ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರೇತಾತ್ಮಗಳೊಂದಿಗೆ ದಾಸೇಗೌಡನ ಪತ್ರ ವ್ಯವಹಾರ!

By ರವೀಂದ್ರ ಶೆಟ್ಟಿ
|
Google Oneindia Kannada News

ಮಂಗಳೂರು, ಮೇ 4 : ತುಳುನಾಡಿನಲ್ಲಿ ಪ್ರೇತಾತ್ಮಗಳಿಗೆ ವಿಶೇಷವಾದ ಆದರವನ್ನು ನೀಡಲಾಗುತ್ತದೆ. ಸರ್ಕಾರಿ ಅಧಿಕಾರಿಗಳು ಮೃತ ವ್ಯಕ್ತಿಗಳೊಂದಿಗೂ ಪತ್ರ ವ್ಯವಹಾರ ಮಾಡುತ್ತಾರೆ, ಅಚ್ಚರಿಯಾದರೂ ಇದು ಸತ್ಯ. ಕೆಐಎಡಿಬಿ ಪರಿಹಾರ ಪಡೆಯುವಂತೆ ಸತ್ತವರಿಗೂ ನೋಟಿಸ್ ಕಳಿಸಿ ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನೇ ಸಲ್ಲಿಸದ, ಸುಮಾರು 40 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಗೆ ಪರಿಹಾರವನ್ನು ತೆಗೆದುಕೊಂಡು ಹೋಗಿ, ಆಕ್ಷೇಪಣೆ ಇದ್ದರೆ ನ್ಯಾಯಾಲಯಕ್ಕೆ ದೂರು ನೀಡಿ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ನೋಟಿಸ್ ಕೊಟ್ಟಿದೆ.

land

ಐಎಸ್‍ಪಿಆರ್‍ಎಲ್‍ನ (Indian Strategic Petroleum Reserves Limited) ಕೊಳವೆ ಮಾರ್ಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 24 ಗ್ರಾಮಗಳಲ್ಲಿ ಹಾದು ಹೋಗುತ್ತಿದೆ. ಮಾರ್ಗ ಹಾದು ಹೋಗುವ ಜಮೀನಿನ ಸಮೀಕ್ಷೆಯನ್ನು ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ಮಾಡಿದ್ದಾರೆ ಎಂಬುದು ರೈತರ ಆರೋಪ. [ಮಂಗಳೂರಿಗೆ ಬರಲಿದೆ ವಿಶ್ವದರ್ಜೆ ಕೌಶಲ್ಯ ಅಭಿವೃದ್ಧಿ ಕೇಂದ್ರ]

ಈ ಕುರಿತು ಹಲವು ರೈತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ, ಕೆಐಎಡಿಬಿ ಈ ದೂರಿನಲ್ಲಿ ಸತ್ಯಾಂಶವಿಲ್ಲ. ಅಂತಿಮ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಪರಿಹಾರನ್ನು ರೈತರು ಪಡೆಯಬಹುದು ಎಂದು ಹೇಳಿದೆ. ಇಲ್ಲವಾದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿರುತ್ತದೆ ಎಂದು ಸ್ಪಷ್ಟಪಡಿಸಿದೆ.

notice

ಕೆಐಎಡಿಬಿ ಪರಿಹಾರ ಪಡೆಯುವಂತೆ ಅರ್ಜಿ ಸಲ್ಲಿಸದವರು ಮತ್ತು ಹಲವು ವರ್ಷಗಳ ಹಿಂದೆ ಮೃತಪಟ್ಟವರಿಗೂ ನೋಟಿಸ್ ಜಾರಿಗೊಳಿಸಿ ರೈತರ ಆಕ್ರೋಶಕ್ಕೆ ಗುರಿಯಾಗಿದೆ. ದಾಸೇಗೌಡ ಎಂಬ ಭೂ ಸ್ವಾಧೀನಾಧಿಕಾರಿ ಈ ನೋಟಿಸ್ ನೀಡಿದ್ದು, ಈತ ಐಎಸ್‍ಪಿಆರ್‍ಎಲ್‍ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಜನರು ಆರೋಪಿಸುತ್ತಾರೆ.

ಜನರ ಸಂಕಷ್ಟಕ್ಕೆ ಸ್ಪಂದಿಸದ ದಾಸೇಗೌಡನಂತಹ ಅಧಿಕಾರಿಗಳು ಜಿಲ್ಲೆಗೆ ಅಗತ್ಯವಿಲ್ಲ. ಸಮರ್ಥ ಅಧಿಕಾರಿಯನ್ನು ನೇಮಿಸಬೇಕು ಮತ್ತು ನ್ಯಾಯ ದೊರಕಿಸಿ ಕೊಡಬೇಕು ಎಂದು ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

English summary
In Dakshina Kannada district Karnataka Industrial Areas Development Board (KIADB) sent notices to man who dead. KIADB acquired land for Indian Strategic Petroleum Reserves Limited (ISPRL) project in district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X