ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ದೃಶ್ಯಕಲೆಯಲ್ಲಿ ಪದವಿ, ಉದ್ಯೋಗ

By Prasad
|
Google Oneindia Kannada News

ಮಂಗಳೂರು, ಮೇ. 25 : ದ್ವಿತೀಯ ಪಿಯುಸಿ ಓದಿದ ಮೇಲೆ ಯಾವ ಪದವಿಗೆ ಸೇರಬೇಕೆಂಬ ಗೊಂದಲ ಅನೇಕರಲ್ಲಿರುತ್ತದೆ. ಇಂಜಿನಿಯರಿಂಗ್, ಮೆಡಿಕಲ್ ಸೀಟು ಸಿಗದಿದ್ದರೇನಂತೆ, ಬಿಎಸ್ಸಿ ಬಿಕಾಂ ಬಿಎ ಮಾಡಲು ಆಸಕ್ತಿ ಇಲ್ಲದಿದ್ದರೇನಂತೆ, ವಿಶುವಲ್ ಆರ್ಟ್ಸಲ್ಲಿ ಆಸಕ್ತಿಯಿದ್ದರೆ ಅಂಥ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶ ಆಳ್ವಾಸ್ ಸಂಸ್ಥೆ ಒದಗಿಸಿಕೊಡುತ್ತಿದೆ.

ಚಿತ್ರಕಲೆಯಲ್ಲಿ ಆಸಕ್ತಿಯಿರುವ ವಿದ್ಯಾಥಿಗಳಿಗೆ ಚಿತ್ರಕಲೆಯಲ್ಲಿಯೇ ಪದವಿ ಪಡೆದು ಅದೇ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡಲು ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಪ್ರಪ್ರಥಮವಾಗಿ ಬಿ.ವಿ.ಎ.(ಬ್ಯಾಚುಲರ್ ಆಪ್ ವಿಸುವಲ್ ಆರ್ಟ್) ಪದವಿಯನ್ನು ಪ್ರಾರಂಭಿಸಿದ ಹೆಗ್ಗಳಿಕೆ ಆಳ್ವಾಸ್ ಸಂಸ್ಥೆಯದ್ದಾಗಿದೆ. [ಸಿಬಿಎಸ್ಇ ಕ್ಲಾಸ್ 12 ಪರೀಕ್ಷೆ ಫಲಿತಾಂಶ]

Bechelor of Visual Arts for PUC pass students by Alvas, Moodbidri

ವಿಪುಲ ಅವಕಾಶಗಳು : ಚಿತ್ರಕಲೆಯಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿ ಬಹಳಷ್ಟು ಬೇಡಿಕೆ ಇದ್ದು, ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳೂ ಕೂಡ ಹೆಚ್ಚುತ್ತಿವೆ. ಜಾಹೀರಾತು ಹಾಗೂ ವಿವಿಧ ಸಾಪ್ಟ್‌ವೇರ್ ಕಂಪನಿಗಳಲ್ಲಿ ವೆಬ್ ಡಿಸೈನರ್, ಗ್ರಾಫಿಕ್ ಡಿಸೈನರ್, ಅನಿಮೇಟರ್, ಆರ್ಟ್‌ ಡೈರೆಕ್ಟರ್, ವಿಜುವಲೈಸರ್, ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶಗಳಿವೆ ಹಾಗೂ ಚಿತ್ರಕಲಾವಿದರಾಗಿ ಮತ್ತು ಶಿಲ್ಪಕಲಾವಿದರಾಗಿಯೂ ಸ್ವ-ಉದ್ಯೋಗವನ್ನೂ ಕೂಡ ಮಾಡಬಹುದಾಗಿದೆ.

