ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿ.ಪಿ.ರಮೇಶ್ ವಿರುದ್ಧ ಮಹಿಳಾ ಮೋರ್ಚಾದಿಂದ ಪ್ರತಿಭಟನೆ

|
Google Oneindia Kannada News

ಮಂಗಳೂರು, ಆ.21 : ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರೇಷ್ಮೆ ಮಂಡಳಿ ಅಧ್ಯಕ್ಷ ಡಿ.ಪಿ.ರಮೇಶ್ ಅವರ ಅಸಭ್ಯ ನಡವಳಿಕೆಯನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇಂದು ಬೃಹತ್ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ, 'ಭಾರತಿ ಶೆಟ್ಟಿ ಕಾಂಗ್ರೆಸ್ ಆಡಳಿತಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ'. ಎಂದು ದೂರಿದರು.

ಕೊಡಗಿನಲ್ಲಿ ಟಿ.ಪಿ.ರಮೇಶ್ 'ಕೈ' ಹಿಡಿಯದ ನಾಯಕರುಕೊಡಗಿನಲ್ಲಿ ಟಿ.ಪಿ.ರಮೇಶ್ 'ಕೈ' ಹಿಡಿಯದ ನಾಯಕರು

BJP Mahila Morcha protest's against Congress leader T P Ramesh

'ಮಹಿಳಾ ಉದ್ಯೋಗಿಗಳು ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಭ್ರಷ್ಟಚಾರ ಮತ್ತು ಅನೈತಿಕತೆ ಮಿತಿ ಮೀರಿದೆ. ಕಾಂಗ್ರೆಸ್ ಮುಖಂಡರು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದಕ್ಕೆ ಮಡಿಕೇರಿ ಪ್ರಕರಣವೇ ಸಾಕ್ಷಿ' ಎಂದರು.

ವಿಧಾನ ಪರಿಷತ್ ಸದಸ್ಯೆ ಜತೆ ಕೈ ನಾಯಕನ ಕೈಯಾಟವಿಧಾನ ಪರಿಷತ್ ಸದಸ್ಯೆ ಜತೆ ಕೈ ನಾಯಕನ ಕೈಯಾಟ

'ಸ್ವಾತಂತ್ರ್ಯದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ರೇಷ್ಮೆ ಮಂಡಳಿ ಅಧ್ಯಕ್ಷ ಡಿ.ಪಿ.ರಮೆಶ್ ಅವರನ್ನು ಕೂಡಲೇ ಪಕ್ಷ ಹಾಗೂ ರೇಷ್ಮೆ ಮಡಳಿಯಿಂದ ವಜಾ ಮಾಡಬೇಕು ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮುಂದುವರೆಸಲಾಗುವುದು' ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು, ರಾಜ್ಯ ಉಪಾಧ್ಯಕ್ಷೆ ಜಿ.ಕೆ.ಸುಲೋಚನಾ ಭಟ್, ಮೋನಪ್ಪ ಭಂಡಾರಿ. ರೂಪಾ ಡಿ ಬಂಗೇರಾ ಮತ್ತಿತರ ಮಹಿಳಾ ಘಟಕದ ಪ್ರಮುಖರು ಪಾಲ್ಗೊಂಡಿದ್ದರು.

English summary
The BJP Mahila Morcha's Dakshina Kannada unit today staged a protest against Former President of Madikeri Congress unit and current Chairman of the Silk Board T.P.Ramesh who was caught on camera attempting to hold MLC Veena Achaiah's hand during an independence day function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X