ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಮೂಡುಬಿದಿರೆಯಲ್ಲಿ ಆಳ್ವಾಸ್ ನುಡಿಸಿರಿಗೆ ಚಾಲನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮೂಡುಬಿದಿರೆ, ನವೆಂಬರ್ 27 : ಜೈನ ಕಾಶಿ ಎಂದೇ ಪ್ರಖ್ಯಾತವಾಗಿರುವ ಮೂಡುಬಿದಿರೆಯಲ್ಲಿ 2015ನೇ ಸಾಲಿನ ಕನ್ನಡ ನಾಡು-ನುಡಿ ಸಂಸ್ಕೃತಿಯ ನಾಲ್ಕು ದಿನಗಳ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಗುರುವಾರ ಚಾಲನೆ ಸಿಕ್ಕಿದೆ.

'ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್' ವೇದಿಕೆಯಲ್ಲಿ ದೀಪ ಬೆಳಗಿಸಿ, ಭತ್ತದ ತೆನೆಗೆ ಹಾಲು ಹಾಕುವ ಮೂಲಕ ಸಾಹಿತಿ ಡಾ.ವೀಣಾ ಶಾಂತೇಶ್ವರ ಅವರು ಸಮ್ಮೇಳನಕ್ಕೆ ಚಾಲನೆ ನೀಡಿದರು. ಸಾಹಿತಿ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಮೋಹನ್ ಆಳ್ವಾ ಸಂದರ್ಶನ ಓದಿ]

ನುಡಿಸಿರಿ ಉದ್ಘಾಟನೆಗೂ ಮೊದಲು ಮೆರವಣಿಗೆ ಮೂಲಕ ಅತಿಥಿಗಳನ್ನು ವೇದಿಕೆಗೆ ಕರೆದುಕೊಂಡು ಬರಲಾಯಿತು. ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ರೈತಗೀತೆ, ವಂದೇ ಮಾತರಂ ಮತ್ತು ದೇಶಭಕ್ತಿ ಗೀತೆಗಳ ಗಾಯನ ನಡೆಯಿತು. ಸಾವಿರಾರು ಜನರು ಕನ್ನಡ ಧ್ವಜ, ಹಸಿರು ಧ್ವಜ ಹಿಡಿದು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿದರು.

ನುಡಿಸಿರಿ ಉದ್ಘಾಟಿಸಿ ಮಾತನಾಡಿದ ಡಾ.ವೀಣಾ ಶಾಂತೇಶ್ವರ ಅವರು, 'ಸಾಹಿತ್ಯ, ಸಂಗೀತ ಹಾಗೂ ಇತರ ಲಲಿತ ಕಲೆಗಳು ಮನುಷ್ಯನ ವ್ಯಕ್ತಿತ್ವವನ್ನು ಪರಿಷ್ಕರಿಸುವ, ಮನಸ್ಸನ್ನು ಪರಿಶುದ್ಧಗೊಳಿಸುವ ಮತ್ತು ಅವನನ್ನು ದೈವತ್ವದೆಡೆಗೆ ಕರೆದೊಯ್ಯುವ ಸಾಧನಗಳಾಗಿವೆ' ಎಂದು ಬಣ್ಣಿಸಿದರು. ಅಳ್ವಾಸ್ ನುಡಿಸಿರಿ ಚಿತ್ರಗಳನ್ನು ನೋಡಿ....

ಜೈನ ಕಾಶಿಯಲ್ಲಿ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ

ಜೈನ ಕಾಶಿಯಲ್ಲಿ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ

ಜೈನ ಕಾಶಿ ಎಂದೇ ಪ್ರಖ್ಯಾತವಾಗಿರುವ ಮೂಡುಬಿದಿರೆಯಲ್ಲಿ 2015ನೇ ಸಾಲಿನ ಕನ್ನಡ ನಾಡು-ನುಡಿ ಸಂಸ್ಕೃತಿಯ ನಾಲ್ಕು ದಿನಗಳ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಗುರುವಾರ ಚಾಲನೆ ಸಿಕ್ಕಿದೆ.

ಮೆರವಣಿಗೆ ಮೂಲಕ ವೇದಿಕೆಗೆ ಬಂದ ಗಣ್ಯರು

ಮೆರವಣಿಗೆ ಮೂಲಕ ವೇದಿಕೆಗೆ ಬಂದ ಗಣ್ಯರು

ನುಡಿಸಿರಿ ಉದ್ಘಾಟನೆಗೂ ಮೊದಲು ಮೆರವಣಿಗೆ ಮೂಲಕ ಅತಿಥಿಗಳನ್ನು ವೇದಿಕೆಗೆ ಕರೆದುಕೊಂಡು ಬರಲಾಯಿತು. ಈ ಸಂದರ್ಭದಲ್ಲಿ ಕಲಾತಂಡಗಳ ಪ್ರದರ್ಶನ ಜನರನ್ನು ಸೆಳೆಯಿತು.

ತುಳುನಾಡ ಸಂಸ್ಕೃತಿ ಬಿಂಬಿಸಿದ ಮೆರವಣಿಗೆ

ತುಳುನಾಡ ಸಂಸ್ಕೃತಿ ಬಿಂಬಿಸಿದ ಮೆರವಣಿಗೆ

ಅತಿಥಿಗಳನ್ನು ವೇದಿಕೆಗೆ ಕರೆದುಕೊಂಡು ಬಂದ ಭವ್ಯ ಮೆರವಣಿಗೆಯಲ್ಲಿ ಕರಾವಳಿ ಭಾಗದ ಸಂಸ್ಕೃತಿಯ ಪರಿಚಯವಾಯಿತು. ವಿವಿಧ ವೇಷ ತೊಟ್ಟ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ

ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ

12ನೇ ವರ್ಷದ ನುಡಿಸಿರಿ ಕಾರ್ಯಕ್ರಮದ 'ಶ್ರೀ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆ'ಯಲ್ಲಿ ನಡೆಯುತ್ತಿದೆ. 150 ಅಡಿ ಉದ್ದ, 40 ಅಡಿ ಅಗಲದ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 35 ಸಾವಿರ ಜನರು ಒಟ್ಟಿಗೆ ಕುಳಿತು ವೇದಿಕೆ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.

