ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಬಂಟಿಂಗ್ ಹಾಕುವ ಗಲಾಟೆ, ಕಲ್ಲು ತೂರಾಟ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಫೆ. 26 : ಬಂಟಿಂಗ್ ಹಾಕುವ ವಿಚಾರದಲ್ಲಿ ಗುಂಪುಗಳ ನಡುವೆ ಕಲ್ಲುತೂರಾಟ ನಡೆದು ಮೂವರು ಪೊಲೀಸರು ಸೇರಿದಂತೆ ಐವರು ಗಾಯಗೊಂಡಿರುವ ಘಟನೆ ಬುಧವಾರ ತಡರಾತ್ರಿ ಕೆ.ಸಿ.ರೋಡ್ ಸಮೀಪ ನಡೆದಿದೆ. ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಕೆ.ಸಿ.ರೋಡ್ ಜಂಕ್ಷನ್‌ನಲ್ಲಿ ಬಂಟಿಂಗ್ ಹಾಕಲು ನಿರ್ಧರಿಸಲಾಗಿತ್ತು.

ಬಂಟಿಂಗ್ ಹಾಕುವುದನ್ನು ವಿರೋಧಿಸಿದ ಗುಂಪು ಬೀದಿ ದೀಪಗಳನ್ನು ಆರಿಸಿ ಸೋಡಾ ಬಾಟಲ್, ಕಲ್ಲುಗಳನ್ನು ಪೊಲೀಸರು ಮತ್ತು ಜನರತ್ತ ತೂರಿತು. ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. [ಕದ್ರಿಪಾರ್ಕ್ ಅಭಿವೃದ್ಧಿಗೆ 4 ಕೋಟಿ]

clash

ಉಳ್ಳಾಲ ಪೊಲೀಸರು ಪರಿಸ್ಥಿತಿಯನ್ನು ಸಹಕ ಸ್ಥಿತಿಗೆ ತರಲು ಪ್ರಯತ್ನ ನಡೆಸಿದರು. ಆದರೆ, ಎರಡೂ ಗುಂಪುಗಳೂ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರೂ ಗಾಯಗೊಂಡರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. [ಮಂಗಳೂರಿನಲ್ಲಿ ಮಾರ್ಚ್ 1ಕ್ಕೆ ಹಿಂದೂ ಸಮಾಜೋತ್ಸವ]

ತೊಕ್ಕೊಟ್ಟು ಬಳಿ ಅಂಗಡಿಗೆ ಬೆಂಕಿ : ಕೆ.ಸಿ.ರೋಡ್ ಘಟನೆ ನಡೆದ ಕೆಲವೇ ಗಂಟೆಗಳ ಬಳಿಕ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ರೈಲ್ವೇ ಹಳಿ ಸಮೀಪ ಇದ್ದ 13 ಬೀದಿಬದಿಯ ಅಂಗಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ. ತರಕಾರಿ, ಬಟ್ಟೆ, ಒಪ್ಪಲಿ, ಒಣಮೀನು, ಹೂವು ಮುಂತಾದ ಅಂಗಡಿಗಳು ಸುಟ್ಟು ಕರಕಲಾದವು.

fire

ಬೆಂಕಿ ಹಾಕಿರುವ ಬಗ್ಗೆ ಮಾಹಿತಿ ತಿಳಿದು ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಅಂಗಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದವು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತ ಪ್ರಕರಣ ದಾಖಲಾಗಿದೆ. ಉಳ್ಳಾಲದಾದ್ಯಂತ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

English summary
5 persons including 3 police personnel were injured in stone pelting between two groups at KC Road near Talapady, Mangaluru on Wednesday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X