ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾವಿನೊಂದಿಗೆ ಕಾದಾಡಿ ಗೆದ್ದ 11ರ ಪೋರ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಬಂಟ್ವಾಳ, ಅಕ್ಟೋಬರ್, 05 : ತನ್ನ ಪ್ರಾಣ ಹೋಗುವ ಸಂದರ್ಭದಲ್ಲಿ ಮನುಷ್ಯ ತನ್ನ ಪ್ರಾಣ ಕಾಪಾಡಿಕೊಳ್ಳಲು ಏನೇಲ್ಲಾ ಮಾಡುತ್ತಾನೆ ಎಂಬುದುಕ್ಕೆ ಉದಾಹರಣೆಯೊಂದು ಇಲ್ಲಿದೆ.

11 ರ ಪೋರ ಹೆಬ್ಬಾವಿನೊಂದಿಗೆ ಕಾದಾಡಿ ಹೆಬ್ಬಾವನ್ನು ಗಾಯಗೊಳಿಸಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ಬಂಟ್ವಾಳದ ಸಜೀಪ ಎಂಬಲ್ಲಿ ನಡೆದಿದೆ. ಸಜೀಪ ಆದರ್ಶ ಆಂಗ್ಲಮಾಧ್ಯಮ ಶಾಲೆಯ ವ್ಯಾಸಂಗ ಮಾಡುತ್ತಿರುವ 11ರ ಹರೆಯದ ವೈಶಾಖ್ ಹೆಬ್ಬಾವಿನೊಂದಿಗೆ ಕಾದಾಡಿ ಜೀವ ಉಳಿಸಿಕೊಂಡ ಬಾಲಕ.

Vaishakh

ವೈಶಾಕ್ ಮಂಗಳವಾರ ಸಂಜೆ ತನ್ನ ಅಜ್ಜಿ ಮನೆಗೆ ಕಾಲು ದಾರಿಯಲ್ಲಿ ಹೋಗುತ್ತಿದ್ದ ವೇಳೆ ಪೊದೆಯಲ್ಲಿದ್ದ ಹೆಬ್ಬಾವೊಂದು ವೈಶಾಕ್ ಮೇಲೆ ಎರಗಿದೆ. ನಂತರ ಆ ಬಾಲಕನನ್ನು ಸುತ್ತಿಕೊಳ್ಳಲು ಪ್ರಾರಂಭಿಸಿದೆ. ಹೆಬ್ಬಾವಿನಿಂದ ಕಾಪಾಡುವಂತೆ ಬಾಲಕ ಕೂಗಿದ್ದಾನೆ ಆದರೆ ದುರಾದೃಷ್ಟ ವೈಶಾಖ್ ನ ಕೂಗು ಯಾರಿಗೂ ಕೇಳಿಸಲಿಲ್ಲ.

ಇನ್ನೇನು ಹೆಬ್ಟಾವು ಬಾಲಕನ ಕೈ, ಕಾಲುಗಳಿಗೆ ಬಾಯಿ ಹಾಕಿ ನುಂಗಲು ಪ್ರಯತ್ನಿಸುತ್ತಿದ್ದಂತಯೇ ವೈಶಾಕ್ ಧೈರ್ಯದಿಂದ ಪಕ್ಕದಲ್ಲಿದ್ದ ಕಲ್ಲೊಂದನ್ನು ಕೈಗೆತ್ತಿಕೊಂಡು ಹಾವಿನ ಮುಖಕ್ಕೆ ಜಜ್ಜಿದ್ದಾನೆ. ಈ ಪೋರ ಕೊಟ್ಟ ಏಟಿಗೆ ಹೆಬ್ಬಾವು ತೀವ್ರ ಗಾಯಗೊಂಡು ಈತನ ಕೈಯನ್ನು ಬಿಟ್ಟಿದೆ.

ನಂತರ ಬಾಲಕ ಹೆಬ್ಬಾವಿನಿಂದ ತಪ್ಪಿಸಿಕೊಂಡು ಬಂದ್ದಾನೆ. ವೈಶಾಖ್ ಗೆ ಗಾಯಗಳಾಗಿದ್ದು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

English summary
In an incident which happened at Kolake near Sajipa in the taluk on Tuesday October 4, a brave 11-year-old fought his way out from the vice-like grip of a python.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X