ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಬ್ಯಾಂಕ್ ದರೋಡೆ, 5 ಕೋಟಿ ಲೂಟಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 21 : ಮಂಗಳೂರಿನಲ್ಲಿ ಭಾರೀ ಬ್ಯಾಂಕ್ ದರೋಡೆ ನಡೆದಿದ್ದು, ಎಸ್‌ಕೆ ಗೋಲ್ಡ್ ಸ್ಮಿತ್ ಸಹಕಾರಿ ಬ್ಯಾಂಕ್‌ನಿಂದ 5 ಕೋಟಿ ಮೌಲ್ಯದ ಹಣ ಮತ್ತು ಚಿನ್ನಾಭರಣವನ್ನು ದೋಚಲಾಗಿದೆ. ಮುಲ್ಕಿ ಪೊಲೀಸರು ಶ್ವಾನದಳದೊಂದಿಗೆ ಬ್ಯಾಂಕ್‌ಗೆ ಭೇಟಿ ನೀಡಿದ್ದು, ಪರಿಶೀಲನೆ ಮುಂದುವರೆದಿದೆ.

ಶುಕ್ರವಾರ ತಡರಾತ್ರಿ ಮಂಗಳೂರಿನ ಕಿನ್ನಿಗೋಳಿಯಲ್ಲಿರುವ ಎಸ್‌ಕೆ ಗೋಲ್ಡ್ ಸ್ಮಿತ್ ಸಹಕಾರಿ ಬ್ಯಾಂಕ್‌ಗೆ ನುಗ್ಗಿರುವ ಕಳ್ಳರು ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಬ್ಯಾಂಕಿನ ಸೈರನ್ ಸಂಪರ್ಕ ಕಟ್ ಮಾಡಿರುವ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

robbery

ಬ್ಯಾಂಕಿನ ಮುಂಬಾಗಿಲ ಶಟರ್ ಮುರಿದು ಒಳನುಗ್ಗಿರುವ ಕಳ್ಳರು, ಸೈರನ್ ಸಂಪರ್ಕ ಸ್ಥಗಿತಗೊಳಿಸಿ ಹಣವನ್ನು ದೋಚಿದ್ದಾರೆ. ವಾಪಸ್ ಹೋಗುವಾಗ ಬ್ಯಾಂಕ್ ಸಿಸಿಟಿ ಕ್ಯಾಮರಾಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮುಲ್ಕಿ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಬ್ಯಾಂಕ್‌ನ ಲಾಕರ್‌ನಲ್ಲಿದ್ದ ಸುಮಾರು 25 ಲಕ್ಷ ಹಣ ಸೇರಿ 5 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಬ್ಯಾಂಕ್‌ನ ಅಕ್ಕಪಕ್ಕದ ಕಟ್ಟಡ ಮತ್ತು ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

English summary
SK Goldsmith Co-Operative Society Bank robbed in Kinnigoli, Mangaluru on Friday, November 19. Rs 5 core stolen from bank. Mulki police visited the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X