ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತಮೂರ್ತಿ ಮೂತ್ರ ಮಾಡಿದ 'ದೇವರ ಕಲ್ಲು' ಪತ್ತೆ

By Mahesh
|
Google Oneindia Kannada News

ಮಂಗಳೂರು, ಜೂ.20: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್ ಆನಂತಮೂರ್ತಿ ಅವರ ಲೇಖನವೊಂದರಲ್ಲಿರುವ ವಿವಾದಿತ 'ದೇವರ ಕಲ್ಲು' ಪತ್ತೆಯಾಗಿದೆ. ಈ ದೇವರ ಕಲ್ಲು ಕುಡ್ಲದ ಆರಾಧ್ಯ ದೈವ ಪಂಜುರ್ಲಿ ಭೂತದ ಕಲ್ಲೇ ಆಗಿದೆ. ನಮ್ಮ ದೈವಕ್ಕೆ ಅವಮಾನ ಮಾಡಿರುವ ಯು.ಆರ್ ಅನಂತಮೂರ್ತಿ ಅವರ ಮೇಲೆ ಕ್ರಮ ಜರುಗಿಸಿ ಎಂದು ಇಲ್ಲಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಡಾ.ಯು.ಆರ್‌.ಅನಂತಮೂರ್ತಿ 'ಬೆತ್ತಲೆ ಪೂಜೆ ಏಕೆ ಕೂಡದು?' ಎಂಬ ಕೃತಿಯ ಬರಹವನ್ನು ಉಲ್ಲೇಖಿಸಿ ಹಿಂದುಗಳ ಭಾವನೆಗಳನ್ನು ಘಾಸಿಗೊಳಿಸುವಂತಹ ಹೇಯ ಹೇಳಿಕೆಯನ್ನು ನೀಡಿದ ಎಂ.ಎಂ.ಕಲಬುರ್ಗಿ ಅವರನ್ನು ಕೂಡಲೇ ಬಂಧಿಸಿ ಗಡೀಪಾರು ಮಾಡಬೇಕೆಂದು ಹಿಂದುಪರ ಸಂಘಟನೆಗಳು ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿವೆ.

ಈ ರೀತಿ ಶಾಂತಿ ಕದಡುವ ಲೇಖನ, ಹೇಳಿಕೆಗಳನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗ ಮಾಡುತ್ತಿರುವ ಈ ಸಾಹಿತಿಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಎಂದು ಆಗ್ರಹಿಸಿ ಪುನೀತ್ ಕೊಠಾರಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

Mangalore : FIR filed against UR Ananthamurthy in Bunder Police Station

ಎಫ್ ಐಆರ್ ದಾಖಲು: ಪುನೀತ್ ಅವರು ನೀಡಿರುವ ದೂರನ್ನು ಸ್ವೀಕರಿಸಿರುವ ಪೊಲೀಸರು ಯು.ಆರ್ ಅನಂತಮೂರ್ತಿ ಅವರ ಮೇಲೆ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಚಿಕ್ಕಮಗಳೂರಿನ ಬಾಳೆಹೊನ್ನೂರು, ಗುಲ್ಬರ್ಗಾ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಯು.ಆರ್ ಅನಂತಮೂರ್ತಿ ಅವರ ಮೇಲೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. [ಎಫ್ಐಆರ್ ವಿವರ ಇಲ್ಲಿ ಓದಿ]

ಇತ್ತೀಚೆಗೆ ಬೆಂಗಳೂರಿನ ಟೌನ್ ಹಾಲ್ ಬಳಿ ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌ ಮತ್ತು ಹಿಂದೂ ಜಾಗರಣ ವೇದಿಕೆಯ ಕಾರ್ಯ‌ಕರ್ತರು ಪಿಂಡ ಪ್ರದಾನ ಮಾಡಿ ಎಂ.ಎಂ.ಕಲಬುರ್ಗಿ ಮತ್ತು ಅನಂತ ಮೂರ್ತಿ‌ಯವರ ಪ್ರತಿಕೃತಿಯನ್ನು ದಹಿಸುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದರು. [ದೇವರ ಬಗ್ಗೆ ಕಲಬುರ್ಗಿ‌ ಹೇಳಿದ್ದೇನು?]

English summary
Mangalore: First Information Report filed against Dr. U.R Ananthamurthy in Bunder police station today. Prof MM Kalburgi recently said that UR Ananthamurthy, in his young days, had urinated on a sacred stone. The sacred stone is found to be Panjurli Bhuta local God.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X