ಮಂಗಳೂರಿನಲ್ಲಿ ಇಂದು ದೇಸಿ ರಾಖಿ ಗಳಿಗೆ ಹೆಚ್ಚಿನ ಬೇಡಿಕೆ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 7: ರಕ್ಷಾ ಬಂಧನದ ಪ್ರಯುಕ್ತ ಇಂದು ನಗರದ ಫ್ಯಾನ್ಸಿ ಅಂಗಡಿಗಳಲ್ಲಿ ರಾಖಿ ವ್ಯಾಪಾರ ಭರದಿಂದ ಸಾಗಿದ್ದು ದೇಸಿ ರಾಖಿಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ.

ರಕ್ಷಾಬಂಧನವೆಂಬ ಪವಿತ್ರ ಬೆಸುಗೆ: ಏನಿದರ ಮಹತ್ವ?

ಗ್ರಾಹಕರು ಚೀನಾ ಉತ್ಪನ್ನ ತಿರಸ್ಕರಿಸುವ ಮುನ್ಸೂಚನೆ ತಿಳಿದ ವ್ಯಾಪಾರಿಗಳು ಈ ಬಾರಿ ಚೀನಾ ರಕ್ಷೆ ತರಿಸಿಕೊಳ್ಳದೆ ಹಳೆ ಸ್ಟಾಕ್ ಗಳನ್ನು ಮಾತ್ರ ಖಾಲಿ ಮಾಡುತ್ತಿದ್ದಾರೆ. ಹೊಸತಾಗಿ ಭಾರತದಲ್ಲಿ ತಯಾರಿಸಿದ ರಾಖಿಯನ್ನು ತರಿಸಿಕೊಂಡಿದ್ದಾರೆ.

Fancy stores in Mangaluru says goodbye to Chinese Raksha Bandhan

ಸಾಮಾನ್ಯವಾಗಿ ಚೀನಾ ಉತ್ಪನ್ನಕ್ಕೆ ದರ ಕಡಿಮೆ. ಚೀನಾಕ್ಕಿಂತ ಭಾರತೀಯ ರಕ್ಷೆಗೆ ಮೂರು ಪಟ್ಟು ದರ ಹೆಚ್ಚಾಗಿದ್ದರೂ ಗ್ರಾಹಕರು ಚೀನಾ ರಾಖಿಗಳನ್ನು ತರಸ್ಕರಿಸುತ್ತಿದ್ದಾರೆ.

ನರೇಂದ್ರ ಮೋದಿಯವರ ರಾಖಿ ಸಹೋದರಿ ಯಾರು ಗೊತ್ತಾ..?

ಖರೀದಿ ಮಾಡುವವರಲ್ಲಿ ಹೆಣ್ಣು ಮಕ್ಕಳು ಹೆಚ್ಚು; ಹೀಗಾಗಿ ಚೀನಾ ರಾಖಿಗಳನ್ನು ಇವರೇ ನೇರವಾಗಿ ಬಹಿಷ್ಕರಿಸಿದ್ದಾರೆ. ಹೀಗಾಗಿ 'ನಾವು ಸಹ ದೇಸಿ ರಕ್ಷೆಯನ್ನು ಮಾರಾಟ ಮಾಡುತ್ತಿದ್ದೇವೆ,' ಎಂದು ಹೇಳುತ್ತಾರೆ ಮಂಗಳೂರಿನ ಫ್ಯಾನ್ಸಿ ಸ್ಟೋರ್ನ ನ ಮಾಲಕರೊಬ್ಬರು.

ಕೆಲವು ಸಂಘಟನೆಗಳು ಚೀನಾ ರಾಖಿ ಉತ್ಪನ್ನ ತಿರಸ್ಕರಿಸುವಂತೆ ಕರೆ ಕೊಟ್ಟಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹೊರಡಿಸುವ ಮೂಲಕ ದೇಶ ರಕ್ಷಣೆಗಾಗಿ ದೇಸಿ ರಾಖಿ ಖರೀದಿಸಿ ಎಂಬ ಜಾಗೃತಿಯನ್ನು ಹಲವರು ಮೂಡಿಸಿದ್ದರಿಂದ ಚೀನಾ ರಾಖಿಗಳನ್ನು ಜನ ನಿರಾಕರಿಸಿದ್ದಾರೆ.

"ವಿವಿಧ ಬಣ್ಣದ ರೆಕ್ಕೆ ಪುಕ್ಕಗಳನ್ನು ಹೊಂದಿರುವ ಹಲವು ವಿನ್ಯಾಸದ ಪ್ಲಾಸ್ಟಿಕ್ ರಾಖಿ ಗಳಿಗಿಂತ ದೇಸಿಯ ರಾಖಿಗಳನ್ನು ಜನ ನೆಚ್ಚಿಕೊಂಡಿದ್ದಾರೆ. ಬಟ್ಟೆಯ ರಕ್ಷೆ, ಆರ್ಟಿಫಿಷಿಯಲ್ ಮುತ್ತುಗಳ ರಾಖಿ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಗ್ರಾಹಕರು ಇದನ್ನು ದೇಶಿಯ ರಾಖಿ ಎಂದೇ ಹೆಚ್ಚು ಖರೀದಿಸುತ್ತಾರೆ. ಇದಕ್ಕಿಂತ ಹೆಚ್ಚಾಗಿ ಆನ್ ಲೈನ್ ಮಾರಾಟ ಸಂಸ್ಥೆಗಳು ರಾಖಿಯನ್ನು ಮಾರಾಟ ಮಾಡುವ ಮೂಲಕ ಸಣ್ಣ ಅಂಗಡಿ ಫ್ಯಾನ್ಸಿ ಶಾಪ್ ನವರಿಗೆ ನಷ್ಟ ಉಂಟಾಗುತ್ತಿದೆ," ಎನ್ನುವುದು ನಗರದ ಫ್ಯಾನ್ಸಿ ಶಾಪ್ ಮಾಲಿಕರೊಬ್ಬರ ಮಾತು.

Raksha Bandhan festival significance | Watch video

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fancy stores in Mangaluru says goodbye to Chinese Raksha Bandhan. The demand for Indian Raksha Bandhan have gone high this time says owners of fancy shops.
Please Wait while comments are loading...