ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಕಾಂಗ್ರೆಸ್ ಮುಖಂಡನ ಗೂಂಡಾಗಿರಿ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜುಲೈ 19 : ಉಪಕಾರ ಮಾಡಿದವರಿಗೆ ಅಪಕಾರ ಮಾಡಲು ಹೋದವ ಈಗ ಜೈಲುಕಂಬಿ ಎಣಿಸುತ್ತಿದ್ದಾನೆ. ಈಗಿನ ಕಾಲದಲ್ಲಿ ಒಬ್ಬರು ಇನ್ನೊಬ್ಬರಿಗೆ ಉಪಕಾರ ಮಾಡುವುದೇ ಬಹಳ ಅಪರೂಪ. ಉಪಕಾರ ಮಾಡಿದವರಿಗೆ ಋಣಿಯಾಗಿರಬೇಕು ಅಲ್ವಾ? ಅದನ್ನು ಬಿಟ್ಟು ಉಪಕಾರ ಮಾಡಿದವರಿಗೇ ಅಪಕಾರ ಮಾಡೋಕೆ ಹೋದರೆ ಆಗೋದೆ ಹೀಗೆ.

ಇವರು ಅಶ್ರಫ್, ಭಾರತೀಯ ಸೇವಾದಳ ಕಾಂಗ್ರೆಸ್‍ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ. ಮುಖಂಡ ಅಂದಮೇಲೆ ಕೇಳಬೇಕೆ? ಸ್ವಲ್ಪ ದವಲತ್ತು, ಅಹಂಕಾರ ಇದ್ರೇನೇ ಅದಕ್ಕೊಂದು ಗತ್ತು. ಇವನು ಕೂಡಾ ಹಾಗೆನೇ. ಅಂದಹಾಗೆ ಇವನ ಮನೆ ಇರೋದು ಮಂಗಳೂರಿನ ಬಲ್ಮಠ ಅನ್ನೋ ಏರಿಯಾದಲ್ಲಿ.[ಸಿಸಿಬಿ ಪೊಲೀಸರನ್ನೇ ಅರೆಸ್ಟ್ ಮಾಡಿದ ಚೆನ್ನೈ ಪೊಲೀಸರು!]

ಇವರ ಮನೆ ಪಕ್ಕ ಸಹರಾ ಅನ್ನೋ ಹೆಸರಿನ ಒಂದು ಅಪಾರ್ಟ್‍ಮೆಂಟ್ ಇದೆ. ಇವರ ಮನೆಗೆ ಈ ಅಪಾರ್ಟ್‍ಮೆಂಟ್ ಇರೋ ರಸ್ತೆಯ ಮೂಲಕವೇ ಸಾಗಬೇಕು. ಆದರೆ, ಈತನ ಮನೆಯವರೆಗೆ ಕಾರು ಹೋಗುವುದಿಲ್ಲ. ಆದ್ದರಿಂದ, ಅಪಾರ್ಟ್‍ಮೆಂಟ್‍ನ ಸೈಡಲ್ಲೇ ಪ್ರತಿದಿನ ಕಾರನ್ನು ನಿಲ್ಲಿಸುತ್ತಿದ್ದರು.[ಜಡ್ಜ್ ಮನೆ ಕೈದೋಟಕ್ಕೆ ನುಗ್ಗಿದ ಮೇಕೆಗೆ ಜೈಲೂಟ!]

Dakshina Kannada Bharatiya Seva Dal president arreted

ಇದರಿಂದಾಗಿ ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ವಾಹನ ತೆಗೆದುಕೊಂಡು ಹೋಗೋದಿಕ್ಕೆ ಕಷ್ಟ ಆಗುತ್ತಿತ್ತು. ಹೀಗಾಗಿ ಇಬ್ಬರಿಗೂ ಅನುಕೂಲ ಆಗಲಿ ಎಂದು ಬಿಲ್ಡಿಂಗ್ ಅಸೋಸಿಯೇಷನ್ ನವರು ಈತನಿಗೂ ನಮ್ಮ ಪಾರ್ಕಿಂಗ್ ಏರಿಯಾದಲ್ಲಿ ಒಂದು ಪಾರ್ಕಿಂಗ್ ಪ್ಲೇಸ್ ಕೊಡೋಣ ಎಂದು ತೀರ್ಮಾನಿಸಿದರು. ಅಸೋಸಿಯೇಷನ್ ಅಧ್ಯಕ್ಷ ಜಾನ್ ಮೆಂಡೋನ್ಸಾ ಕಾರ್ ಪಾರ್ಕಿಂಗ್ ಗೆ ಜಾಗ ಕೊಡ್ತೀವಿ ಸಹಕರಿಸಿ ಅಂತಾ ಹೇಳಿದರು.

