ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಗುರುವಾರವೂ ರಸ್ತೆಗಿಳಿಯದ ಆಟೋಗಳು

|
Google Oneindia Kannada News

ಮಂಗಳೂರು, ಜ.29 : ಆಟೋ ರಿಕ್ಷಾ ದರಗಳನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ಆಟೋ ಚಾಲಕರ ಹೋರಾಟ ಸಮಿತಿ ಕರೆ ನೀಡಿದ್ದ ಬಂದ್ ಗುರುವಾರವೂ ಮುಂದುವರೆದಿದೆ. ಆಟೋ ಚಾಲಕರ ಜೊತೆ ಜಿಲ್ಲಾಡಳಿತ ನಡೆಸಿದ ಸಭೆಯೂ ವಿಫಲಗೊಂಡಿದೆ.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಜ. 12ರಂದು ಆಟೋ ರಿಕ್ಷಾ ದರಗಳನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಆಟೋದಲ್ಲಿ ಕನಿಷ್ಠ ದರದಲ್ಲಿ 5 ರೂ. ಕಡಿಮೆ ಮಾಡಲಾಗಿದೆ. ರೂ.25 ಇದ್ದ ದರವನ್ನು 20 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಇದಕ್ಕೆ ಆಟೋ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Mangaluru

ಆಟೋ ಚಾಲಕರು ನೂತನ ದರವನ್ನು ಪಡೆಯದೇ ಹಳೆಯ ದರವನ್ನೇ ಪಡೆಯುತ್ತಿದ್ದರು. ಇದು ಪ್ರಾಧಿಕಾರದ ಗಮನಕ್ಕೆ ಬಂದ ನಂತರ ಪ್ರಾಧಿಕಾರ ನಿಗದಿಪಡಿಸಿದ ಪ್ರಯಾಣದರವನ್ನು ಮಾತ್ರ ಪಡೆಯಬೇಕು. ಅಧಿಕ ಪ್ರಯಾಣ ದರ ವಸೂಲಿ ಮಾಡುವ ಅಟೋ ರಿಕ್ಷಾ ಚಾಲಕರ/ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಧಿಕಾರ ಎಚ್ಚರಿಕೆ ನೀಡಿತು. [ಮಂಗಳೂರು : ಖಾಸಗಿ ಬಸ್, ಆಟೋ ದರದ ಬಗ್ಗೆ ಗೊಂದಲ]

mangaluru auto

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಟೋ ಚಾಲಕರು ಪ್ರಯಾಣದರವನ್ನು ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ಬುಧವಾರ ಬಂದ್‌ಗೆ ಕರೆ ನೀಡಿದ್ದರು. ಗುರುವಾರವೂ ಆಟೋ ಚಾಲಕರು ತಮ್ಮ ಮುಷ್ಕರವನ್ನು ಮುಂದುವರೆಸಿದ್ದಾರೆ. [ಮೈಸೂರು : ಕೆಆರ್ ಆಸ್ಪತ್ರೆ ಬಳಿ ಪ್ರೀ ಪೇಯ್ಡ್ ಆಟೋ]

auto mangaluru

ಜಿಲ್ಲಾಧಿಕಾರಿ ಹೇಳುವುದೇನು : ಆಟೋ ಚಾಲಕರ ಮುಷ್ಕರದ ಕುರಿತು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಪ್ರತಿಕ್ರಿಯೆ ನೀಡಿದ್ದು, ಆಟೋ ಗ್ಯಾಸ್‌ ದರ ಶೇ. 50ರಷ್ಟು ಕಡಿಮೆ ಆದ ಕಾರಣದಿಂದ ರಿಕ್ಷಾ ದರದಲ್ಲಿ ಶೇ. 20ರಷ್ಟು ಮಾತ್ರ ಕಡಿಮೆ ಮಾಡಲಾಗಿದೆ. ಚಾಲಕರ ಜೊತೆ ಮಾತುಕತೆಗೆ ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಹೇಳಿದ್ದಾರೆ. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]

dakshina kannada
English summary
Autorickshaw unions have decided to continue the strike in Manaluru city for one more day. Unions protesting against the fare reduction by the Regional Transport Authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X