ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಮರಳು ಸಾಗಾಟಕ್ಕೆ ಹೊಸ ತಂತ್ರ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 14 : ಅಕ್ರಮ ಮರಳು ದಂಧೆಯನ್ನು ಹೇಗೆಲ್ಲಾ ನಡೆಸಬಹುದು ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಈ ದಂಧೆಯಿಂದ ಎಷ್ಟು ಲಾಭ ಬರುತ್ತದೆ ಎಂಬುದಕ್ಕೆ ಇದು ಉದಾಹರಣೆಯೂ ಹೌದು. ಮರಳು ಸಾಗಣೆ ಮಾಡಲು ನವ-ನವೀನ ಆಲೋಚನೆಗಳನ್ನು ಮಾಡುತ್ತಿರುವುದಂತೂ ಸತ್ಯ.

ಗೂಡ್ಸ್ ರೈಲಿನಲ್ಲಿ ಸಾಗಾಟಕ್ಕೆ ಸಿದ್ಧವಾಗಿದ್ದ 300 ಮೆಟ್ರಿಕ್ ಟನ್ ಅಕ್ರಮ ಮರಳನ್ನು ಬಿಸಿ ರೋಡ್ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಗಣಿ ಇಲಾಖೆ ಮತ್ತು ಬಂಟ್ವಾಳ ವೃತ್ತ ನಿರೀಕ್ಷಕರ ನೇತೃತ್ವದ ಪೊಲೀಸರು ಬುಧವಾರ ದಾಳಿ ನಡೆಸಿ ಮರಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ರೈಲ್ವೆ ಪೊಲೀಸರಿಗೆ ನೀಡಲಾಗಿದೆ. [ಅಕ್ರಮ ಮರಳು ದಂಧೆ, ಕಪಿಲೆ, ನುಗು ಜಲಾಶಯಕ್ಕೆ ಆತಂಕ]

sand

ಸ್ಥಳೀಯರು ನೀಡಿದ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಈ ಮರಳು ಯಾರಿಗೆ ಸೇರಿದ್ದು, ಎಲ್ಲಿಗೆ ಸಾಗಣೆ ಮಾಡಲಾಗುತ್ತಿತ್ತು ಎಂಬುದು ತಿಳಿದುಬಂದಿಲ್ಲ. ಮರಳು ಸಾಗಾಟಕ್ಕೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. [ಅಕ್ರಮ ಮರಳು ಗಣಿಗಾರಿಕೆ ಮಾಡಿದರೆ ಜೈಲು]

ಅನುಮತಿ ಕೊಟ್ಟವರು ಯಾರು? : ರೈಲ್ವೆ ಹಳಿಯ ಸಮೀಪ ಮರಳು ಸಂಗ್ರಹ ಮಾಡಲು ಅನುಮತಿ ಪಡೆಬೇಕು. ಒಂದಿಂಚು ರೈಲ್ವೆ ಜಾಗವನ್ನು ಅತಿಕ್ರಮಿಸಲು ಬಿಡದ ಇಲಾಖೆ, ಮರಳು ಸಂಗ್ರಹಕ್ಕೆ ಅನುಮತಿ ಕೊಟ್ಟಿದ್ದು ಹೇಗೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. [ತಹಶೀಲ್ದಾರರಿಗೆ ಮಚ್ಚು ತೋರಿಸಿದ ಮರಳು ಮಾಫಿಯಾ]

ಸ್ಥಳೀಯವಾಗಿ ಇಷ್ಟೊಂದು ಪ್ರಮಾಣದ ಮರಳು ಒದಗಿಸುವವರು ಯಾರು? ಎಂಬುದನ್ನು ಕೂಡಾ ರೈಲ್ವೆಯ ಯಾವುದೇ ಸಿಬ್ಬಂದಿಗಳು ಬಾಯಿ ಬಿಡುತ್ತಿಲ್ಲ. ಅನುಮತಿ ಇಲ್ಲದೆ ಮರಳನ್ನು ಹೀಗೆ ಸಾಗಣೆ ಮಾಡಬಹುದಾದದರೆ, ಅಕ್ರಮ ಸಾಮಾಗ್ರಿಗಳನ್ನು ಸಾಗಣೆ ಮಾಡಬಹುದುದಲ್ಲವೇ ಎಂದು ಪೊಲೀಸರು ರೈಲ್ವೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

English summary
Mangaluru : Officials of mines and geology department along with BC Road police on Wednesday April 13 seized 6 wagons of a goods train that were being used to transport sand, allegedly without permission at BC Road railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X