ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರಿಸ್ಮಸ್, ಹೊಸವರ್ಷಕ್ಕೆ ವಿಶೇಷ ಹಾಲಿಡೇ ರೈಲುಗಳು

By Mahesh
|
Google Oneindia Kannada News

ಮಂಗಳೂರು, ಡಿ.22: ಪ್ರತಿ ವರ್ಷದಂತೆ ಭಾರತೀಯ ರೈಲ್ವೆ ಈ ಬಾರಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷ ರಜಾ ಸಂದರ್ಭದಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಓಡಿಸಲು ಮುಂದಾಗಿದೆ. ನಾಲ್ಕು ಹೊಸ ರೈಲುಗಳು ಈ ಸೀಸನ್ ನಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಸಿಗಲಿದೆ.

ಇಂದೋರ್- ಕೊಚ್ಚುವೇಲಿ, ಅಹ್ಮದಾಬಾದ್- ಮಂಗಳೂರು ಜಂಕ್ಷನ್, ಮುಂಬೈ ಸೆಂಟ್ರಲ್-ಮಂಗಳೂರು ಜಂಕ್ಷನ್‌ ಹಾಗೂ ಬಾಂದ್ರಾ ಟರ್ಮಿನಸ್- ಕರ್ಮಾಲಿ-ನಡುವೆ ಹೊಸ ರೈಲು ಗಳು ಓಡಾಡಲಿವೆ.[ರೈಲ್ವೆ ಬೆಡ್‌ಶೀಟ್ ಖರೀದಿಸಿ, ಸುಖ ನಿದ್ರೆ ಮಾಡಿ]

ಇಂದೋರ್- ಕೊಚ್ಚುವೇಲ್ ಸೂಪರ್‌ಫಾಸ್ಟ್ ಸುವಿಧಾ ಎಕ್ಸ್‌ಪ್ರೆಸ್ ರೈಲು ಡಿ.22 ಮತ್ತು 29ರಂದು ಇಂದೋರ್ ನಿಂದ ರಾತ್ರಿ 9:05ಕ್ಕೆ ಹೊರಟು ಮೂರನೆ ದಿನ ಸಂಜೆ 7:10ಕ್ಕೆ ಕೊಚ್ಚುವೇಲ್ ತಲುಪಲಿದೆ. ಅದೇ ರೀತಿ ಕೊಚ್ಚುವೇಲ್‌ನಿಂದ ಡಿ.25 ಮತ್ತು ಜ.1ರಂದು ಪೂರ್ವಾಹ್ನ 11ಕ್ಕೆ ಹೊರಟು ಮೂರನೆ ದಿನ ಮುಂಜಾನೆ 5:15ಕ್ಕೆ ಇಂದೋರ್ ತಲುಪಲಿದೆ.

Christmas special trains

ಈ ರೈಲಿಗೆ ಉಜ್ಜೈನಿ, ನಗ್ಡಾ, ವಡೋದರಾ, ಸೂರತ್, ವಾಪಿ, ವಾಸೈ ರೋಡ್, ಪನ್ವೇಲ್, ರೋಹಾ, ಚಿಪ್ಳುಣ್, ರತ್ನಗಿರಿ, ಮಡಂಗಾವ್, ಕಾರವಾರ, ಉಡುಪಿ, ತೋಕೂರು, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ಶೊರ್ನೂರು, ತ್ರಿಶ್ಶೂರ್, ಎರ್ನಾಕುಲಂ, ಅಲೆಪ್ಪಿ, ಕನ್ಯಾಕುಲಂ ಹಾಗೂ ಕೊಲ್ಲಂಗಳಲ್ಲಿ ನಿಲುಗಡೆಯಿದೆ.[ರೈಲು ಹೊರಡುವ ಅರ್ಧ ತಾಸು ಮುನ್ನ ಬುಕ್ಕಿಂಗ್]

