ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆಗೆ ಒಪ್ಪಿಗೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಮಾ.5 : ಮಂಗಳೂರು ವಿಮಾನ ನಿಲ್ದಾಣದಿಂದ ಏಪ್ರಿಲ್ ತಿಂಗಳಾಂತ್ಯಕ್ಕೆ ದೇಶದ ಎಲ್ಲ ಪ್ರಮುಖ ನಗರಗಳಿಗೂ ಸರಕು ಸಾಗಾಟ ಸೇವೆ ಆರಂಭವಾಗಲಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸರಕು ಸಾಗಾಟ ವ್ಯವಸ್ಥೆ ಆರಂಭಿಸಲು ಒಪ್ಪಿಗೆ ನೀಡಿದೆ.

ದಕ್ಷಿಣ ಭಾರತದ ಪ್ರಮುಖ ನಗರಗಳಾದ ಚೆನ್ನೈ, ವಿಶಾಖಪಟ್ಟಣಂ, ತಿರುಚಿನಾಪಳ್ಳಿ ಹಾಗೂ ಮಂಗಳೂರಿನಿಂದ ಏರ್ ಕಾರ್ಗೋ ಸೇವೆ ಆರಂಭಿಸಲು ಪ್ರಾಧಿಕಾರ ಒಪ್ಪಿಗೆ ನೀಡಿದ್ದು, ಕೆಂಜಾರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೇವೆ ಆರಂಭವಾಗಲಿದೆ. [ಮಂಗಳೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ]

Mangaluru

ಮುಂಬೈನ 'ಸೆಂಟ್ರಲ್ ಕಾರ್ಗೋ ಸರ್ವಿಸ್' ಸಂಸ್ಥೆ ಏರ್ ಕಾರ್ಗೋ ಸೇವೆ ನೀಡುವ ಗುತ್ತಿಗೆಯನ್ನು ಪಡೆದುಕೊಂಡಿದೆ. ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ಎಂದು ವಿಮಾನ ನಿಲ್ದಾಣಗಳಲ್ಲಿ ಈ ಸಂಸ್ಥೆ ಕಾರ್ಗೋ ಸೇವೆ ನೀಡುತ್ತಿದೆ. ಮಂಗಳೂರು ನಿಲ್ದಾಣದಲ್ಲಿ ಸರಕು ನಿರ್ವಹಣೆಗೆ ಬೇಕಾದ ಸ್ಥಳಾವಕಾಶವನ್ನು ಡೆಕ್ಕನ್ ಪಾರ್ಕ್‌ನಲ್ಲಿ ಕಲ್ಪಿಸಿಕೊಡಲಾಗಿದೆ. [ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಕಿರೀಟ]

ಪ್ರಾಧಿಕಾರದಿಂದ ದರ ನಿರ್ಧಾರ : ದೇಶೀಯವಾಗಿ ಸರಕು ಸಾಗಾಟದ ದರವನ್ನು ಪ್ರಾಧಿಕಾರ ನಿರ್ಧರಿಸಲಿದೆ. ಇಂತಿಷ್ಟು ಟನ್ ಕಾರ್ಗೋಗೆ ಇಂತಿಷ್ಟು ದರ ವಸೂಲಿ ಮಾಡಬೇಕು ಎಂದ ದರ ನಿಗದಿಗೊಳಿಸಿ, ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಗೆ ನೀಡಲಿದೆ. [ಮಂಗಳೂರು : ವಿಮಾನ ನಿಲ್ದಾಣಕ್ಕೆ ಎರಡು ಏರೋ ಬ್ರಿಡ್ಜ್]

ನಿರ್ವಹಣೆ ಹೇಗೆ? : ಮಂಗಳೂರಿನಿಂದ ಸಂಚರಿಸುವ ವಿಮಾನಗಳಲ್ಲಿ ಈ ಕಾರ್ಗೋ ಸಾಗಾಟ ನಡೆಯಲಿದೆ. ವಿಮಾನ ಸಂಸ್ಥೆಗಳು ಕಾರ್ಗೋ ಬುಕ್ಕಿಂಗ್ ಮಾಡುತ್ತವೆ. ಸರಕನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿಸಿದರೆ, ಅಲ್ಲಿ ಸಮಗ್ರ ಪರಿಶೀಲನೆ, ಸ್ಕ್ಯಾನಿಂಗ್ ಆದ ಬಳಿಕ ಸಂಬಂಧಪಟ್ಟ ವಿಮಾನದಲ್ಲಿ ಸಾಗಾಟ ಮಾಡಲಾಗುತ್ತದೆ.

English summary
The long awaited cargo service from Mangaluru International Airport has finally received nod from the central government. Cargo service will start functioning from April 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X