ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಆಕ್ಸಿಸ್ ಬ್ಯಾಂಕ್‌ ಹಣ ದರೋಡೆ: ಮತ್ತಿಬ್ಬರ ಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 24 : ಇಲ್ಲಿನ ಯೆಯ್ಯಾಡಿಯ ಆಕ್ಸಿಸ್ ಬ್ಯಾಂಕ್‌ ಕರೆನ್ಸಿ ಚೆಸ್ಟ್ ನಿಂದ 7.5 ಕೋಟಿ ರು. ಹಣವನ್ನು ಬೆಂಗಳೂರಿನ ಕೋರಮಂಗಲಕ್ಕೆ ವಾಹನದಲ್ಲಿ ಸಾಗಿಸುವ ವೇಳೆ ಹಣ ಕದ್ದು ಪರಾರಿಯಾದ ಘಟನೆಗೆ ಸಂಬಂಧಿಸಿ ಪೊಲೀಸರು ಮಂಗಳವಾರ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೇರಿದೆ.

ಬಂಧಿತರನ್ನು ಮಡಕೇರಿ ಸೋಮವಾರಪೇಟೆ ತಾಲೂಕಿನ ಸುರ್ಲಾಬಿ ನಿವಾಸಿ ರವಿ ಯಾನೆ ರವೀಂದ್ರ (42), ಮನು ಯಾನೆ ಮನೀಶ್ (45) ಎಂದು ಗುರುತಿಸಲಾಗಿದೆ.[ಮಂಗಳೂರು: ಬ್ಯಾಂಕಿನ 7.5 ಕೋಟಿ ರು ಹಣದೊಂದಿಗೆ ನಾಲ್ವರು ಎಸ್ಕೇಪ್]

2 more arrested in Mangaluru axis bank cash robbery case

ಮಂಗಳೂರಿನ ಯೆಯ್ಯಾಡಿಯಲ್ಲಿರುವ ಆಕ್ಸಿಸ್ ಬ್ಯಾಂಕ್‌ನ ಕರೆನ್ಸಿ ಚೆಸ್ಟ್ ನಿಂದ ಬೆಂಗಳೂರಿನ ಕೋರಮಂಗಲದ ಆಕ್ಸಿಸ್ ಬ್ಯಾಂಕ್ ಶಾಖೆಗೆ ಹಣ ಸಾಗಿಸುತ್ತಿದ್ದ ನಾಲ್ವರು ಸಿಬ್ಬಂದಿಗಳು ಹಣದ ಸಮೇತ ಮೇ 11 ಗುರುವಾರದಂದು ನಾಪತ್ತೆಯಾಗಿದ್ದರು.[ಮಂಗಳೂರು: ಆಕ್ಸಿಸ್ ಬ್ಯಾಂಕ್ ಹಣದೊಂದಿಗೆ ನಾಪತ್ತೆಯಾಗಿದ್ದ ಇಬ್ಬರ ಬಂಧನ]

ಮೇ 15ರಂದು ಗನ್ ಮ್ಯಾನ್ ಟಿ.ಎ. ಪೂವಣ್ಣ, ವಾಹನ ಚಾಲಕ ಚಿತ್ರದುರ್ಗದ ಟಿ.ಪಿ.ಕರಿಬಸಪ್ಪ ಹಾಗೂ ಕೊಡಗು ಜಿಲ್ಲೆಯ ಕಾಶಿಯಪ್ಪನನ್ನು ಪೊಲೀಸರು ಬಂಧಿಸಿ 6.3 ಕೋಟಿ ರು. ಹಣ ವಶಪಡಿಸಿಕೊಳ್ಳಲಾಗಿತ್ತು.

English summary
2 more arrested in Mangaluru axis bank cash robbery case. The arrested are identified as Ravindra (42) and Manish (45) from Madekeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X