ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಆ ಕರಾಳ ವಿಮಾನ ದುರಂತಕ್ಕೀಗ ಏಳು ವರ್ಷ

ಪ್ರಪಂಚದ ಜನತೆಯನ್ನೇ ಒಂದರೆಕ್ಷಣ ತಲ್ಲಣಗೊಳಿಸಿದ್ದ ಮಂಗಳೂರಿನ ವಿಮಾನ ದುರಂತ ಸಂಭವಿಸಿ ಏಳು ವರ್ಷ ಕಳೆಯುತ್ತಾ ಬಂದರೂ ಆ ಕರಾಳ ನೆನಪು ಮಾತ್ರ ಇಂದಿಗೂ ಕಾಡುತ್ತಿದೆ.

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಮೇ 22: ಪ್ರಪಂಚದ ಜನತೆಯನ್ನೇ ಒಂದರೆಕ್ಷಣ ತಲ್ಲಣಗೊಳಿಸಿದ್ದ ಮಂಗಳೂರಿನ ವಿಮಾನ ದುರಂತ ಸಂಭವಿಸಿ ಏಳು ವರ್ಷ ಕಳೆಯುತ್ತಾ ಬಂದರೂ ಆ ಕರಾಳ ನೆನಪು ಮಾತ್ರ ಇಂದಿಗೂ ಕಾಡುತ್ತಿದೆ.

ದುಬೈನಿಂದ ಕ್ಯಾಪ್ಟನ್, ಸಹ ಪೈಲೆಟ್ ಸೇರಿದಂತೆ ಆರು ಮಂದಿ ಸಿಬ್ಬಂದಿ 160 ಮಂದಿ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಐಎಕ್ಸ್ 812(ಬೋಯಿಂಗ್ ಏರ್‌ಕ್ರಾಫ್ಟ್ 737-800) ವಿಮಾನ 2010ರ ಮೇ 22ರಂದು ಬೆಳಗ್ಗೆ 6:30ರ ಸುಮಾರಿಗೆ ಬಜ್ಪೆ ಸಮೀಪದ ಕೆಂಜಾರು ರನ್‌ವೇ ಬಳಿ ದುರಂತಕ್ಕೀಡಾಗಿತ್ತು. ಕೆಲ ನಿಮಿಷಗಳಲ್ಲೇ 158 ಮಂದಿ ಸುಟ್ಟು ಕರಕಲಾಗಿದ್ದರೆ, 8 ಮಂದಿ ಮಾತ್ರ ಪವಾಡ ಸದೃಶರಾಗಿ ಪಾರಾಗಿದ್ದರು.[ವಿಮಾನ ದುರಂತ, ವಿಮೆ ಕಂಪೆನಿಗಳಿಗೆ ಹೊಡೆತ]

ಮನಸ್ಸನ್ನು ಕಾಡುವ ಕರಾಳ ನೆನಪು ಒಂದೆಡೆ ಯಾದರೆ, ದುರಂತಕ್ಕೆ ಪೈಲಟ್‌ನ ಕ್ಷಣಿಕ ನಿರ್ಲಕ್ಷ್ಯವೇ ಕಾರಣವೆಂದು ತನಿಖೆಯಿಂದ ಸಾಬೀತುಗೊಂಡರೂ, ಮೃತರ ಕುಟುಂಬಗಳು ಮಾತ್ರ ತಮಗೆ ನ್ಯಾಯಬದ್ಧವಾಗಿ ಸಿಗಬೇಕಾದ ಪರಿಹಾರಕ್ಕಾಗಿ ಅಲೆದಾಡುವ ಸ್ಥಿತಿ ತಪ್ಪಿಲ್ಲ. ಏರ್ ಇಂಡಿಯಾ ವಿಳಂಬ ಧೋರಣೆಯ ಮೂಲಕ ಸಂತ್ರಸ್ತರ ಕುಟುಂಬಗಳನ್ನು ಇನ್ನೂ ಸತಾಯಿಸುತ್ತಿದೆ.[ಬಜ್ಪೆಯಲ್ಲಿ ನರಕಸದೃಶ ವಾತಾವರಣ]

ವಾಯು ಅಪಘಾತದ ಪರಿಹಾರ ಕುರಿತು ಅಂತಾರಾಷ್ಟ್ರೀಯ ಒಪ್ಪಂದವಾದ ಮೋಂಟ್ರಿಯಲ್ ಕನ್ವೆನ್ಷನ್'ನ ಲೆಕ್ಕಾಚಾರದಂತೆ 75 ಲಕ್ಷ ರೂ.ಅಷ್ಟು ಮೊತ್ತವನ್ನು ಮೊದಲ ಹಂತದಲ್ಲಿ ಎಲ್ಲ ಸಂತ್ರಸ್ತ ಕುಟುಂಬದವರಿಗೂ ನೀಡಬೇಕೆಂದು ಆಕ್ಷೇಪ ಎತ್ತಿದ ಕುಟುಂಬದವರು ಕೇರಳದಲ್ಲಿ ಹೈಕೋರ್ಟ್ ಮೆಟ್ಟಲೇರಿದ್ದರು.[ವಿಮಾನ ಅಪಘಾತ; ಮಂಗಳೂರಿಗೆ ದೌಡಾಯಿಸಿದ ಸಿಎಂ]