ಚಿತ್ರಕಲಾ ಪದವಿ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಆಳ್ವಾಸ್ ಸಂಸ್ಥೆ ಆಯೋಜಿಸುವ ಉದ್ಯೋಗ ಮೇಳದಲ್ಲಿ ಉದ್ಯೋಗದ ಅವಕಾಶಗಳು ಲಭ್ಯವಿರುತ್ತದೆ. ಈಗಾಗಲೇ ಈ ಪದವಿಗೆ ಶ್ರೀಲಂಕಾ, ಮಣಿಪುರ, ಕೇರಳ ಹಾಗೂ ಕರ್ನಾಟಕದಿಂದ ಬಂದಿರುವ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಿ.ವಿ.ಎ. ಪದವಿಯಲ್ಲಿ ಪೈಂಟಿಂಗ್, ಅಪ್ಲೈಡ್‌ಆರ್ಟ್ (ವಾಣಿಜ್ಯಕಲೆ), ಸ್ಕಲ್ಪಚರ್(ಶಿಲ್ಪಕಲೆ) ಹೀಗೆ ಮೂರು ವಿಭಾಗಗಳಿದ್ದು ವಿದ್ಯಾರ್ಥಿಗಳು ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪಿಯುಸಿ ಪಾಸಾಗಿರುವ ವಿದ್ಯಾರ್ಥಿಗಳು ಈ ಪದವಿಗೆ ಪ್ರವೇಶ ಪಡೆಯಬಹುದಾಗಿದೆ.

Bechelor of Visual Arts for PUC pass students by Alvas, Moodbidri

ಮೂಡಬಿದಿರೆಯ ಆಳ್ವಾಸ್ ಸಂಸ್ಥೆ : ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಆಳ್ವಾಸ್ ಸಂಸ್ಥೆಯು ನಮ್ಮ ನಾಡಿನ ಕಲಾ ಪರಂಪರೆಗೆ ಉತ್ತೇಜನ ನೀಡುವಲ್ಲಿ ಬಹಳ ಪ್ರಾಮಾಣಿಕವಾದ ಕೆಲಸವನ್ನು ನಿರ್ವಹಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಪ್ರತಿಯೊಂದು ಕಲೆಯನ್ನು ಒಗ್ಗೂಡಿಸುವ ಜೊತೆಜೊತೆಗೆ ಚಿತ್ರಕಲೆಗೂ ಪ್ರಾಧಾನ್ಯತೆ ನೀಡಿರುವುದು ಗಮನಾರ್ಹ. ಚಿತ್ರಕಲೆಗೆ ಸಂಬಂಧಪಟ್ಟಂತೆ ಪ್ರತಿ ವರ್ಷ ಚಿತ್ರಸಿರಿ, ಶಿಲ್ಪಸಿರಿ, ವರ್ಣವಿರಾಸತ್, ಶಿಲ್ಪವಿರಾಸತ್ ಹೀಗೆ ಹತ್ತು ಹಲವು ಶಿಬಿರಗಳನ್ನು ಏರ್ಪಡಿಸಿ ಡಾ. ಎಂ. ಮೋಹನ್ ಆಳ್ವರವರು ದೃಶ್ಯ ಕಲೆಗೆ ಬಹಳ ಪ್ರಮುಖವಾದ ಸ್ಥಾನವನ್ನು ನೀಡುತ್ತಿದ್ದಾರೆ. ಪ್ರಪಂಚದ ಬೇರೆ ಬೇರೆ ಪ್ರದೇಶಗಳಿಂದ ಹೆಸರಾಂತ ಚಿತ್ರಕಲಾವಿದರನ್ನು ಆಳ್ವಾಸ್ ಸಂಸ್ಥೆಗೆ ಆಹ್ವಾನಿಸಿ ಗೌರವಿಸುತ್ತಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಶರತ್ ಕುಮಾರ್ ಶೆಟ್ಟಿ, ವಿಶುವಲ್ ಆರ್ಟ್ಸ್ ವಿಭಾಗದ ಮುಖ್ಯಸ್ಥ, 9449279483
ಪ್ರೊ. ಕುರಿಯನ್, ಆಳ್ವಾಸ್ ಕಾಲೇಜು ಪ್ರಾಂಶುಪಾಲರು, 9740668967.

English summary
Second PUC pass students, who have failed to get engineering or medical seat and who are not interested in studying B.Sc., B.Com or BA, can choose Bachelor of Visual Arts degree and nurture their talent in visual media. Alva's college in Moodbidri by Dr. M Mohan Alva has started this BVA for the first time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X