ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

19 ವರ್ಷದ ಕ್ರಿಕೆಟ್ ಪಟುವಿಗೆ ಈಜುಕೊಳದಲ್ಲಿ ಹೃದಯಾಘಾತ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಪುತ್ತೂರು, ಡಿಸೆಂಬರ್ 7: ಪುತ್ತೂರು ನಗರದ ಹೊರವಲಯದ ದರ್ಬೆ ಬೈಪಾಸ್ ರಸ್ತೆ ಸಮೀಪವಿರುವ ಖಾಸಗಿ ಈಜುಕೊಳವೊಂದರಲ್ಲಿ ಸಹಪಾಠಿಗಳಿಬ್ಬರ ಜೊತೆ ಈಜಲು ಹೋದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಇನ್ನೂ ಮೃತಪಟ್ಟ ಸಂದರ್ಭ ಜೊತೆಗಿದ್ದ ವಿದ್ಯಾರ್ಥಿಗಳಿಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಿಗ್ಗೆ ಪುತ್ತೂರು ಕೊಂಬೆಟ್ಟುವಿನಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದಿದ್ದ ಸ್ವಿಝ್ಲರ್ ಮೋರ್ನಿಂಗ್ ಪಂದ್ಯಾಟದಲ್ಲಿ ಆಟವಾಡಿ ಬಳಿಕ ಫಿಲೋಮಿನಾ ಕಾಲೇಜಿನಲ್ಲಿ ಎಂದಿನಂತೆ ಕ್ರಿಕೆಟ್ ತರಬೇತಿಯಲ್ಲಿ ತೊಡಗಿದ್ದರು. ಆ ಬಳಿಕ ಕಾರ್ತಿಕ್ ಅವರು ತನ್ನ ಸಹಪಾಠಿಗಳಾದ ಭುವನೇಂದ್ರ ಹಾಗೂ ಸಾಗರ್ ಎಂಬವರ ಜೊತೆ ದರ್ಬೆ ಬೈಪಾಸ್ ರಸ್ತೆಯ ಸಮೀಪವಿರುವ ಕುಶಾಲಪ್ಪ ಅಭಿಕಾರ್ ಎಂಬವರ ಒಡೆತನದ ಎ.ಎಸ್.ಆರ್.ಈಜುಕೊಳಕ್ಕೆ ಈಜಲು ಹೋಗಿದ್ದರು. ಈ ವೇಳೆ ದುರಂತ ಸಂಭವಿಸಿದೆ.[ಕಬಿನಿ ಹಿನ್ನೀರಿನ ರೆಸಾರ್ಟ್ ನಲ್ಲಿ ಕೇರಳಿಗ ಸಾವು]

19-year-old youth drowns in swimming pool

ಇದು ಈ ಈಜುಕೊಳದಲ್ಲಿ ಒಂದು ವರ್ಷದ ಅವಧಿಯಲ್ಲಿ ನಡೆದ ಎರಡನೇ ದುರಂತವಾಗಿದೆ.

ಹೃದಯಾಘಾತ ಘಟನೆ :
ಕಾರ್ತಿಕ್ ಈಜು ಬಲ್ಲವರಾಗಿದ್ದು, ಆರಂಭದಲ್ಲಿ ಈಜು ಕೊಳಕ್ಕಿಳಿದು ತನ್ನ ಸಹಪಾಠಿಗಳ ಜೊತೆ ಈಜಾಡಿದ್ದ ಅವರು, ಈಜು ಕೊಳದಿಂದ ಮೇಲಕ್ಕೇರಿದ ಸಂದರ್ಭದಲ್ಲಿ ಸುಸ್ತಾದವರಂತೆ ಕಂಡು ಬಂದಿದ್ದರು. ಆ ಬಳಿಕ ಮೊತ್ತೊಮ್ಮೆ ಈಜುಕೊಳದ ದಡದಿಂದ ನೀರಿಗೆ ದುಮುಕಿ ಸರಿಯಾಗಿ ಕಾಲನ್ನು ಆಡಿಸದಾದರು ಮತ್ತೆ ನೀರಿನ ತಳದಿಂದ ಮೇಲಕ್ಕೆ ಬರಲಿಲ್ಲ. ಇದನ್ನು ಕಂಡ ಸ್ನೇಹಿತ ಸಾಗರ್ ಅವರೊಂದಿಗೆ ಭುವನೇಂದ್ರ ಮತ್ತು ಈಜುಕೊಳದ ಯುವಕನೊಬ್ಬ ಸೇರಿಕೊಂಡು ಕಾರ್ತಿಕ್ ಅವರನ್ನು ಈಜುಕೊಳದ ದಡಕ್ಕೆ ಎತ್ತಿಕೊಂಡು ಬಂದು ಪ್ರಥಮ ಚಿಕಿತ್ಸೆಗೆ ಮುಂದಾದರೂ ಆ ವೇಳೆಗಾಗಲೇ ಕಾರ್ತಿಕ್ ಮೃತರಾಗಿದ್ದರು.

