ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎತ್ತಿನಹೊಳೆ 2 ವರ್ಷದಲ್ಲಿ ಪೂರ್ಣ: ವೀರಪ್ಪ ಮೊಯ್ಲಿ

|
Google Oneindia Kannada News

ಮಂಗಳೂರು, ಜ. 25 : ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ನಡೆಯುತ್ತಿದ್ದು, ಎರಡು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಸಂಸದ ಎಂ. ವೀರಪ್ಪ ಮೊಯ್ಲಿ ತಿಳಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಭೂಸ್ವಾಧೀನ ತಿದ್ದುಪಡಿ ಸುಗ್ರೀವಾಜ್ಞೆ ವಿರುದ್ಧ ನಾವು ವಿವಿಧೆಡೆ ಹೋರಾಟ ನಡೆಸುತ್ತಿಲ್ಲ. ಕರ್ನಾಟಕದಲ್ಲಿ ಅದನ್ನು ಜಾರಿಗೆ ತಾರದಿರಲು ನಿರ್ಧರಿಸಲಾಗಿದೆ. ಕೃಷಿ ಭೂಮಿಯನ್ನು ತಮ್ಮಿಚ್ಛೆಯಂತೆ ಸ್ವಾಧೀನ ಮಾಡುವ ತಿದ್ದುಪಡಿ ಕಾನೂನನ್ನು ಒಪ್ಪಲು ಸಾಧ್ಯವಿಲ್ಲ ಎಂದರು.[ಎತ್ತಿನ ಹೊಳೆ ಶಂಕುಸ್ಥಾಪನೆ ಗಿಮಿಕ್ : ದೇವೇಗೌಡ]

mangaluru

ಭ್ರಮನಿರಸನಗೊಳಿಸಿದ ಆಡಳಿತ: ಕೇಂದ್ರ ಸರ್ಕಾರದ ಎಂಟು ತಿಂಗಳ ಆಡಳಿತದಿಂದ ಜನರು ಭ್ರಮನಿರಸನಗೊಂಡಿದ್ದು, ಲೋಕಸಭೆ ಚುನಾವಣೆ ವೇಳೆ ಇದ್ದ ನರೇಂದ್ರ ಮೋದಿ ವರ್ಚಸ್ಸು ಈಗ ಕುಂಠಿತಗೊಂಡಿದೆ ಎಂದು ಸಂಸದ ಎಂ. ವೀರಪ್ಪ ಮೊಯ್ಲಿ ಹೇಳಿದರು.

ಬಿಜೆಪಿ ಮೋದಿ ವರ್ಚಸ್ಸು ಹಿಡಿದುಕೊಂಡು ಸವಾರಿ ಮಾಡುತ್ತಿದ್ದರೆ, ಹಿಂದಿನ ಬಾರಿ ಜನಲೋಕಪಾಲ್ ಮತ್ತಿತರ ವಿಷಯ ಹಿಡಿದು ಅಧಿಕಾರಕ್ಕೆ ಬಂದರೂ ಆಡಳಿತ ನಡೆಸಲಾಗದ ಆಮ್ ಆದ್ಮಿ ಬಗ್ಗೆಯೂ ಜನರು ಬೇಸತ್ತಿದ್ದಾರೆ. ಹೀಗಾಗಿ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಗೆಲುವು ಸಿಗಲಿದೆ ಎಂದು ಹೇಳಿದರು.[ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗಾಗಿ ಮಾತ್ರ]

ಮರೆಯಾದ ಜನಪರ ಕಾಳಜಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದ್ದರೂ, ಎಲ್ಲ ಲಾಭ ನೇರವಾಗಿ ಜನರಿಗೆ ತಲುಪುತ್ತಿಲ್ಲ. ವಿವಿಧ ತೆರಿಗೆ ವಿಧಿಸಿ ಜನರನ್ನು ವಂಚಿಸಲಾಗಿದೆ. ತೈಲ ಕ್ಷೇತ್ರದಲ್ಲಿ ಸ್ವಾವಲಂಬಿ ಆಗಬೇಕು ಎಂಬ ತನ್ನ ಕನಸು ಸಾಕಾರಕ್ಕೂ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಪೆಟ್ರೋಲ್, ಡೀಸೆಲ್ ದರ ಇಳಿಕೆಯಿಂದ ಮುಖ್ಯವಾಗಿ ಆಹಾರ ಧಾನ್ಯ ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಇಳಿಕೆ ಆಗಬೇಕಿತ್ತು. ಆದರೆ, ದೇಶದ ಆರ್ಥಿಕ ಸ್ಥಿತಿ ಕುಸಿತದ ಹಂತದಲ್ಲಿದೆ. ಇದನ್ನು ತಡೆಯಲು ಪ್ರಧಾನಿಗೆ ಸಮಯವಿಲ್ಲ. ಅವರು ವಿದೇಶ ಯಾತ್ರೆ, ಅತಿಥಿಗಳ ಸ್ವಾಗತದಲ್ಲಿ ತಲ್ಲೀನರಾಗಿದ್ದಾರೆ. ಆಂತರಿಕ ಹಣಕಾಸು ವ್ಯವಸ್ಥೆ, ಉದ್ಯಮಗಳು, ಉತ್ಪನ್ನಗಳ ಹೆಚ್ಚಳಕ್ಕೆ ಆದ್ಯತೆ ಕೊಡಬೇಕು ಎಂದು ಲೋಕಸಭೆ ಹಣಕಾಸು ಸಮಿತಿ ಅಧ್ಯಕ್ಷರೂ ಆಗಿರುವ ವೀರಪ್ಪ ಮೊಯ್ಲಿ ಹೇಳಿದರು.

ಸಿದ್ದರಾಮಯ್ಯ ತಪ್ಪಿಲ್ಲ: ಅರ್ಕಾವತಿ ಡಿನೋಟಿಫೈ ಆರೋಪ ಕುರಿತು ಸಿಎಂ ಸಿದ್ದರಾಮಯ್ಯ ಈಗಾಗಲೇ ನ್ಯಾಯಾಂಗ ವಿಚಾರಣೆ ಮಾಡಲು ಸೂಚಿಸಿದ್ದಾರೆ. ಅದರ ನಂತರವೂ ಸಿಬಿಐ ತನಿಖೆ ನಡೆಯಬೇಕು ಎಂಬ ಬಿಜೆಪಿ ಆಗ್ರಹದಲ್ಲಿ ಅರ್ಥವಿಲ್ಲ. ಸಿಬಿಐ ತಮ್ಮ ಕೈಗೊಂಬೆ ಎಂಬ ಭ್ರಮೆ ಬಿಜೆಪಿಯದ್ದು. ನ್ಯಾಯಾಂಗ ಮಾತ್ರ ಸ್ವತಂತ್ರ ಸಂಸ್ಥೆ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

English summary
Mangaluru: Ettina Hole drinking water project complete before 2 months, said MP Veerappa Moily, on Sunday, at Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X