ನುಡಿಸಿರಿಗೆ ಚಾಲನೆ ನೀಡಿದ ಡಾ.ವೀಣಾ ಶಾಂತೇಶ್ವರ

ನುಡಿಸಿರಿಗೆ ಚಾಲನೆ ನೀಡಿದ ಡಾ.ವೀಣಾ ಶಾಂತೇಶ್ವರ

'ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್' ವೇದಿಕೆಯಲ್ಲಿ ದೀಪ ಬೆಳಗಿಸಿ, ಭತ್ತದ ತೆನೆಗೆ ಹಾಲು ಹಾಕುವ ಮೂಲಕ ಸಾಹಿತಿ ಡಾ.ವೀಣಾ ಶಾಂತೇಶ್ವರ ಅವರು ಸಮ್ಮೇಳನಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ

ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ

ಸಾಹಿತಿ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವಿಶ್ರಾಂತ ಕುಲಪತಿ ವಿವೇಕ ರೈ, ಸಾಹಿತಿಗಳಾದ ಹಂಪ ನಾಗರಾಜಯ್ಯ, ಕಮಲಾ ಹಂಪನಾ, ಮಾಜಿ ಸಚಿವ ಅಮರನಾಥ ಶೆಟ್ಟಿ ಮುಂತಾದ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇಂತಹ ಕಾರ್ಯಕ್ರಮಗಳು ಮುಖ್ಯ

ಇಂತಹ ಕಾರ್ಯಕ್ರಮಗಳು ಮುಖ್ಯ

ನುಡಿಸಿರಿಗೆ ಚಾಲನೆ ನೀಡಿ ಮಾತನಾಡಿದ ಡಾ.ವೀಣಾ ಶಾಂತೇಶ್ವರ ಅವರು, 'ಇಂದಿನ ದಿನಗಳಲ್ಲಿ ಎಲ್ಲೆಡೆ ತಾಂಡವವಾಡುತ್ತಿರುವ ಅಶಾಂತಿ, ಅಸಹನೆ, ಅಸಹಿಷ್ಣುತೆ ಇತ್ಯಾದಿ ಅನಿಷ್ಟಗಳನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸುವ ಮಾನಸಿಕ ಸ್ಥೈರ್ಯ ಸಾಹಿತ್ಯ-ಸಂಗೀತ-ಕಲೆ ಇವುಗಳಿಂದಲೇ ಸಿಗುತ್ತವೆ' ಎಂದರು.

ನಮ್ಮ ದೇಶದ ಸಮಸ್ಯೆಯಾಗಿ ಉಳಿದಿಲ್ಲ

ನಮ್ಮ ದೇಶದ ಸಮಸ್ಯೆಯಾಗಿ ಉಳಿದಿಲ್ಲ

'ದೇಶದಲ್ಲಿ ಈ ಅಸಹಿಷ್ಣುತೆ ಹೊಸದಲ್ಲ, ಅದು 1947 ರಿಂದಲೂ ಇದೆ, ಈ ಅಸಹಿಷ್ಣುತೆಯ ವಿರುದ್ಧದ ಹೋರಾಟವು ಯಾವುದೇ ರಾಜಕೀಯ ಪಕ್ಷವನ್ನು ಗುರಿಯಾಗಿಸುವುದು ಸರಿಯಲ್ಲ' ಎಂದು ವೀಣಾ ಶಾಂತೇಶ್ವರ ಅವರು ಹೇಳಿದರು.

ಈಗ ವೇದಿಕೆ ಸಿದ್ಧವಾಗಿದೆ

ಈಗ ವೇದಿಕೆ ಸಿದ್ಧವಾಗಿದೆ

'ಕನ್ನಡ ಕಟ್ಟುವ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಈಗ ವೇದಿಕೆ ಸಿದ್ಧವಾಗಿದೆ. ಆದರೆ ಈ ಸಾಮಾಜಿಕ ಜಾಲತಾಣದಿಂದ ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾಹುತಗಳೂ ನಡೆಯುವುದು ಸಾಧ್ಯ' ಎಂದುಡಾ.ವೀಣಾ ಶಾಂತೇಶ್ವರ ಹೇಳಿದರು.

ಎಚ್ಚರಿಕೆಯಿಂದ ಬಳಸಬೇಕು

ಎಚ್ಚರಿಕೆಯಿಂದ ಬಳಸಬೇಕು

'ಇತ್ತೀಚೆಗೆ ಫೇಸ್‌ಬುಕ್, ಟ್ವಿಟರ್, ಮೊಬೈಲ್ ಇತ್ಯಾದಿಗಳ ದುರುಪಯೋಗದಿಂದ ಅನೇಕ ದುರ್ಘಟನೆಗಳು ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಆದ್ದರಿಂದ, ಮಾಧ್ಯಮ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ಎಚ್ಚರಿಕೆಯಿಂದ, ವಿವೇಕದಿಂದ ಬಳಸುವುದು ಅವಶ್ಯವಿದೆ' ಎಂದು ಹೇಳಿದರು.

English summary
Alvas Nudisiri organized by Alavs Education Foundation, began on a grand note at Moodbidri on Thursday November 26, 2015. The event was inaugurated by litterateur Dr. Veena Shanteshwara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X