ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ನಗರಕ್ಕೆ 24/7 ಕುಡಿಯುವ ನೀರು

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜೂ. 17 : ಮಂಗಳೂರು ನಗರದ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆಗಾಗಿ ರೂಪಿಸಲಾದ ಮೊದಲ ಹಂತದ ಎಡಿಬಿ ಯೋಜನೆ ಇನ್ನೂ ಅರೆಬರೆ ಸ್ಥಿತಿಯಲ್ಲಿದೆ. ಈ ಯೋಜನೆ ಪೂರ್ಣಗೊಳಿಸಲು ಮತ್ತು ಯೋಜನೆಗೆ ಹೊಸ ಭಾಗಗಳನ್ನು ಸೇರಿಸಲು 280 ಕೋಟಿ ವೆಚ್ಚದ ಎರಡನೇ ಹಂತದ ಯೋಜನೆ ಸಿದ್ಧಪಡಿಸಲಾಗಿದೆ.

ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನೆರವಿನಿಂದ ಕೈಗೊಳ್ಳುವ ಯೋಜನೆ ಇದಾಗಿದೆ. ಯೋಜನೆಯ ಅನ್ವಯ ನಗರಕ್ಕೆ ವಾರದಲ್ಲಿ 7 ದಿನ 24/7 ನೀರು ಪೂರೈಕೆಗೆ 160 ಕೋಟಿ, ಒಳ ಚರಂಡಿ ವ್ಯವಸ್ಥೆ ಅನುಷ್ಠಾನಕ್ಕಾಗಿ 120 ಕೋಟಿ ಅನುದಾನ ನೀಡಲಾಗುತ್ತದೆ. [ಮಂಗಳೂರು ನಗರಕ್ಕೆ ನೀರಿನ ಕೊರತೆ ಇಲ್ಲ]

drinking water

ನಗರದ ಮುಂದಿನ 30 ವರ್ಷಗಳ ಜನಸಂಖ್ಯೆಯ ಆಧಾರದ ಮೇಲೆ ನೀರು ಸರಬರಾಜು ವಲಯಗಳನ್ನು ಅಭಿವೃದ್ಧಿಪಡಿಸುವುದು. ಹಳೆಯ ಕೊಳವೆ ಮಾರ್ಗಗಳನ್ನು ಬದಲಾಯಿಸುವುದು. ಹೆಚ್ಚಿನ ನೀರು ಶೇಖರಣೆಗಾಗಿ ಜಲ ಸಂಗ್ರಹಾಗಾರ ನಿರ್ಮಿಸುವುದು. ಎಲ್ಲಾ ಮನೆ ಸಂಪರ್ಕಗಳನ್ನು ಹಳೆಯದಾದ ಕೊಳವೆಗಳಿಂದ ಬೇರ್ಪಡಿಸಿ ಹೊಸ ಸಂಪರ್ಕಕ್ಕೆ ಜೋಡಿಸುವುದು ಮುಂತಾದ ಕಾಮಗಾರಿಗಳು ಯೋಜನೆಯಲ್ಲಿ ಸೇರಿವೆ.['ಅಶೋಬಾ' ಪರಿಣಾಮ ಕರಾವಳಿಯಲ್ಲಿ ಭಾರೀ ಮಳೆ]

ಒಳಚರಂಡಿ ವ್ಯವಸ್ಥೆ : ಮಂಗಳೂರು ನಗರದ ಎಲ್ಲಾ ಒಳಚರಂಡಿ ವ್ಯವಸ್ಥೆಯನ್ನು ಪುನರ್ ನಿರ್ಮಿಸುವುದು. ಕುದ್ರೋಳಿ ರೇಚಕ ಸ್ಥಾವರದಿಂದ ತ್ಯಾಜ್ಯ ಸಂಸ್ಕರಣೆ ಘಟಕ ಕಾವೂರು ವರೆಗಿನ ಕೊಳವೆಯನ್ನು ಬದಲಾಯಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳು ಇವುಗಳಲ್ಲಿ ಸೇರಿದೆ.

ಎರಡನೇ ಹಂತದ ಎಡಿಬಿ ಯೋಜನೆಗೆ ಈಗಾಗಲೇ ಪ್ರಾಥಮಿಕ ವರದಿ ಸಿದ್ಧಪಡಿಸಲಾಗಿದೆ. ಇದಕ್ಕೆ ಪಾಲಿಕೆಯ ಕೌನ್ಸಿಲ್ ಸಭೆ ಒಪ್ಪಿಗೆ ನೀಡಿದರೆ, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಸರ್ಕಾರ ಒಪ್ಪಿಗೆ ನೀಡಿದರೆ, ಯೋಜನೆಯ ಕಾರ್ಯ ಆರಂಭವಾಗಲಿದೆ.

English summary
Mangalore Mahanagara Palike (MCC) will implement the 24X7 drinking water supply scheme under Asian Development Bank (ADB) project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X