ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ನಂತೂರು ಸರ್ಕಲ್‌ನಲ್ಲಿ ತುರ್ತು ಕಾಮಗಾರಿಗಳು

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಮಾ.4 : ಸರಣಿ ರಸ್ತೆ ಅಪಘಾತಗಳಾಗುವ ಮಂಗಳೂರಿನ ನಂತೂರು ವೃತ್ತದಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಂಡು ಸಂಚಾರ ವ್ಯವಸ್ಥೆಯನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಕಳೆದ ಶುಕ್ರವಾರ ನಂತೂರು ಸರ್ಕಲ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ 3 ಜನರು ಮೃತಪಟ್ಟಿದ್ದರು.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಂತೂರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೃತದಲ್ಲಿ ತುರ್ತಾಗಿ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಸಂಚಾರ ವ್ಯವಸ್ಥೆಯಲ್ಲಿಯೂ ಕೆಲವು ಬದಲವಾಣೆ ತರಲು ಸೂಚನೆ ನೀಡಿದ್ದಾರೆ.

Nanthoor Circle

ನಂತೂರು ವೃತ್ತದ ನಿರ್ಮಾಣ ಸರಿಯಾದ ರೀತಿಯಲ್ಲಿ ನಡೆದಿಲ್ಲ ಆದ್ದರಿಂದ ತುರ್ತಾಗಿ ಅದನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ ಜಿಲ್ಲಾಧಿಕಾರಿಗಳು ವೃತ್ತದಲ್ಲಿ ಅಂಡರ್‌ಪಾಸ್ ನಿರ್ಮಿಸುವ ಪ್ರಸ್ತಾಪವನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ ಎಂದರು. [ನಂತೂರು ಸರ್ಕಲ್ ಅಪಘಾತ, ಮತ್ತೆ 3 ಬಲಿ]

ಬಸ್ ನಿಲ್ದಾಣ ಸ್ಥಳಾಂತರ : ಮಲ್ಲಿಕಟ್ಟೆ ಮೂಲಕ ನಂತೂರಿಗೆ ತೆರಳುವ ರಸ್ತೆಯ ಎಡ ಬದಿಯಲ್ಲಿರುವ ಒಂದು ಬಸ್ ನಿಲ್ದಾಣವನ್ನು ನಂತೂರು ವೃತ್ತದಿಂದ ಮೇಲಕ್ಕೆ ಕೆಪಿಟಿಗೆ ತೆರಳುವ ಹೆದ್ದಾರಿ ಬದಿಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. [ನಂತೂರು ಸರ್ಕಲ್ ಬಳಿ ಬಸ್ ಅಪಘಾತ, 2 ಸಾವು]

ಸಂಚಾರದಲ್ಲಿ ಕೆಲವು ಬದಲಾವಣೆ : ನಂತೂರು ವೃತ್ತದ ಸಂಚಾರದಲ್ಲಿ ಕೆಲವು ಬದಲಾವಣೆ ತರಲು ನಿರ್ಧರಿಸಲಾಗಿದೆ. ಕೆಪಿಟಿಯಿಂದ ಮೂಡುಬಿದಿರೆ, ಮೂಡುಬಿದಿರೆ ಕಡೆಯಿಂದ ಪಂಪ್‌ವೆಲ್ ಕಡೆಗೆ ಹಾಗೂ ಮಲ್ಲಿಕಟ್ಟೆಯಿಂದ ಕೆಪಿಟಿ ಕಡೆಗೆ ಫ್ರೀ ಲೆಫ್ಟ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

ಸ್ಥಳೀಯ ಜನರ ಆಕ್ರೋಶ : ನಂತೂರು ವೃತ್ತದಲ್ಲಿ ಅಪಘಾತಗಳು ನಡೆಯುತ್ತಿದ್ದರೂ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು. ಸ್ಥಳದಲ್ಲಿ ಅಂಡರ್‌ಪಾಸ್ ಅಥವಾ ಓವರ್ ಬ್ರಿಜ್ಡ್ ಕಾಮಗಾರಿಗಳಲ್ಲಿ ಯಾವುದಾದರೂ ತಕ್ಷಣ ಆರಂಭಿಸಿ ಎಂದು ಸ್ಥಳೀಯರು ಒತ್ತಾಯಿಸಿದರು.

ನಂತೂರು ಸರ್ಕಲ್‌ಗೆ ಎಷ್ಟು ಬಲಿ : ನಂತೂರು ಸರ್ಕಲ್‌ನಲ್ಲಿ ಸರಣಿ ಅಪಘಾತಗಳಾಗುತ್ತಿವೆ. 2014ರ ಮೇ 6ರಂದು ಬೆಳಗ್ಗೆ ಎರಡು ಲಾರಿಗಳು ಡಿಕ್ಕಿ ಹೊಡೆದು ಒಂದರ ಮೇಲೊಂದು ಉರುಳಿ ಬಿದ್ದು ಭಾರಿ ಅನಾಹುತ ಸಂಭವಿಸಿತ್ತು. 2014ರ ಜೂ.13, 2014ರ ನ.26ರಂದು ವೃತ್ತದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಬಲಿಯಾಗಿದ್ದರು. ಕಳೆದ ವಾರ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು.

English summary
Dakshina Kannada Deputy commissioner AB Ibrahim inspected Nanthoor Circle, Manaluru and said circle has been constructed unscientifically. DC directed the National Highways Authority of India to rectify it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X