ಕಾರ್ತಿಕ್ ಈಜು ಕೊಳದಲ್ಲಿ ಮೃತವಾಗಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದು ದೃಢಪಟ್ಟಿದೆ.

ಸ್ಥಳಕ್ಕೆ ಭೇಟಿ ನೀಡಿ ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿದ ಪುತ್ತೂರು ನಗರ ಠಾಣೆಯ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಎಸ್‌ಐ ಒಮನಾ ಹಾಗೂ ಸಿಬ್ಬಂದಿ ಇದೊಂದು ಅಸಹಜ ಸಾವಿನ ಪ್ರಕರಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಾವಂತ ಕ್ರೀಡಾಪಟು:
ಕಾರ್ತಿಕ್ ಪ್ರತಿಭಾವಂತ ಕ್ರೀಡಾಪಟುವಾಗಿದ್ದರು. ಉತ್ತಮ ಬೌಲರ್ ಹಾಗೂ ಸರ್ವಾಂಗೀಣ ಆಟಗಾರರಾಗಿದ್ದ ಅವರು ಮಂಗಳೂರು ವಿವಿ ಕ್ರಿಕೇಟ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಕ್ರಿಕೆಟ್ ಮಾತ್ರವಲ್ಲದೆ ಕಬಡ್ಡಿ ಆಟಗಾರನೂ ಆಗಿದ್ದ ಕಾರ್ತಿಕ್ ಅವರು ಎನ್‌ಸಿಸಿ ಯಲ್ಲಿಯೂ ಸಕ್ರೀಯರಾಗಿದ್ದರು.

ಪುತ್ತೂರು ತಾಲ್ಲೂಕಿನ ಆಲಂಕಾರಿನಲ್ಲಿ ದೀಕ್ಷಾ ಫ್ಯಾನ್ಸಿ ಅಂಗಡಿ ನಡೆಸುತ್ತಿರುವ ಗಂಗಾಧರ ರೈ ಮತ್ತು ಬ್ಯುಟೀಷಿಯನ್ ಆಗಿರುವ ಸವಿತಾ ದಂಪತಿಯ ಇಬ್ಬರು ಪುತ್ರರಲ್ಲಿ ಕಾರ್ತಿಕ್ ರೈ ಮೊದಲನೆಯವರು. ಅವರ ಸಹೋದರ ಹೃತಿಕ್ ರೈ ರಾಮಕುಂಜ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮೂಲತಃ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕೈಕಾರ ಸಮೀಪದ ತೊಟ್ಲ ನಿವಾಸಿಯಾಗಿದ್ದು, ಪ್ರಸ್ತುತ ಆಲಂಕಾರಿನಲ್ಲಿ ವಾಸ್ತವ್ಯವಿರುವ ಗಂಗಾಧರ ರೈ ಅವರ ಪುತ್ರ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ರೈ (19) ಮೃತಪಟ್ಟ ಯುವಕ. ಎಂಪಿಎಲ್ ಪಂದ್ಯಾಟ ಆಡಲು ಅಭ್ಯಾಸ ನಡೆಸುತ್ತಿದ್ದ ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ತನ್ನ ಸ್ನೇಹಿತರ ಜೊತೆ ರಜೆಯ ಸಂದರ್ಭದಲ್ಲಿ ಉಳಿದುಕೊಂಡಿದ್ದರು ಎಂದು ತಿಳಿದು ಬಂದಿದೆ.

English summary
A youngster lost his life after he drowned in a private swimming at Darbe, Puttur on Tuesday, December 6. The deceased is Karthik Rai (19). He was a second year B Com student of a private college in town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X