ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾನುವಾರ ಮಂಗಳೂರಿಗೆ ಅಮಿತ್ ಶಾ, ಕಾರ್ಯಕ್ರಮಗಳು

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 20 : ಉಳ್ಳಾಲದ ವೀರರಾಣಿ ಅಬ್ಬಕ್ಕನ ನಾಡಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆ.21ರ ಭಾನುವಾರ ಭೇಟಿ ನೀಡಲಿದ್ದಾರೆ. '70ನೇ ಸ್ವಾತಂತ್ರ್ಯೊತ್ಸವ ಬಲಿದಾನ ಸ್ಮರಣೆ' ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು ಪಾಲ್ಗೊಳ್ಳಲಿದ್ದು, ಸುಮಾರು 5 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಭಾನುವಾರ ಬೆಳಗ್ಗೆ 11.30ಕ್ಕೆ ಮಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ 'ತಿರಂಗಾ ಯಾತ್ರೆ ಬೃಹತ್ ಸಾರ್ವಜನಿಕ ಸಭೆ' ನಡೆಯಲಿದೆ. ವಿವಿಯ ಮಂಗಳಾ ಸಭಾಂಗಣವನ್ನು ಇದಕ್ಕಾಗಿ ಸಜ್ಜುಗೊಳಿಸಲಾಗಿದೆ. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವ ಕಾರಣ ಸಭಾಂಗಣದ ಮುಂಭಾಗ ಬೃಹತ್ ಚಪ್ಪರ ನಿರ್ಮಿಸಲಾಗಿದೆ.[ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಳ್ಳಾಲಕ್ಕೆ]

amit shah

ಮಂಗಳಾ ಸಭಾಂಗಣದ ಒಳಗೆ ಸುಮಾರು ಒಂದೂವರೆ ಸಾವಿರ ಮಂದಿ ಕುಳಿತುಕೊಳ್ಳಬಹುದು. ಉಳಿದ ಜನರಿಗೆ ಅನುಕೂಲವಾಗುವಂತೆ ಸಭಾಂಗಣ ಮುಂಭಾಗದಲ್ಲಿ ಚಪ್ಪರ ಹಾಕಲಾಗುತ್ತಿದ್ದು, ಕಾರ್ಯಕ್ರಮವನ್ನು ವೀಕ್ಷಿಸಲು ಅನುಕೂಲವಾಗುವಂತೆ 3 ಎಲ್ಇಡಿ ಪರದೆಯನ್ನು ಅಳವಡಿಸಲಾಗುತ್ತಿದೆ.[ಚಿತ್ರಗಳು : ಕರ್ನಾಟಕದಲ್ಲಿ ಬಿಜೆಪಿಯ ತಿರಂಗ ಯಾತ್ರೆ]

ಅಮಿತ್ ಶಾ ಅವರ ಜೊತೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಮಿತ್ ಶಾ ಕಾರ್ಯಕ್ರಮಗಳು

* ಬೆಳಗ್ಗೆ 10 ಗಂಟೆಗೆ ಬಿಜೆಪಿ ಕಚೇರಿ ಮುಂಭಾಗ 'ಗಿಡ ನೆಡಿ ಪರಿಸರ ಉಳಿಸಿ' ಕಾರ್ಯಕ್ರಮ
* 10.20ಕ್ಕೆ ಪಂಪ್​ವೆಲ್ ವೃತ್ತದಲ್ಲಿ ತಿರಂಗಾ ಯಾತ್ರೆ ಬೃಹತ್ ಜಾಥಾ ಉದ್ಘಾಟನೆ
* ಬೆಳಗ್ಗೆ 11ಕ್ಕೆ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆಗೆ ಮಾಲಾರ್ಪಣೆ
* 11.30ಕ್ಕೆ ತಿರಂಗಾ ಯಾತ್ರೆ ಬೃಹತ್ ಸಾರ್ವಜನಿಕ ಸಭೆ

English summary
BJP national president Amit Shah will visit Mangaluru on August 21, 2016 and participate in the party's nation-wide Tiranga Yatra campaign and other programmes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X