ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಕರಾಯ ಗಲಭೆ, ಬಜರಂಗದಳ ಖಂಡನೆ

|
Google Oneindia Kannada News

ಮಂಗಳೂರು, ಜ. 22 : ಕರಾಯವಿನಲ್ಲಿ ನಡೆದ ಗಲಭೆ ಸಂಬಂಧ 35 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 25 ಜನರನ್ನು ಬಂಧಿಸಲಾಗಿದೆ. ಕರಾಯವಿನ ಗಲಭೆಯನ್ನು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಖಂಡಿಸುತ್ತದೆ ಎಂದು ಬಜರಂಗದಳದ ಪ್ರಾಂತ್ಯ ಸಂಚಾಲಕ ಶರಣ್ ಪಂಪ್‌ವೆಲ್ ಹೇಳಿದ್ದಾರೆ.

ಪುತ್ತೂರಿನ ಹಿಂದೂ ಹೃದಯ ಸಂಗಮ ಕಾರ್ಯಕ್ರಮ ಮುಗಿಸಿ ಶಾಂತಿಯುತವಾಗಿ ಹಿಂತಿರುಗುತ್ತಿದ್ದ ಹಿಂದುಗಳ ಮೇಲೆ ಕಲ್ಲೆಸೆದು ದೌರ್ಜನ್ಯ ಎಸಗಿದ ಬಳಿಕ ಇದೀಗ ತಮ್ಮ ಮೇಲೆ ದಾಳಿಯಾಗಿದೆ ಎಂದು ಬಿಂಬಿಸುವ ಪ್ರಯತ್ನವನ್ನು ಕೆಲ ಮುಸ್ಲಿಂ ಶಕ್ತಿಗಳು ನಡೆಸುತ್ತಿದೆ ಎಂದು ಶರಣ್ ಪಂಪ್‌ವೆಲ್ ಆರೋಪಿಸಿದ್ದಾರೆ.

Dakshina Kannada

ಜಿಲ್ಲಾದ್ಯಾಂತ ಹಿಂದೂಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಕರಾಯ ಘಟನೆಯಲ್ಲಿ ಹಲವಾರು ಯುವಕರಿಗೆ ಗಂಭೀರ ಗಾಯಗಳಾಗಿದೆ. ಆದರೆ ಸಚಿವರುಗಳು, ಸ್ಥಳೀಯ ಶಾಸಕರು ಗೂಂಡಾಗಿರಿ ಮಾಡಿದ ಮುಸ್ಲಿಂ ಮತಾಂಧರ ರಕ್ಷಣೆಗೆ ನಿಂತಂತೆ ಕಂಡು ಬರುತ್ತಿದೆ ಎಂದು ದೂರಿದ್ದಾರೆ. [ಪುತ್ತೂರಿನ ಹಿಂದೂ ಹೃದಯ ಸಂಗಮ ಶೋಭಾಯಾತ್ರೆ ಚಿತ್ರಗಳು]

ಅಮಾಯಕ ಹಿಂದೂ ಯುವಕರ ಮೇಲೆ ಗಂಭೀರ ಪ್ರಕರಣಗಳನ್ನು ದಾಖಲಿಸಿ ಅವರನ್ನು ಜೈಲಿಗೆ ಅಟ್ಟುವ ಷಡ್ಯಂತ್ರ ನಡೆಯುತ್ತಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಈ ಪಕ್ಷಪಾತಿ ಧೋರಣೆಯ ಹಿಂದೆ ಹಿಂದೂ ವಿರೋಧಿ ರಾಜಕಾರಣಿಗಳ ಕೈವಾಡ ಇದೆ ಎಂದು ಆರೋಪಿಸಿದರು.

ಜನವರಿ 16ರಂದು ಪುತ್ತೂರು ಕೇಸರಿಮಯವಾಗಿತ್ತು. ವಿಶ್ವ ಹಿಂದೂ ಪರಿಷತ್‌ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ವಿರಾಟ್ ಹಿಂದೂ ಹೃದಯ ಸಂಗಮ ನಿಮಿತ್ತ ನಡೆದ ಭವ್ಯ ಶೋಭಾಯಾತ್ರೆಗೆ ಸಾವಿರಾರು ಜನರು ಸಾಕ್ಷಿಯಾಗಿದ್ದರು.

English summary
The police have registered 35 cases in connection to the communal clashes that erupted at Karaya on January 16 in Dakshina Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X