ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾಮರಾ ಕೇಳಿದರೆ ಮಂಗಳೂರಲ್ಲಿ ಗಣಪನೇ ಪ್ರತ್ಯಕ್ಷನಾದ!

ಫ್ಲಿಪ್ ಕಾರ್ಟ್ ನಲ್ಲಿ ಕ್ಯಾಮರಾ ಆರ್ಡರ್ ಮಾಡಿದ ಒಬ್ಬರಿಗೆ ಕ್ಯಾಮರಾ ಬದಲು ಗಣಪತಿ ವಿಗ್ರಹ ಪಾರ್ಸೆಲ್ ಬಂದಿದೆ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 15: ಕ್ಯಾಮರಾ ಆರ್ಡರ್ ಮಾಡಿದರೆ ಪ್ರಥಮ ಪೂಜ್ಯ ಗಣೇಶನೇ ಪ್ರತ್ಯಕ್ಷನಾದರೆ ಹೇಗಿರುತ್ತದೆ? ಹೌದು, ಇದು ಆನ್ ಲೈನ್ ಶಾಪಿಂಗ್ ಮಹಿಮೆ!

ಮಂಗಳೂರಿನ ಪಿವಿಎಸ್ ಜಂಕ್ಷನ್ ಬಳಿಯ ಔಷಧ ಅಂಗಡಿಯೊಂದರ ಮಾಲೀಕ ಶ್ರೀಪತಿ ಅವರು ಫ್ಲಿಪ್ ಕಾರ್ಟಿನಲ್ಲಿ ನಿಕಾನ್ ಡಿ 5-200 ಕ್ಯಾಮರಾ ಆರ್ಡರ್ ಮಾಡಿದ್ದರು. ಇದರ ಬೆಲೆ ಬರೋಬ್ಬರಿ 35,595 ರೂ.![ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದು ಟ್ರಿಮ್ಮರ್, ಬಂದಿದ್ದು ಕಲ್ಲು!]

A man in Mangaluru got lord Ganesha's statue instead of Camera!

ಕ್ಯಾಮರಕ್ಕಾಗಿ ಕಾಯುತ್ತಿದ್ದ ಅವರಿಗೆ ಏಪ್ರಿಲ್ 14 ರ ಬೆಳಗ್ಗೆ ಪಾರ್ಸೆಲ್ ಬಂದಿದೆ. ಪಾರ್ಸೆಲ್ ತಂದಿದ್ದ ಹುಡುಗ 35,595 ರೂ. ಪಡೆದು, ಪಾರ್ಸೆಲ್ ಇದ್ದ ಪೆಟ್ಟಿಗೆಯನ್ನು ಶ್ರೀಪತಿ ಅವರಿಗೆ ನೀಡಿದ್ದಾನೆ. ಹುಡುಗ ಅಲ್ಲಿರುವಾಗಲೇ ಶ್ರೀಪತಿಯವರು ಪಾರ್ಸೆಲ್ ತೆರೆದು ನೋಡಿದರೆ ಆಘಾತವಾಗಿದೆ. ಕ್ಯಾಮರಾ ಬದಲು ಅದರೊಳಗಿದ್ದಿದ್ದು ಗಣಪತಿ ವಿಗ್ರಹ, ಫ್ಯಾಕ್ಸ್‍ಮೆಶಿನ್ ರೋಲ್ ಮತ್ತು ಆಯಿಲ್ ಇತ್ಯಾದಿ ಐಟೆಂಗಳು![ಆನ್ ಲೈನ್ ಗ್ರಾಹಕರೇ ಹುಷಾರು: ಮೈಸೂರಿನಲ್ಲಿ ಮೊಬೈಲ್ ಬದಲು ಬಂತು ಕಲ್ಲು!]

ಅಷ್ಟೇ ಅಲ್ಲ, ಇದರೊಂದಿಗೆ 16 ಜಿಬಿ ಎಸ್ಡಿ ಕಾರ್ಡ್, ಮೆಮೊರಿ ಕಾರ್ಡ್, ಕೆಮೆರಾ ಪೌಚನ್ನು ಸಹ ಇರಿಸಲಾಗಿತ್ತು. ತನಗೆ ಮೋಸ ಆಗಿದೆ ಎಂದು ಶ್ರೀಪತಿ ಅವರು ಕೊರಿಯರ್ ಸಂಸ್ಥೆಯ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಂಡು ಹಣವನ್ನು ವಾಪಾಸ್ ಪಡೆದುಕೊಳ್ಳುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

ಸದ್ಯ ಗಣಪತಿಯ ಕೃಪೆಯಿಂದ ಶ್ರೀಪತಿಯವರು ಕೋರಿಯರ್ ಹುಡುಗ ಹೊರಟು ಹೋಗುವ ಮೊದಲೇ ಪಾರ್ಸೆಲ್ ಒಡೆದು ನೋಡಿದ್ದರು! ತಮ್ಮ ಈ ಅನುಭವದಿಂದಾಗಿ, ಆನ್ ಲೈನ್ ಖರೀದಿದಾರರು ಎಚ್ಚರದಿಂದಿರಬೇಕು ಎನ್ನುತ್ತಾರೆ ಶ್ರೀಪತಿ.

English summary
A man in Mangaluru got lord Ganesha's statue instead of Camera in flipkart! He had ordered A Nikon D 5-200 camera worth rupees 35,595.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X