ಕಂಬಳ ಉಳಿಸಲು ಮಂಗಳೂರಿನಲ್ಲಿ ‘ಪೋಸ್ಟ್ ಕಾರ್ಡ್’ಚಳವಳಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 25 : ತುಳುನಾಡಿನ ಸಾಂಸ್ಕೃತಿಕ ಹಾಗೂ ಗ್ರಾಮೀಣ ಕಲೆಯಾದ ಕಂಬಳವನ್ನು ಉಳಿಸಲು ಹಾಗೂ ಹೋರಾಟಕ್ಕೆ ಕರ್ನಾಟ ರಾಜ್ಯ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ ನೀಡುತ್ತಿದೆ.

ಈ ಕುರಿತು ಬುಧವಾರ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ವಕ್ತಾರ ಧರ್ಮೇಂದ್ರ, 'ಕಂಬಳ ನಡಪಾಲೆ ಕಂಬಳ ಒರಿಪಾಲೆ' ಅಭಿಯಾನದ ಅಂಗವಾಗಿ 'ಪೋಸ್ಟ್ ಕಾರ್ಡ್' ಚಳವಳಿಯನ್ನು ಜನವರಿ 28ರಂದು ನಡೆಸಲಾಗುವುದು ಎಂದು ಹೇಳಿದರು.[ಕಂಬಳ ಎಂದರೇನು? ಕಂಬಳ ನಮಗೇಕೆ ಬೇಕು?]

Akhil Bharath hindu Mahasabha Karnataka decided save Kambala postcard campaign

'ರಾಜ್ಯ ಸರಕಾರ ಕೂಡಲೇ ಎಚ್ಚೆತ್ತು ತುಳುನಾಡಿನ ಕಂಬಳ ಕ್ರೀಡೆಯ ಕುರಿತು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕು.[ಕೋರ್ಟ್ ಗೆ ಸೆಡ್ಡು, ಮಂಗ್ಳೂರಿನಲ್ಲಿ ಜ.28ರಂದು ಕಂಬಳ!]

ಇಲ್ಲವಾದಲ್ಲಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಷೇಧ ತೆರವಿಗೆ ನಡೆಯುತ್ತಿರುವ ಪ್ರತಿಭಟನೆಗಳ ಮಾದರಫುಡ್ ಈ ರಾಜ್ಯದಲ್ಲೂ ಆವರ್ತಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಲೋಹಿತ್ ಕುಮಾರ್ ಸುವರ್ಣ, ವಿನಾಯಕ್ ನಾಯಕ್, ಸಮರ್ಥ್ ಭಟ್, ರತೀಶ್ ಮೊದಲಾದವರು ಉಪಸ್ಥಿತರಿದ್ದರು.

English summary
Akhil Bharath hindu Mahasabha Karnataka decided save Kambala postcard campaign on January 28.
Please Wait while comments are loading...