ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಫೆಬ್ರವರಿ 20ಕ್ಕೆ ' ರಂಗಪಯಣ 2017'

ನಾಟಕ ಸಂಘ ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಹಾಗೂ ಜರ್ನಿ ಥೇಟರ್ ಗ್ರೂಪ್, ಮಂಗಳೂರು ಇವರ ಸಹಯೋಗದೊಂದಿಗೆ ‘ರಂಗಪಯಣ 2017’ ಕಾರ್ಯಕ್ರಮವು ಫೆ 20ರ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

|
Google Oneindia Kannada News

ಮಂಗಳೂರು, ಫೆ 19: ನಾಟಕ ಸಂಘ ಸಂತ ಅಲೋಶಿಯಸ್ ಕಾಲೇಜು, ಮಂಗಳೂರು (ಸ್ವಾಯತ್ತ) ಹಾಗೂ ಜರ್ನಿ ಥೇಟರ್ ಗ್ರೂಪ್, ಮಂಗಳೂರು ಇವರ ಸಹಯೋಗದೊಂದಿಗೆ 'ರಂಗಪಯಣ 2017' ಉದ್ಘಾಟನಾ ಕಾರ್ಯಕ್ರಮವು ಫೆ 20ರ ಸೋಮವಾರ ಸಂಜೆ 6;30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಅಂತರಾಷ್ರೀಯ ಖ್ಯಾತಿಯ ಜಾದೂಗಾರಾದ ಕುದ್ರೋಳಿ ಗಣೇಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರೆ. ಫಾ. ಸ್ವೀಬರ್ಟ್ ಡಿ'ಸಿಲ್ವ ಎಸ್. ಜೆ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

 Dramatic association St Aloysius college Mangaluru Rangapayana 2017

ಅಂದೇ 'ರಂಗಪಯಣ 2017'ರ ಪ್ರಯುಕ್ತ ಎಚ್. ಎಸ್. ವೆಂಕಟೇಶಮೂರ್ತಿಯವರು ರಚಿಸಿದ ಮತ್ತು ಭವ್ಯ ಶೆಟ್ಟಿಯವರು ನಿರ್ದೇಶಿಸಿರುವ ' ಅಗ್ನಿವರ್ಣ' ನಾಟಕವನ್ನು ಸಂತ ಅಲೋಶಿಯಸ್ ಕಾಲೇಜಿನ ನಾಟಕ ಸಂಘದ ವಿದ್ಯಾರ್ಥಿಗಳು ಸಂಜೆ 4 ಗಂಟೆಗೆ (ವಿದ್ಯಾರ್ಥಿಗಳಿಗಾಗಿ) ಮತ್ತು 7 ಗಂಟೆಗೆ ಎರಡು ಬಾರಿ ಪ್ರದರ್ಶಿಸಲಿದ್ದಾರೆ.

ಪ್ರೋ. ಲಾರೆನ್ಸ್ ಪಿಂಟೋ, ಸಂಯೋಜಕರು, ನಾಟಕ ಸಂಘ ಸಂತ ಅಲೋಶಿಯಸ್ ಕಾಲೇಜು, ದೀಪಕ್, ಅಧ್ಯಕ್ಷರು, ಜರ್ನಿ ಥೇಟರ್ ಗ್ರೂಪ್ ಹಾಗೂ ಸ್ಮಿತಾ. ಡಿ. ಕೆ ಅಧ್ಯಕ್ಷಕರು, ನಾಟಕ ಸಂಘ ಸಂತ ಅಲೋಶಿಯಸ್ ಕಾಲೇಜು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಮತ್ತು ರಂಗಾಯಣ ನಡೆಸುತ್ತಿರುವ ಕಾಲೇಜು ನಾಟಕ ಸ್ಪರ್ಧೆಯಲ್ಲಿ ನಾಟಕ ಅಗ್ನಿವರ್ಣ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ವಲಯ ಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದು ಮುಂದೆ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತದೆ.

English summary
Dramatic association, St Aloysius College Mangaluru (Autonomous) in Collaboration with Journey Theatre Group, Mangalore presents ‘ Rangapayana 2017 on Feb 20 in college campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X