ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಟಿಪ್ಪು ಜಯಂತಿಗೆ ಅಡ್ಡಿ, ನೂರಾರು ಜನರ ಬಂಧನ

ಮಂಗಳೂರಿನ ಜಿಪಂ ಆವರಣದಲ್ಲಿ ಏರ್ಪಡಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಬಿಜೆಪಿ ಹಾಗೂ ಹಿಂದೂ ಪರ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮುತ್ತಿಗೆ ಹಾಕಲು ಯತ್ನಿಸಿದರು.ಪ್ರತಿಭಟನೆಕಾರರನ್ನು ತಡೆದ ಪೊಲೀಸರು ವಶಕ್ಕೆ ಪಡೆದರು.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ .10 : ಟಿಪ್ಪು ಜಯಂತಿ ಆಚರಣೆಗೆ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಪರ ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶಿಸಿ ತೀವ್ರ ವಿರೋಧ ವ್ಯಕ್ತಡಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಜಿಪಂ ಆವರಣದಲ್ಲಿ ನಡೆಯುತ್ತಿದ್ದ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಬಿಜೆಪಿಯ ನೂರಾರು ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಸಿದ್ದಾರೆ. ಪ್ರತಿಭಟನೆಕಾರರನ್ನು ತಡೆದ ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ತಳ್ಳಾಟ ನಡೆಯಿತು.

ಇದರಿಂದ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಯೋಗೀಶ್ ಭಟ್ ಸೇರಿದಂತೆ ಪ್ರತಿಭಟನೆಕಾರರನ್ನು ಪೋಲಿಸರು 3 ಬಸ್ ಗಳಲ್ಲಿ ಬಂಧಿಸಿದ್ದಾರೆ. [ಟಿಪ್ಪು ಜಯಂತಿ: ಗುಪ್ತಚರ ಇಲಾಖೆಯಿಂದ ಸರಕಾರಕ್ಕೆ ಸ್ಪೋಟಕ ವರದಿ]

BJP activists barge into Tippu Jayanti venue arrested

ಟಿಪ್ಪು ಜಯಂತಿಗೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಮೊದಲಿನಿಂದಲೂ ವಿರೋಧಿಸುತ್ತಿವೆ. ನ.10 ಬಿಜೆಪಿ ಕರಾಳ ದಿನವನ್ನಾಗಿ ಆಚರಸುತ್ತೇವೆ ಹಾಗೂ ರಾಜ್ಯದ್ಯಾಂತ ಪ್ರತಿಭಟನೆ ನಡೆಸಲಾಗುವುದು ಹೇಳಲಾಗಿತ್ತು. ಅದರಂತೆ ಮಡಿಕೇರಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತೀವ್ರ ಪ್ರತಿಭಟನೆಗಳನ್ನು ಕಾರ್ಯತರ್ಕರು ನಡೆಸಿದ್ದಾರೆ.

English summary
Activists of the BJP tried to barge into the venue to stop the Tippu Jayanti celebration at Mangalore ZP here on November 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X