕೂಗುತ್ತಿದ್ದಾರೆ.


ಪಾಕಿಸ್ತಾನದ ಬಗ್ಗೆ ನೀಡಿರುವ ಹೇಳಿಕೆ ಸಮರ್ಥಿಸಿಕೊಳ್ಳುವ ಭರದಲ್ಲಿ ರಮ್ಯಾ ಅವರು ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡುತ್ತಾ, ಮಂಗಳೂರು ಕೂಡಾ ನರಕ ಎಂದು ಹೇಳಿದ್ದರು ಎಂಬುದು ಕುಡ್ಲದ ಹಿಂದೂ ಹೋರಾಟಗಾರರ ಆರೋಪ.[ನಾನು ದೇಶದ್ರೋಹಿಯಲ್ಲ, ನಾನು ಕ್ಷಮೆಯಾಚಿಸಲ್ಲ : ರಮ್ಯಾ]

English summary
Former MP Ramya's car attacked in Bajpe airport by pro Hindu organisation in Mangaluru. Ramya is due to attend Sri Krishna Janmashtami celebration at Kadri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X