ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಡುಬಿದಿರೆಯಲ್ಲಿ ಅರ್ಚಕನ ಜನಿವಾರ ಕಿತ್ತುಹಾಕಿದ ಕುಡುಕ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮೂಡುಬಿದಿರೆ,ಫೆಬ್ರವರಿ, 17: ಪಾನಮತ್ತನಾದ ವ್ಯಕ್ತಿಯೊಬ್ಬ ಪುರೋಹಿತನ ಮೇಲೆ ದಾದಾಗಿರಿ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಆತನ ಮೇಲೆ ಹಲ್ಲೆ ಮಾಡಿ ಜನಿವಾರವನ್ನು ಕಿತ್ತುಹಾಕಿದ ಘಟನೆ ಮೂಡುಬಿದಿರೆಯ ಕೋಟೆಬಾಗಿಲಿನಲ್ಲಿ ನಡೆದಿದೆ.

ಮಿಜಾರು ಕೊಪ್ಪದ ಕುಮೇರು ನಿವಾಸಿ ಗುರುರಾಜ್ ಭಟ್ ಹಲ್ಲೆಗೆ ಒಳಗಾದ ವ್ಯಕ್ತಿ. ಈತನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯೇ ರವಿ ದೇವಾಡಿಗ. ಈತನ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಸ್ಥಳೀಯರ ಒತ್ತಾಯಕ್ಕೆ ಮಣಿದ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.[ಬೆಳ್ತಂಗಡಿ: ಸಾರ್ವಜನಿಕರೇ ಆರೋಪಿಯನ್ನು ಥಳಿಸಿ ಕೊಂದು ಹಾಕಿದ್ರು]

A person onslaught on hindu priest in Moodabidri

ಘಟನೆಯ ವಿವರ :

ಮಿಜಾರು ಕೊಪ್ಪದ ಕುಮೇರು ಊರಿನ ಪುರೋಹಿತ ಗುರುರಾಜ್ ಭಟ್ ಬಳಿಗೆ ಅದೇ ಊರಿನ ದಿನೇಶ್ ಭವಿಷ್ಯದ ಬಗ್ಗೆ ಕೇಳಲು ಬಂದಿದ್ದರು. ಅದೇ ಸಂದರ್ಭದಲ್ಲಿ ಗುರುರಾಜ್ ಅವರ ನೆರೆಮನೆಯವನಾದ ರವಿ ದೇವಾಡಿಗ ಅಲ್ಲಿಗೆ ಬಂದಿದ್ದಾರೆ.

ಆಗ ಪಾನಮತ್ತನಾದ ರವಿ, ದಿನೇಶ್ ಬಳಿ ಉಡಾಫೆಯ ಮಾತುಗಳಾಡಿದ್ದು, ತನ್ನ ಹೆಣ್ಣು ಮಕ್ಕಳನ್ನು ಅಸಭ್ಯ ರೀತಿಯಲ್ಲಿ ನೋಡುತ್ತಿದ್ದಾನೆ ಎಂದು ಆರೋಪಿಸಿ ಆತನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.[ಮಂತ್ರವಾದಿ ಮಾತು ಕೇಳಿ ಹಾವು ಕೊಂದ ವ್ಯಕ್ತಿ ಮೇಲೆ ಹಲ್ಲೆ]

ಆಗ ಗುರುರಾಜ್ ಭಟ್ ರವರು ಮಧ್ಯ ಪ್ರವೇಶಿಸಿ ರವಿಯ ಆರೋಪವನ್ನು ನಿರಾಕರಿಸಿದ್ದಾರೆ. ಈ ವೇಳೆ ರವಿ ದೇವಾಡಿಗ ಗುರುರಾಜ್ ಭಟ್ ಮೇಲೆ ಹಲ್ಲೆ ನಡೆಸಿದ್ದು, ಭಟ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರವಿ ದೇವಾಡಿಗ ಪದೇ ಪದೇ ತನ್ನ ವಾಸ್ತವ್ಯ ಬದಲಿಸಿ ಮಂದಿಗೆ ತೊಂದರೆ ನೀಡುತ್ತಿದ್ದಾನೆ. ಕೂಡಲೇ ಈತನ ವಿರುದ್ದ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸ್ ಠಾಣೆಯ ಮುಂದೆ ಊರಿನ ಮಹಿಳೆಯರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.[ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]

ರವಿಯ ಹಿನ್ನೆಲೆ:

ಮೊದಲು ಮೂಲ್ಕಿ ಸಮೀಪ ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಿದ್ದ ರವಿ ತನ್ನ ನೆರೆಕರೆಯ ಮಂದಿಯೊಂದಿಗೆ ಕಾದಾಟ ನಡೆಸಿ ಬಳಿಕ ಮೂಡಬಿದರೆಯ ಕೋಟೆ ಬಾಗಿಲಿಗೆ ಬಂದು ನೆಲೆಸಿದ್ದನು. ಬಳಿಕ ಅಲ್ಲಿಯೂ ನೆರೆಮನೆಯವರನ್ನು ಊರವರನ್ನು ಎದುರು ಹಾಕಿಕೊಂಡ ಈತ ಪದೇ ಪದೇ ಗಲಾಟೆ ಮಾಡುತ್ತಿದ್ದನು.

ಈ ಪ್ರಕರಣದಲ್ಲಿ ರವಿ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಿದ್ದ ಪೊಲೀಸ್ ಅಧಿಕಾರಿಯೇ ವಿವಾದದಲ್ಲಿ ಸಿಲುಕುವಂತೆ ಮಾಡಿದ ಬಳಿಕ ಕೋಟೆ ಬಾಗಿಲು ಬಿಟ್ಟು ಮಿಜಾರಿನಲ್ಲಿ ಕುಟುಂಬ ಸಮೇತ ವಾಸ್ತವ್ಯ ಆರಂಭಿಸಿದ ರವಿ ದೇವಾಡಿಗ ಇದೀಗ ಅರ್ಚಕರ ಮೇಲೆ ಹಲ್ಲೆ ನಡೆಸಿದ್ದಾನೆ.

English summary
A person Ravi Devadiga onslaught on hindu priest Gururaj Bhat at Kotebagilu, Moodabidri. Gururaj Bhat hospitalized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X