ಅಹ್ಮದಾಬಾದ್-ಮಂಗಳೂರು ಜಂಕ್ಷನ್ ಸೂಪರ್‌ಫಾಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಡಿ.24 ಮತ್ತು 31ರಂದು ಸಂಜೆ 4:50ಕ್ಕೆ ಅಹ್ಮದಾಬಾದ್ ನಿಂದ ಹೊರಟು ಮೂರನೆ ದಿನ ಸಂಜೆ 6:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಅದೇ ರೀತಿ ಡಿ.25 ಮತ್ತು ಜ.1ರಂದು ರಾತ್ರಿ 9:30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮೂರನೆ ದಿನ ಮುಂಜಾನೆ 12:20ಕ್ಕೆ ಅಹ್ಮದಾಬಾದ್ ತಲುಪಲಿದೆ.

ಈ ರೈಲಿಗೆ ನಡಿಯಾಡ್, ಆನಂದ್, ವಡೋದರಾ, ಸೂರತ್, ವಲ್ಸಾಡ್, ವಾಪಿ, ಧನುರೋಡ್, ವಸೈ ರೋಡ್, ಪನ್ವೇಲ್, ರೋಹಾ, ಖೇಡ್, ಚಿಪ್ಳುಣ್, ಸಂಗಮೇಶ್ವರ, ರತ್ನಗಿರಿ, ಕನಕವಲ್ಲಿ, ಕುಡಾಲ್, ಸಾವಂತವಾಡಿ, ಮಡಂಗಾವ್, ಕಾರವಾರ, ಕುಮಟಾ, ಭಟ್ಕಳ, ಬೈಂದೂರು, ಉಡುಪಿ, ತೋಕೂರುಗಳಲ್ಲಿ ನಿಲುಗಡೆ ಇದೆ.

ಮುಂಬೈ ಸೆಂಟ್ರಲ್- ಮಂಗಳೂರು ಜಂಕ್ಷನ್ ಸೂಪರ್‌ಫಾಸ್ಟ್ ಸ್ಪೆಷಲ್ ರೈಲು ಡಿ.23 ಮತ್ತು 30ರಂದು ರಾತ್ರಿ 11:15ಕ್ಕೆ ಮುಂಬೈ ಸೆಂಟ್ರಲ್ ಬಿಟ್ಟು ಮರುದಿನ ಸಂಜೆ 7:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.[ಕೊಂಕಣ ರೈಲ್ವೆ ಮಾಹಿತಿ ಪಡೆಯಲು ಹೊಸ ಸಹಾಯವಾಣಿ]

ಡಿ.24 ಮತ್ತು 31ರಂದು ರಾತ್ರಿ 10:30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಸಂಜೆ 7:25ಕ್ಕೆ ಮುಂಬೈ ತಲುಪಲಿದೆ.

ಈ ರೈಲಿಗೆ ಬೋರಿವಿಲಿ, ವಸೈ ರೋಡ್, ಪನ್ವೇಲ್, ರೋಹಾ, ಖೇಡ್, ಚಿಫ್ಪುಣ್, ಸಂಗಮೇಶ್ವರ, ರತ್ನಗಿರಿ, ಕನಕವಲ್ಲಿ, ಕುಡಾಲ್, ಸಾವಂತವಾಡಿ, ಕರ್ಮಾಲಿ, ಮಡಂಗಾವ್, ಕಾರವಾರ, ಕುಮಟ, ಭಟ್ಕಳ, ಬೈಂದೂರು, ಉಡುಪಿ ಮತ್ತು ತೋಕೂರು ನಿಲ್ದಾಣಗಳಲ್ಲಿ ನಿಲುಗಡೆ ಇದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ.

English summary
Indian Railways will operate holiday special trains between Indore - Kochuveli - Indore, Ahmedabad - Mangalore junction - Ahmedabad, and Mumbai Central - Mangalore junction - Mumbai Central on Konkan Railway route to clear extra rush of passengers during Christmas festival and New Year Celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X