ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಶಿಕ್ಷಣ ಮಹತ್ವ ತೆರೆದಿಟ್ಟ ಅಸ್ಸಾಂ ರಾಜ್ಯಪಾಲ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್, 27: ಶಿಕ್ಷಣ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವುದರ ಜೊತೆಗೆ ದೇಶದ ಏಕತೆ ಕಾಪಾಡಲು ಸಹಕರಿಸುತ್ತದೆ. ಶಿಕ್ಷಣವು ಜನರಲ್ಲಿ ತಾರತಮ್ಯ ಭೇದದ ಮನೋಭಾವವನ್ನು ಜನರಿಂದ ತೊಲಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಸ್ಸಾಂ ರಾಜ್ಯಪಾಲ ಪಿ.ಬಿ. ಆಚಾರ್ಯ ಶಿಕ್ಷಣದ ಪ್ರಾಮುಖ್ಯತೆ ತಿಳಿಸಿದರು.

ಮಂಗಳೂರಿನ ದೇರಳಕಟ್ಟೆಯ ಕೆ.ಎಸ್. ಹೆಗ್ಡೆಯ ಸಭಾಂಗಣದಲ್ಲಿ ಈಶಾನ್ಯ ರಾಜ್ಯಗಳ ಅಧ್ಯಯನ ಕೇಂದ್ರದ ವತಿಯಿಂದ ಗುರುವಾರ ನಡೆದ 'ನಮಸ್ತೆ, ಸೆಂಟರ್ ಫಾರ್ ಸ್ಟಡಿ ಆಫ್ ನಾರ್ಥ್ ಈಸ್ಟರ್ನ್ ಸ್ಟೇಟ್ಸ್' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಾನಾ ವಿಚಾರಗಳನ್ನು ಮಾತನಾಡಿದರು.[ಮುಂದಿನ ಶೈಕ್ಷಣಿಕ ವರ್ಷದಿಂದ ಸೆಮಿಸ್ಟರ್ ಬದಲು ವಾರ್ಷಿಕ ಪಠ್ಯಕ್ರಮ]

Assam Governor have attended 'Namaste Centre for study of North Eastern States programme in Mangaluru

ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಲ್ಯಾಂಡ್, ತ್ರಿಪುರ ಸಂಪನ್ಮೂಲ ನಾಡಾಗಿದೆ. ಆದರೆ ಈ ರಾಜ್ಯದಲ್ಲಿನ ಸಂಪನ್ಮೂಲಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಭಾರತ ದೇಶವು ಮೂಲತಃ ಶ್ರೀಮಂತ ದೇಶ. ಆದರೆ ಇಂದು ಭಾರತದಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಲೇ ಹೋಗುತ್ತಿದ್ದಾರೆ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ತೋರುತ್ತದೆ ಎಂದು ವ್ಯಂಗ್ಯವಾಡಿದರು.[ಅನಾಥ, ನಿರ್ಗತಿಕ ಮಕ್ಕಳಿಗಾಗಿ ಎಡಿಫೈನಿಂದ ಕೊಡುಗೆ]

ಈ ಸಮಾರಂಭದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎನ್. ವಿನಯ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಕುಲಪತಿ ಡಾ. ಎಸ್. ರಮಾನಂದ ಶೆಟ್ಟಿ, ಡಾ. ಎಂ. ಶಾಂತಾರಾಮ್ ಶೆಟ್ಟಿ, ಕವಿತಾ ಆಚಾರ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

English summary
Assam Governor have attended 'Namaste Centre for study of North Eastern States programme in Mangaluru on Thursday, November 27th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X