ಆದರೆ, ಅಶ್ರಫ್ ಕಾರನ್ನು ಪಾರ್ಕಿಂಗ್ ಏರಿಯಾದಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುತ್ತಿದ್ದರು. ಜೊತೆಗೆ ನಾನು ಬಂದಾಗ ಸೆಕ್ಯುರಿಟಿ ಗೇಟ್ ತೆಗೆಯಲಿಲ್ಲಾ ಅಂತಾ ಸೆಕ್ಯುರಿಟಿ ಜಗಳವಾಡುತ್ತಿದ್ದರು, ಬೆದರಿಕೆ ಹಾಕುತ್ತಿದ್ದರು.ಇದರಿಂದ ಬೇಸತ್ತಿದ್ದ ವಾಚ್‍ಮೆನ್ ಬಿಲ್ಡಿಂಗ್ ಅಸೋಸಿಯೇಷನ್‍ಗೆ ದೂರು ನೀಡಿದ್ದ.

ಆಗ ಜಾನ್ ಮೆಂಡೋನ್ಸಾ ಅಶ್ರಫ್ ಜೊತೆ ಮಾತುಕತೆ ನಡೆಸಿ, 'ಹೀಗೆಲ್ಲಾ ಮಾಡ್ಬೇಡಿ. ನಿಮ್ಗೆ ಗೇಟ್ ತೆಗೆಯೋಕೆ ನೀವು ನಮ್ಮ ಬಿಲ್ಡಿಂಗ್‍ನ ಮೆಂಬರ್ ಅಲ್ಲ. ಸೋ ನೀವು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ. ನೀವೇ ಗೇಟ್ ತೆಗೆದು ಹಾಕಿಕೊಳ್ಳಿ' ಅಂತಾ ನಯವಾಗಿಯೇ ಹೇಳಿದ್ದರು.

ಆದರೆ ಅಶ್ರಫ್ ತನ್ನ ಚಾಳಿ ಬಿಟ್ಟಿರಲಿಲ್ಲ. ತೆರೆದ ಗೇಟ್‍ನ್ನು ಹಾಗೆಯೇ ಬಿಟ್ಟು ತೆರಳುವುದು ಮುಂತಾದವುಗಳನ್ನು ಮಾಡುತ್ತಿದ್ದ. ಭಾನುವಾರ ತನ್ನ ಕಾರನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದ. ಇದರಿಂದ ಬಿಲ್ಡಿಂಗ್‍ನ ಎಲ್ಲಾರಿಗೂ ತೊಂದರೆಯಾಗಿತ್ತು. ಅಂದು ರಾತ್ರಿ ವೇಳೆ ಅಸೋಸಿಯೇಷನ್ ಅಧ್ಯಕ್ಷ ಜಾನ್ ಅವರು ಕಾರಿನಲ್ಲಿ ಬಂದಾಗಲೂ ಗೇಟ್ ಬಳಿ ಅಡ್ಡಾದಿಡ್ಡಿಯಾಗಿ ಕಾರನ್ನು ನಿಲ್ಲಿಸಲಾಗಿತ್ತು.

ಅಶ್ರಫ್ ತನ್ನ ಕಾರು ತೆಗೆಯಲು ಬರವುದನ್ನು ಕಾದು ಕುಳಿತ ಜಾನ್ ಅವರು ಈ ಬಗ್ಗೆ ಆತನನ್ನು ಪ್ರಶ್ನೆ ಮಾಡಿದ್ದರು. ಇದರಿಂದ ಕೋಪಗೊಂಡ ಆತ ಜಾನ್‍ರ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ತಡೆಯಲು ಬಂದ ಅವರ ಪತ್ನಿಯ ಮೇಲೂ ಹಲ್ಲೆ ಮಾಡಿದ್ದ. ಇದರಿಂದಾಗಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಜಾನ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಅಶ್ರಫ್‍ನನ್ನು ಬಂಧಿಸಿ, ಜೈಲಿಗೆ ಕಳಿಸಿದ್ದಾರೆ.

English summary
Dakshina Kannada Bharatiya Seva Dal president arreted for attack on apartment association president in Mangaluru on July 17, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X