ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಟ್ವಾಳ: ನಿಧಿ ಆಸೆಗೆ ಮನೆ ಮಂದಿಯನ್ನು ಕಟ್ಟಿ ಹಾಕಿದ್ದ ಆರೋಪಿಗಳ ಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ. 05 : ಬಂಟ್ವಾಳ ತಾಲೂಕಿನ ಕರೋಪಾಡಿಯಲ್ಲಿ ಜನವರಿ 24ರಂದು ನಡೆದಿದ್ದ ನಿಧಿ ಶೋಧ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಾಸರಗೋಡು ಪೈವಳಿಕೆ ನಿವಾಸಿ ಆಶಿಕ್ ಪಿ. (19), ಬಂಟ್ವಾಳ ತಾಲೂಕು ಕನ್ಯಾನ ಗ್ರಾಮ ಇಕ್ಬಾಲ್ ಯಾನೆ ಇಕ್ಕು (22), ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಯಾನೆ ಅಲಿ ಮೋನು (29), ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಅಬ್ಬಾಸ್ (26), ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಅಶ್ರಫ್ ಯಾನೆ (ಎಲ್‌ಟಿಟಿ ಅಶ್ರಫ್) (21) ಎಂದು ಗುರುತಿಸಲಾಗಿದೆ. [ನಿಧಿ ಆಸೆಗೆ ಮನೆ ಮಂದಿಯನ್ನು ಕಟ್ಟಿ ಹಾಕಿದ ಭಲೇ ಕಿಲಾಡಿಗಳು!]

Bantwal gang which bound family and dug ground for hidden treasure arrested

ಬಂಧಿತರಿಂದ ಒಂದು ಇನ್ನೋವಾ, ಒಂದು ಆಲ್ಟೊ ಕಾರು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಪೈವಳಿಕೆ ವಾಸಿ ಶಫಿ ಯಾನೆ ಎಂಎಲ್ ಎ ಶಫಿ, ಕೇರಳದ ಶಫಿ ಯಾನೆ ಚೋಟು ಶಫಿ, ಮಿತ್ತನಡ್ಕ ಹ್ಯಾರಿಸ್ ಸಹಿತ ಕೆಲವರಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಎರಡು ಕಾರುಗಳಲ್ಲಿ ಬಂದಿದ್ದ ತಂಡ ಎರಡು ಗಂಟೆಗಳ ಕಾಲ ಭೂಮಿ ಅಗೆದು ಬೆಳಗ್ಗೆ 4.30 ಕ್ಕೆ ಬರಿಗೈಲಿ ತೆರಳಿದ್ದರು. ಪೊಲೀಸರಿಗೆ ಸುಳಿವು ಸಿಗಬಾರದು ಎಂದು ಸಿಸಿ ಕ್ಯಾಮಾರದ ಡಿವಿಆರ್ ಹಾಗೂ ಎರಡು ಮೊಬೈಲ್‌ನಲ್ಲಿದ್ದ ನಾಲ್ಕು ಸಿಮ್ ಗಳನ್ನು ಕದ್ದಿದ್ದರು. ಈ ಸಂಬಂಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜನವರಿ 24ರಂದು ಕರೋಪಾಡಿ ಗ್ರಾಮದ ಅರಸಳಿಕೆ ವಿಘ್ನರಾಜ ಭಟ್ ಮನೆಗೆ ನುಗ್ಗಿ, ಮನೆಯವರನ್ನು ಬೆದರಿಸಿ ನಿಧಿಶೋಧಕ್ಕೆ ಮುಂದಾಗಿದ್ದರು. ಬಳಿಕ ಅಲ್ಲಿ ನಿಧಿ ಸಿಗದೆ ಬರಿಗೈನಲ್ಲಿ ಪರಾರಿಯಾಗಿದ್ದರು.

English summary
Five members of a gang who had arrived at the house in Karopady village in mangaluru here on January 24 in two cars, tied up the family members besides threatening them, and then up a spot adjacent to their house in search of hidden treasure, were arrested by the police personnel on Saturday February 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X