ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಮೊಯ್ಲಿಗೆ ಗೌರವ ಸನ್ಮಾನ-ಸ್ಮರಣ ಸಂಚಿಕೆ ಬಿಡುಗಡೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು,ನವೆಂಬರ್, 23 : ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ 90ನೇ ವರ್ಷಾಚರಣೆ ಹಾಗೂ ದೇವಾಡಿಗರ ಸಂಘದ ನವೀಕೃತ ಹವಾನಿಯಂತ್ರಿತ ಸಮಾಜ ಭವನದ ಉದ್ಘಾಟನಾ ಸಮಾರಂಭ ಭಾನುವಾರ ನೆರವೇರಿತು.

90ನೇ ವರ್ಷಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ನವತಿ ಸಮೃದ್ಧಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, 'ಡಾ. ವೀರಪ್ಪ ಮೊಯ್ಲಿಯವರು ಬರೆದ ಮಹಾಕಾವ್ಯ 'ಶ್ರೀ ರಾಮಾಯಣ ಮಹಾನ್ವೇಷಣಂ' ಕೃತಿಗೆ ಪ್ರತಿಷ್ಠಿತ 'ಸರಸ್ವತಿ ಸಮ್ಮಾನ್' ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ ಎಂದ ಅವರು ಬಾಹುಬಲಿ ಮಹಾಕಾವ್ಯ ಬರೆಯುವಂತೆ ಸಲಹೆ ನೀಡಿದರು.[ವೀರೇಂದ್ರ ಹೆಗ್ಗಡೆಯವರ ಮೇಲೆ ಮತ್ತೇನಿದು ಗಂಭೀರ ಆರೋಪ !]

Dr.Veerendra Heggade released 90years memory book of Devadiga committee in Mangaluru

ಬಡಕುಟುಂಬದಿಂದ ಬಂದ ವೀರಪ್ಪ ಮೊಯ್ಲಿ ತಮ್ಮ ಜೀವನದಲ್ಲಿ ಹಂತ ಹಂತವಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಾಧನೆ ಮಾಡಿದವರು. ರಾಜಕಾರಣಿಯಾಗಿ, ಸಮಾಜ ಸೇವಕನಾಗಿ, ಸಾಹಿತಿಯಾಗಿ ದೇಶದಲ್ಲಿ ಹಲವಾರು ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಡಾ.ವೀರೆಂದ್ರ ಹೆಗ್ಗಡೆಯವರು ಮೊಯ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ನವೀಕೃತ ಹವಾನಿಯಂತ್ರಿತ ಸಮಾಜ ಭವನ ಹಾಗೂ ಮಂಗಳ ಸಾಂಸ್ಕೃತಿಕ ರಂಗ ಮಂದಿರ ಉದ್ಘಾಟಿಸಿ ಮಾತನಾಡಿದ, ಕರ್ನಾಟಕ ಮಾಜಿ ಮುಖ್ಯಮಂತ್ರಿ ಡಾ.ವೀರಪ್ಪ ಮೊಯ್ಲಿ ಅವರು, ಪರಿವರ್ತನಾ ಮನೋಭಾವದೊಂದಿಗೆ ಪರಿಶ್ರಮ ಮತ್ತು ಛಲದಿಂದ ಹೋರಾಟ ಮಾಡಿದರೆ ಯಶಸ್ಸು ಸಾಧ್ಯ. ಜೀವನದಲ್ಲಿ ಇಚ್ಚಾಶಕ್ತಿ ಬೇಕು. ಅಧ್ಯಯನ ಶೀಲತೆ ಬೇಕು. ಪ್ರಾಮಾಣಿಕತೆಯಿಂದ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.[ಚುನವಣಾ ದುಂದು ವೆಚ್ಚ, ಸಂಸದ ಮೊಯ್ಲಿಗೆ ನೋಟಿಸ್]

ಈ ಸಂದರ್ಭದಲ್ಲಿ ಸಚಿವ ರಮಾನಾಥ ರೈ, ಸಂಸದ ನಳೀನ್ ಕುಮಾರ್ ಕಟೀಲ್, ಅಭಯಚಂದ್ರ ಜೈನ್, ಶಾಸಕ ಜೆ. ಆರ್. ಲೋಬೋ, ಎಂ. ಎಲ್.ಸಿ, ಐವನ್ ಡಿಸೋಜಾ, ಮೇಯರ್ ಜೆಸಿಂತಾ ವಿಜಯ ಅಲ್ಫ್ರೇಡ್, ಕಾರ್ಪೊರೇಟರ್ ಜಯಂತಿ ಆಚಾರ್, ದುಬೈ ದೇವಾಡಿಗರ ಸಂಘದ ಅಧ್ಯಕ್ಷ ಹಾಗೂ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್, ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ. ಬಿ. ಎಸ್. ಶೇರಿಗಾರ್, ನ್ಯೂರೋ ಸರ್ಜನ್ ಮುಂತಾದವರು ಅತಿಥಿಗಳಾಗಿದ್ದರು.

ಸಂಘದ ಉಪಾಧ್ಯಕ್ಷ ರತ್ನಾಕರ್ ದೇವಾಡಿಗ, ಕಾರ್ಯದರ್ಶಿ ಎಂ. ದೇವದಾಸ್, ಸಂಘಟನಾ ಕಾರ್ಯದರ್ಶಿ ಯಶವಂತ ದೇವಾಡಿಗ ಕದ್ರಿ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ವಿ.ಕಲ್ಯಾಣಪುರ್, ಹಾಗೂ ಯುವ ಸಂಘಟನೆಯ ಅಧ್ಯಕ್ಷ ಪ್ರಶಾಂತ್.ಯಂ.ಯಚ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

English summary
Dr.Veerendra Heggade has released 90years memory book of Devanadiga committee and Congress leader, Former Chief Minister of Karnataka Veerappa Moily inauguarated New building of Devadiga committee in Mangaluru on Sunday, November 22nd
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X