'ಕಾರ್ಪೊರೇಟ್ ಕಂಪನಿಗಳ ಪರಿಕಲ್ಪನೆಗಳನ್ನು ಕಲಿಯುವುದು ಮುಖ್ಯ'

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 24 : ವಿದ್ಯಾರ್ಥಿಗಳು ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಮೊದಲು ಕಾರ್ಪೊರೇಟ್ ಕಂಪನಿಗಳ ಪರಿಕಲ್ಪನೆ ಗಳನ್ನು ಕಲಿಯುವುದು ಮುಖ್ಯ ಎಂದು ಸಹ್ಯಾದ್ರಿ ಕಾಲೇಜು ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಂಡಾರಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಹ್ಯಾದ್ರಿ ಕಾಲೇಜ್‌ ಆಫ್‌ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ ಸಹಯೋಗದೊಂದಿಗೆ ಬೆಂಗಳೂರು ಆಫ್‌ ಅಪೆಂಟೈಶಿಪ್ ಟ್ರೈನಿಂಗ್‌ (ಎಸ್‌ಆರ್‌) ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ನಡೆಸಿದ ವಾಕ್ ಇನ್ ಸಂದರ್ಶನದಲ್ಲಿ ಮಂಜುನಾಥ ಭಂಡಾರಿ ಮಾತನಾಡಿ, "ಆಸಕ್ತಿ, ಬದ್ಧತೆ, ತೊಡಗಿಸಿಕೊಳ್ಳುವಿಕೆ ಮತ್ತು ಶಿಸ್ತಿನಿಂದ ಯಶಸ್ಸು ಖಚಿತ ಎಂದು ತಿಳಿಸಿದರು,

A central walk in interview held in Sahyadri college Mangaluru

ಬೋಟ್‌ ಸಹಾಯಕ ನಿರ್ದೇಶಕ ಎಂ. ಸುರೇಶ್‌ ಕುಮಾರ್‌ ಮಾತನಾಡಿ, 'ಕಳೆದ ವರ್ಷ 9900 ಅಪ್ರೆಂಟಿಸ್ ಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಯಿತು. ಕಲಿಕೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು'.

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಸಹಯೋಗದೊಂದಿಗೆ ಬೆಂಗಳೂರು ಆಫ್ ಅಪೆಂಟೈಶಿಪ್ ಟ್ರೈನಿಂಗ್ (ಎಸ್ಆರ್), ಚೆನ್ನೈ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ವಾಕ್ ಇನ್ ಸಂದರ್ಶನ ನಡೆಯಿತು.

A central walk in interview held in Sahyadri college Mangaluru

ಹಲವು ಕಂಪನಿಗಳು ಇದ್ದವು. ಇಂಜಿನಿಯರಿಂಗ್, ಡಿಪ್ಲೊಮಾ ಹಾಗೂ ಸಾಮಾನ್ಯ ಪದವೀಧರರಿಗೆ ವಾಕ್-ಇನ್-ಸಂದರ್ಶನ ನಡೆಯಿತು. ಸಂದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Mangaluru City Gets E Toilet Facility | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Board of Apprenticeship Training (Southern Region) Chennai and Directorate of Technical Education, Government of Karnataka, Bangalore, will jointly organized Centralized Walk-in Interview at Sahyadri College of Engineering and Management, Mangalore on Saturday 22nd July 2017 for engineering graduates and diploma holders in engineering.
Please Wait while comments are loading...