ಕನ್ನಡ, ತುಳು ನಟ-ನಟಿಯರ ಸೆಲೆಬ್ರಿಟಿ ಲಗೋರಿ ಲೀಗ್ ಇನ್ನೇನು ಶುರು

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 9: ಸಿನಿಮಾ ತಾರೆಯರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಎಲ್ಲೆಡೆ ಹವಾ ಎಬ್ಬಿಸಿತ್ತು . ಆ ಕಾರಣದಿಂದಲೇ ಪಂದ್ಯಗಳನ್ನು ವಾಹಿನಿಗಳಲ್ಲಿ ನೇರಪ್ರಸಾರ ಕೂಡ ಮಾಡಲಾಯಿತು. ಕ್ರಿಕೆಟ್ ನಂತರ ಸೂಪರ್ ಕಬಡ್ಡಿ ಲೀಗ್ ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಆರಂಭಗೊಂಡು, ಜನರನ್ನು ಆಕರ್ಷಿಸಿದವು.

ಇಂದು ತುಳುನಾಡಿಗೆ ಪತ್ತನಾಜೆ;ಇನ್ನು 3 ತಿಂಗಳು ಶುಭ ಕಾರ್ಯಕ್ಕೆ ಬ್ರೇಕ್

ಆದರೆ, ಈಗ ದೇಸಿ ಕ್ರೀಡೆ ಲಗೋರಿಯ ಸರದಿ. ಇದೇ ಮೊದಲ ಬಾರಿಗೆ ಆಗಸ್ಟ್ ಹದಿಮೂರರಂದು ಸೆಲೆಬ್ರಿಟಿ ಲಗೋರಿ ಲೀಗ್ ಅನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ .ಈ ಪಂದ್ಯಾವಳಿಗಳು ಬೆಂಗಳೂರಿನ ಚಾಮರಾಜಪೇಟೆಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿವೆ.

Celebrity lagori league will start from August 13th

ರಾಜೇಶ್ ಬ್ರಹ್ಮಾವರ್ ನೇತೃತ್ವದಲ್ಲಿ ಈ ಪಂದ್ಯಾವಳಿಗಳು ನಡೆಯಲಿದ್ದು, ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಈ ಲೀಗ್ ಆಯೋಜಿಸಲಾಗಿದೆ. ಈ ಪಂದ್ಯಾವಳಿಗಳಲ್ಲಿ ಹನ್ನೆರಡು ತಂಡಗಳು ಪಾಲ್ಗೊಳ್ಳಲಿವೆ. ಈ ಪೈಕಿ ಕನ್ನಡ ಚಿತ್ರರಂಗದಿಂದ ಒಂಬತ್ತು ತಂಡಗಳು, ತುಳು ಚಿತ್ರರಂಗದಿಂದ ಎರಡು ತಂಡ ಮತ್ತು ಕಿರುತೆರೆಯಿಂದ ಒಂದು ತಂಡ ಭಾಗವಹಿಸಲಿವೆ.

ರಾಜ್ಯಸಭೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ತುಳು ಹಾಡು ಹಾಡಿದ ಗಮ್ಮತ್ತು

ಪ್ರತಿ ತಂಡದಲ್ಲಿ ಆರು ಆಟಗಾರರಿದ್ದು, ಅದರಲ್ಲಿ ನಾಲ್ವರು ಪುರುಷರು, ಇಬ್ಬರು ಮಹಿಳೆಯರು ಇರಲಿದ್ದಾರೆ.

ತುಳು ಚಿತ್ರರಂಗದ ಎರಡು ತಂಡಗಳು ಈ ಲಗೋರಿ ಲೀಗ್ ಪಂದ್ಯಾವಳಿಗಳಲ್ಲಿ ಭಾಗವಹಿಸಲಿವೆ. ತುಳು ಚಿತ್ರರಂಗದ ಲಗೋರಿ ತಂಡಕ್ಕೆ ಕುಡ್ಲ ಜುಗಾರಿ ವಾರಿಯರ್ಸ್ ಎಂದು ಹೆಸರಿಡಲಾಗಿದ್ದು, ಚಿತ್ರ ನಿರ್ಮಾಪಕ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಮಾಲೀಕತ್ವ ವಹಿಸಿದ್ದಾರೆ.

Celebrity lagori league will start from August 13th

ತುಳು ಚಿತ್ರರಂಗದ ಕುಡ್ಲ ಜುಗಾರಿ ವಾರಿಯರ್ಸ್ ತಂಡದಲ್ಲಿ ಚಿತ್ರ ತಾರೆಗಳಾದ ಅನೂಪ್ ಸಾಗರ್, ಅರೂಲ್ ಅಮೀನ್, ಸೌರಭ್ ಭಂಡಾರಿ, ನಿಖಿತ್ ಕೊಟ್ಟಾರಿ, ಆರಾಧ್ಯ ಶೆಟ್ಟಿ , ಪೂಜಾ ಶೆಟ್ಟಿ, ತನುಜಾ, ಶ್ರೇಯಾ ದಾಸ್, ಸ್ವಾತಿ ಬಂಗೇರಾ, ಪ್ರಜೇಶ ಶೆಟ್ಟಿ, ರಿತೇಶ್ ಬಂಗೇರಾ, ರಂಜಿತಾ, ಪ್ರಶಾಂತ ಕಂಕನಾಡಿ, ಸೂರಜ್ ಕುಮಾರ್ ಇನ್ನಿತರರು ತಂಡದಲ್ಲಿ ಇರಲಿದ್ದಾರೆ.

ತುಳು ಚಿತ್ರ ರಂಗದ ಜುಗಾರಿ ವಾರಿಯರ್ ತಂಡದ ನಾಯಕತ್ವವನ್ನು ರೂಪೇಶ್ ಶೆಟ್ಟಿ ವಹಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After the success of celebrity cricket league, Celebrity lagori leaguewill start from August 13th. Kannada, Tulu film stars and tv actors will participate in this league.
Please Wait while comments are loading...