ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿ ತೀರ ಮಂಗಳೂರಿನಲ್ಲಿ ತಿನ್ನಲು ಮೀನು ಸಿಕ್ತಿಲ್ಲ!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಏ.8 : ಮತ್ಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕದ ಕರಾವಳಿ ತೀರದ ನಿವಾಸಿಗಳಿಗೇ ಈಗ ತಿನ್ನಲು ಮೀನು ಸಿಗುತ್ತಿಲ್ಲ. ಮೀನಿನ ಆಹಾರ ಸೇವನೆ ಮಾಡುತ್ತಿದ್ದ ಬಹುತೇಕ ನಿವಾಸಿಗಳು ನಾಲಿಗೆಯ ರುಚಿಯನ್ನು ತಣಿಸಿಕೊಳ್ಳಬೇಕಾದರೆ ಒಂದು ಮೀನಿಗೆ 15 ರೂ. ಹಣ ಪಾವತಿ ಮಾಡಬೇಕಾಗಿದೆ.

ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದು, ಸಮುದ್ರಕ್ಕೆ ಇಳಿದಿಲ್ಲ. ಇದರಿಂದ ಮಾರುಕಟ್ಟೆಗೆ ಮೀನನ ಸರಬರಾಜು ಸ್ಥಗಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರು ಮೀನನ ಬೆಲೆ ಗಗನಕ್ಕೆ ಏರಿದೆ.

fish

ಅಂದಹಾಗೆ ರಾಜ್ಯ ಸರ್ಕಾರ ಮೀನುಗಾರಿಕೆ ಬೋಟ್‌ಗಳಿಗೆ ನೀಡಲಾಗುತ್ತಿರುವ ಡೀಸೆಲ್ ಸಬ್ಸಿಡಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುವುದಾಗಿ ಆದೇಶ ಹೊರಡಿಸಿದೆ. ಇದನ್ನು ವಿರೋಧಿಸುತ್ತಿರುವ ಮೀನುಗಾರರು ಮಂಗಳೂರು, ಉಡುಪಿ ಹಾಗೂ ಕಾರವಾರಗಳಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ದರಿಂದ ಬೋಟ್‌ಗಳು ಸಮುದ್ರಕ್ಕಿಳಿಯದೇ ದಡದಲ್ಲಿ ನಿಂತಿವೆ.

ಮಾರುಕಟ್ಟೆಯಲ್ಲಿ ಮೀನು ಸಿಗುತ್ತಿಲ್ಲ : ಮೀನುಗಾರಿಕೆಗೆ ಸ್ಥಗಿತಗೊಂಡಿರುವುದರಿಂದ ಮಾರುಕಟ್ಟೆಗೆ ಮೀನುಗಳ ಪೂರೈಕೆ ನಿಂತಿದೆ. ಕೇರಳ, ತಮಿಳುನಾಡು ಮತ್ತು ಆಂಧ್ರ ಕರಾವಳಿಯಿಂದ ಬರುವ ಮೀನುಗಳ ಏರಿಕೆಯಾಗಿದೆ. ಒಂದು ಕೆಜಿ ಬಂಗುಡೆ ಮೀನಿನ ಬೆಲೆ ಸಾಮಾನ್ಯ ಮಾರುಕಟ್ಟೆಯಲ್ಲಿ 120 ರಿಂದ 150 ರೂ.. ಆದರೆ, ಮುಷ್ಕರದಿಂದಾಗಿ 200 ರೂ.ಗೆ ಏರಿಕೆ ಕಂಡಿದೆ.

boat

ಶೇ 15ರಷ್ಟು ದರ ಹೆಚ್ಚಳ : ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧಿಕೃತ ಮೀನು ಮಾರಾಟ ಮಳಿಗೆ ಮತ್ಸ್ಯಗಂಧಿಯ ಪ್ರಕಾರ, ಕಳೆದ ಒಂದು ವಾರದಿಂದ ಮೀನುಗಳ ದರ ಶೇ.15ರಷ್ಟು ಏರಿಕೆಯಾಗಿದೆ. ಈ ಹಿಂದೆ ಗುಜರಾತ್ ಮತ್ತಿ 100 ರೂ. ಇದ್ದುದು 120 ರೂ.ಗೆ ಏರಿದೆ. 600 ರೂ.ಗೆ ಮಾರಾಟವಾಗುತ್ತಿದ್ದ ಅಂಜಲ್ ಮತ್ತು ಬಿಳಿ ಮಾಂಜಿ 860 ರೂ.ಗಳಿಗೆ ಏರಿಕೆ ಕಂಡಿದೆ. 490 ಇದ್ದ ಸಿಗಡಿ 550 ರೂ.ಗೆ ಏರಿಕೆಯಾಗಿದೆ.

ಮಾರುಕಟ್ಟೆಗಳೆಲ್ಲ ಸಾಂಪ್ರದಾಯಿಕ ಮೀನು ಮಾರಾಟಗಾರರಲಿಲ್ಲದೆ ಬಿಕೋ ಎನ್ನುತ್ತಿವೆ. ಕೆಲವರು ನದಿಗಳಲ್ಲಿ ಬಲೆಬೀಸಿ ಹಿಡಿದು ತರುವ ಕ್ಯಾಟ್‌ಫಿಶ್‌ನಂಥ ಮೀನುಗಳೂ ಸಿಕ್ಕಾಪಟ್ಟೆ ದುಬಾರಿಯಾಗಿವೆ. ಆದ್ದರಿಂದ ಕರಾವಳಿ ಭಾಗದ ಜನರಿಗೆ ತಿನ್ನಲು ಮೀನು ಸಿಗುತ್ತಿಲ್ಲ.

ಮುಖ್ಯಮಂತ್ರಿಗಳ ಭೇಟಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಮೀನುಗಾರರ ಬೋಟ್‌ಗಳಿಗೆ ನೀಡಲಾಗುವ ಡೀಸೆಲ್‌ಅನ್ನು ಮಾರುಕಟ್ಟೆ ದರದಲ್ಲಿ ವಿತರಿಸಿ, ಸಬ್ಸಿಡಿ ಹಣವನ್ನು ನೋಂದಾಯಿತ ಮೀನುಗಾರಿಕಾ ದೋಣಿಗಳ ಮಾಲೀಕರ ಬ್ಯಾಂಕ್ ಖಾತೆಗೆ ನೇರ ಜಮಾ ಮಾಡುವುದಾಗಿ ಹೇಳಿದ್ದರು.

fishing boat

ಏ.1ರಿಂದ ಇದು ಜಾರಿಗೆ ಬಂದಿದ್ದು, 105 ಕೋಟಿ ರೂ.ಅನುದಾನ ಮೀಸಲಾಗಿಡಲಾಗಿದೆ. ಏಪ್ರಿಲ್ ತಿಂಗಳ ಸಬ್ಸಿಡಿಗಾಗಿ 10.6 ಕೋಟಿ ರೂ. ಮೊತ್ತವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮೀನುಗಾರ ಮುಖಂಡರು ಪ್ರತಿಭಟನೆ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಬುಧವಾರ ಮಾತುಕತೆ ನಡೆಸಲಿದ್ದಾರೆ.

English summary
Mangaluru : Karavali Fisheries Association protesting against Karnataka government decision of transforming diesel subsidy to bank account. By the protest fish rate increased in market from past two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X