ಈ ವಾದವನ್ನು ಪುರಸ್ಕರಿಸಿದ ಅಲ್ಲಿನ ಹೈಕೋರ್ಟ್ ಏಕಸದಸ್ಯ ಪೀಠ ಸಂತ್ರಸ್ತರ ಪರ ತೀರ್ಪು ನೀಡಿತ್ತು. ಏರ್ ಇಂಡಿಯಾ ಕಂಪನಿ ಇದರ ವಿರುದ್ಧ ತ್ರಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅಲ್ಲಿ ಕಂಪನಿ ಪರವಾಗಿ ತೀರ್ಪು ಬಂದಿತ್ತು. ಇದರ ವಿರುದ್ಧ ಮತ್ತೆ ಸಂತ್ರಸ್ತರು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರಿಂದ 2012ರಲ್ಲಿ ಸ್ವೀಕೃತಗೊಂಡಿತ್ತು. ಆದರೆ, ಅದು ಇಂದಿಗೂ ಇತ್ಯರ್ಥಗೊಂಡಿಲ್ಲ.[ದೇಶದ 11ನೇ ಅತಿದೊಡ್ಡ ವಿಮಾನ ದುರಂತವಿದು]

ಕಪ್ಪುಚುಕ್ಕೆಯಾದ ಕರಾಳ ದಿನ

ಕಪ್ಪುಚುಕ್ಕೆಯಾದ ಕರಾಳ ದಿನ

[ಬಜ್ಪೆ ವಿಮಾನ ದುರಂತಕ್ಕೆ, ಆ ಕಹಿ ನೆನಪಿಗೆ 6 ವರ್ಷ][ಬಜ್ಪೆ ವಿಮಾನ ದುರಂತಕ್ಕೆ, ಆ ಕಹಿ ನೆನಪಿಗೆ 6 ವರ್ಷ]

ಆಧಾರ ಸ್ತಂಬವಾದವರೇ ಅಸುನೀಗಿದ್ದರು

ಆಧಾರ ಸ್ತಂಬವಾದವರೇ ಅಸುನೀಗಿದ್ದರು

ಇವೆಲ್ಲವೂ ವಿಮಾನ ಸ್ಫೋಟದ ಪಶ್ಚಾತ್ ಸ್ಫೋಟಗಳು. ಮಡಿದ ಹಲವರು ಆಯಾ ಕುಟುಂಬಗಳಿಗೆ ಆಧಾರ ಸ್ತಂಬವಾಗಿದ್ದರು. ಹಾಗೆಲ್ಲ ಸುಲಭವಾಗಿ ಮರೆಸುವಂತಹ ಪ್ರಹಾರವಿದಲ್ಲ. ಇದು ಘನಘೋರ ಪ್ರಹಾರ. ಸಹಿಸಲು ಸಾಧ್ಯವಿಲ್ಲ ಎಂಬಂತಹ ಆಘಾತ.

ಭಾವಪೂರ್ಣ ಶೃದ್ಧಾಂಜಲಿ

ಭಾವಪೂರ್ಣ ಶೃದ್ಧಾಂಜಲಿ

ವಿಮಾನ ದುರಂತದಲ್ಲಿ ಮಡಿದವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಇಂದು ಕೂಳೂರಿನ ಸ್ಮಾರಕ ಉದ್ಯಾನವನದಲ್ಲಿ ನಡೆಯಿತು.

ಕಂಬನಿ ಮಿಡಿದ ಗಣ್ಯರು

ಕಂಬನಿ ಮಿಡಿದ ಗಣ್ಯರು

ಶ್ರದ್ಧಾಂಜಲಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ರಮಾನಾಥ ರೈ, ಜಿಲ್ಲಾಧಿಕಾರಿ ಜಗದೀಶ್, ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಕವಿತಾ ಸನಿಲ್ , ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೃತರ ಕುಟುಂಬದ ಸದಸ್ಯರು ಹಿರಿಯ ಪೊಲೀಸ್ ಅಧಿಕಾರಿಗಳು, ವಿಮಾನ ನಿಲ್ದಾಣ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ನೆನಪಾದರೆ ಕಣ್ಣಾಲಿಗಳು ತುಂಬುತ್ತವೆ

ನೆನಪಾದರೆ ಕಣ್ಣಾಲಿಗಳು ತುಂಬುತ್ತವೆ

ದುರಂತದಲ್ಲಿ ತಮ್ಮ ಕುಟುಂಬಸ್ಥರನ್ನು, ಬಂಧು-ಬಳಗವನ್ನು ಕಳೆದುಕೊಂಡವರು ಇಂದಿಗೂ ದಿನಂಪ್ರತಿ ಈ ದುರಂತವನ್ನು ನೆನೆಸಿಕೊಂಡು ಕಣ್ಣಾಲಿಗಳನ್ನು ತುಂಬಿಸಿಕೊಳ್ಳುತ್ತಿದ್ದಾರೆ.

English summary
Air India Express Flight 812 was a scheduled passenger service from Dubai to Mangalore, which, at around 06:30 IST on 22 May 2010, overshot the runway on landing, fell over a cliff, and caught fire, spreading wreckage across the surrounding hillside. Of the 160 passengers and six crew members on board, only eight passengers survived. This is the 7th year memory of the tragedy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X