ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಾಪುರದಲ್ಲಿ ಹೊತ್ತಿ ಉರಿದ ಹಾರ್ಡ್‌ವೇರ್ ಅಂಗಡಿ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಕುಂದಾಪುರ, ಅಕ್ಟೋಬರ್ 10 : ಕುಂದಾಪುರ ತಾಲೂಕಿನ ಕೊಲ್ಲೂರು-ಕುಂದಾಪುರ ರಾಜ್ಯ ಹೆದ್ದಾರಿಯ ಇಡೂರು ಎಂಬಲ್ಲಿ ಹಾರ್ಡ್‌ವೇರ್ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅಂಗಡಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಈ ಬೆಂಕಿ ಆಕಸ್ಮಿಕದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಶುಕ್ರವಾರ ರಾತ್ರಿ ಹಾರ್ಡ್‌ವೇರ್ ಅಂಗಡಿಗೆ ತಗುಲಿದ ಬೆಂಕಿ ಅಕ್ಕಪಕ್ಕದ ದಿನಸಿ ಅಂಗಡಿ ಹಾಗೂ ಎರಡು ಬಾಡಿಗೆ ಮನೆಗಳಿಗೂ ಹಬ್ಬಿದ್ದು ಭಾರೀ ನಷ್ಟ ಉಂಟಾಗಿದೆ. ಈ ಹಾರ್ಡ್‌ವೇರ್ ಅಂಗಡಿ ಭಾಸ್ಕರ್ ಶೆಟ್ಟಿ ಎನ್ನುವವರಿಗೆ ಸೇರಿದ್ದಾಗಿದೆ. [ಕುಂದಾಪುರಕ್ಕೆ ಫ್ಲೈ ಬಸ್ ಸೇವೆ ವಿಸ್ತರಣೆ]

kundapur

ಮೊದಲು ಹಾರ್ಡ್‌ವೇರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು ಅಂಗಡಿಯಲ್ಲಿ ಪೇಂಯಿಂಟ್ ಮತ್ತು ಇತರ ರಾಸಾಯನಿಕ ವಸ್ತುಗಳು ಇದಿದ್ದರಿಂದ ಬೆಂಕಿ ಶೀಘ್ರದಲ್ಲಿಯೇ ಅಂಗಡಿ ಮತ್ತು ಅಕ್ಕಪಕ್ಕದ ಅಂಗಡಿಗಳಿಗೆ ವ್ಯಾಪಿಸಿದೆ. [ಕುಂದಾಪುರದಲ್ಲಿ ಯುವತಿ ಮೇಲೆ ಅತ್ಯಾಚಾರ, ಕೊಲೆ]

ಬೆಂಕಿಯ ಬಗ್ಗೆ ಮಾಹಿತಿ ತಿಳಿದ ಜನರು ಕುಂದಾಪುರ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದರು. ಅಗ್ನಿಶಾಮಕದಳಸ ಸಿಬ್ಬಂದಿ ಬರುವ ವೇಳೆಗಾಗಲೇ ಅಂಗಡಿ ಭಾಗಶಃ ಸುಟ್ಟು ಕರಕಲಾಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

district news

ಉಡುಪಿಯಲ್ಲಿ ಪೊಲೀಸ್ ಪೇದೆ ಮೇಲೆ ಹಲ್ಲೆ : ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಉಡುಪಿ ನಗರ ಪೊಲೀಸ್ ಠಾಣೆಯ ಪೇದೆಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಿಚಾರಿಸಲು ಮುಂದಾದಾಗ ಆತ ಪರಾರಿಯಾಗಲು ಯತ್ನಿಸಿದ್ದಾನೆ.

ಆಗ ಹಿಡಿಯಲು ಪ್ರಯತ್ನ ನಡೆಸಿದಾಗ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಗೊಳಗಾದ ಪೇದೆಯನ್ನು ಉಡುಪಿ ನಗರ ಠಾಣೆಯ ಗಣೇಶ್‌ (28) ಎಂದು ಗುರುತಿಸಲಾಗಿದೆ. ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Fire accident at Kundapur : Fire broke out in a hardware shop in Patel Complex at Idoor-Kunhady near Kollur on Friday night. Valuable items stored in the stop, estimated worth of which happens to be Rs 40 lakh were turned into ashes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X