ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ನಗರಕ್ಕೆ ಕಾಲಿಟ್ಟ ಇ-ಟಾಯ್ಲೆಟ್ ಸೌಲಭ್ಯ

ಎಚ್‌ಪಿಸಿಎಲ್‌ನ ಸಿಎಸ್‌ಆರ್ ನಿಧಿಯಿಂದ ಮತ್ತು ಮನಪಾ ವತಿಯಿಂದ ತಲಾ ಸುಮಾರು ಆರೂವರೆ ಲಕ್ಷ ರೂ. ವೆಚ್ಚದಲ್ಲಿ ನಗರದಲ್ಲಿ ಐದು ಕಡೆಗಳಲ್ಲಿ ನಿರ್ಮಾಣಗೊಂಡ ಇ-ಟಾಯ್ಲೆಟ್‌ಗಳು ಇಂದು ಲೋಕಾರ್ಪಣೆಗೊಂಡವು.

|
Google Oneindia Kannada News

ಮಂಗಳೂರು, ಜುಲೈ 11: ಎಚ್‌ಪಿಸಿಎಲ್‌ನ ಸಿಎಸ್‌ಆರ್ ನಿಧಿಯಿಂದ ಮತ್ತು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ತಲಾ ಸುಮಾರು ಆರೂವರೆ ಲಕ್ಷ ರೂ. ವೆಚ್ಚದಲ್ಲಿ ನಗರದಲ್ಲಿ ಐದು ಕಡೆಗಳಲ್ಲಿ ನಿರ್ಮಾಣಗೊಂಡ ಇ-ಟಾಯ್ಲೆಟ್‌ಗಳು ಜುಲೈ 11ರಂದು ಲೋಕಾರ್ಪಣೆಗೊಂಡವು.

ಟಾಯ್ಲೆಟ್‌ಗಳನ್ನು ನಗರದ ಲಾಲ್‌ಬಾಗ್ ಬಸ್ ನಿಲ್ದಾಣ ಬಳಿ ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ನಗರದಲ್ಲಿ ಇದೇ ಮಾದರಿಯ ಇನ್ನಷ್ಟು ಟಾಯ್ಲೆಟ್‌ಗಳು ನಿರ್ಮಾಣವಾಗಬೇಕಾದ ಅಗತ್ಯವಿದೆ ಎಂದರು.

Five E-Toilets launched in Mangaluru city

ತಿರುವನಂತಪುರದ ಇರಂ ಸೈಂಟಿಫಿಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಕುಮಾರ್ ಮಾತನಾಡಿ, ಇರಂ ಸೈಂಟಿಫಿಕ್ ಪ್ರೈ.ಲಿ. ಮೂಲಕ ನಿರ್ಮಾಣಗೊಂಡಿರುವ ಈ ಇ-ಟಾಯ್ಲೆಟ್‌ಗಳು ಡಿಜಿಟಲ್ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ. ಜನರು ಒಂದು ರು., 2 ರು., 5 ರು. ನಾಣ್ಯಗಳನ್ನು ಬಳಸಿ ಟಾಯ್ಲೆಟನ್ನು ಬಳಸಬಹುದು. ಈ ಟಾಯ್ಲೆಟ್‌ನಲ್ಲಿ ಕನಿಷ್ಠ ನೀರಿನ ಬಳಕೆ, ನಿಗದಿಪಡಿಸಿದ ಸಮಯ ಹಾಗೂ ಸಮರ್ಪಕವಾದ ನಿರ್ವಹಣೆ ಇರುತ್ತದೆ ಎಂದವರು ತಿಳಿಸಿದರು.

ಎಚ್‌ಪಿಸಿಎಲ್‌ನ ಸಿಎಸ್‌ಆರ್ ನಿಧಿಯಿಂದ ಮತ್ತು ಮನಪಾ ವತಿಯಿಂದ ತಲಾ ಸುಮಾರು ಆರೂವರೆ ಲಕ್ಷ ರೂ. ವೆಚ್ಚದಲ್ಲಿ ಈ ಟಾಯ್ಲೆಟ್ ನಿರ್ಮಿಸಲಾಗಿದೆ. ಈ ಪೈಕಿ ಲಾಲ್‌ಭಾಗ್‌ನಲ್ಲಿ 2, ಕದ್ರಿಯಲ್ಲಿ 2 ಮತ್ತು ಹಂಪನಕಟ್ಟೆಯ ಬಳಿ ಒಂದು ಟಾಯ್ಲೆಟನ್ನು ಸಾರ್ವಜನಿಕ ಸೇವೆಗೆ ಬಳಸಲು ಇಂದು ಉದ್ಘಾಟಿಸಲಾಯಿತು ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ಮನಪಾ ಉಪ ಮೇಯರ್ ರಜನೀಶ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮನಪಾ ಸದಸ್ಯರಾದ ಪ್ರತಿಭಾ ಕುಳಾಯಿ, ಮತ್ತಿತರು ಉಪಸ್ಥಿತರಿದ್ದರು.

English summary
5 E-Toilets launched in major places of Mangaluru city. The estimated cost of this is said to be about 6 lakhs. The launching ceremony took place by J R Lobo at Lalbagh of Mangaluru on july 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X