ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿನ್ನ ಸಾಗಿಸಲು ಏನ್ ಐಡಿಯಾ ಮಾಡಿದ್ರು, ಸಿಕ್ಕಿಬಿದ್ರು

|
Google Oneindia Kannada News

ಮಂಗಳೂರು, ಡಿ.5 : ಸೂಟ್‌ಕೇಸ್‌ ಹ್ಯಾಂಡಲ್‌ನ ಬಕಲ್ ಹೋಲ್ಡರ್‌, ಜೀನ್ಸ್‌ ಪ್ಯಾಂಟ್‌ನ ಬಟನ್‌ನಲ್ಲಿ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ ವ್ಯಕ್ತಿಯನ್ನು ದುಬೈನಿಂದ ಆಗಮಿಸಿದ್ದ ಅಬ್ದುಲ್ ಗಫೂರ್ (44) ಎಂದು ಗುರುತಿಸಲಾಗಿದೆ. 1033 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.

ಚಿನ್ನ ಸಾಗಿಸಲು ಹೊಸ ತಂತ್ರಜ್ಞಾನ : ಕೊಲ್ಲಿ ರಾಷ್ಟ್ರಗಳಿಂದ ಅಕ್ರಮವಾಗಿ ಚಿನ್ನ ಸಾಗಿಸಲು ನವನವೀನ ತಂತ್ರಗಳನ್ನು ಇತ್ತಿಚೆಗೆ ಬಳಸಲಾಗುತ್ತಿದೆ. ಮಂಗಳೂರಿನಲ್ಲಿ ಈ ಮಾದರಿಯಲ್ಲಿ ಚಿನ್ನ ಸಾಗಣೆ ಮಾಡುತ್ತಿದ್ದ ಮೊದಲ ಪ್ರಕರಣವಿದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]

ಸೂಟ್‌ಕೇಸ್‌ನ ಹ್ಯಾಂಡಲ್‌ನ ಬಕಲ್, ಮಹಿಳೆಯರ ಹ್ಯಾಂಡ್‌ ಬ್ಯಾಗ್‌ನ ಬಕಲ್‌, ಜೀನ್ಸ್‌ ಪ್ಯಾಂಟುಗಳ ಬಟನ್‌ಗಳ ರೂಪದಲ್ಲಿ ಚಿನ್ನವನ್ನು ಸಾಗಣೆ ಮಾಡಲಾಗುತ್ತಿತ್ತು. ಹಿಂದೆಯೂ ಹಲವಾರು ಭಾರೀ ಪೊಲೀಸರು ಚಿನ್ನ ಸಾಗಣೆ ಮಾಡುವವರನ್ನು ಬಂಧಿಸಿದ್ದರು. ಈ ಮಾದರಿಯಲ್ಲಿ ಚಿನ್ನ ಸಾಗಣೆ ಮಾಡಿದ್ದು ಇದೇ ಮೊದಲು.[ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಪತ್ತೆ]

Gold

ಸೂಟ್‌ಕೇಸ್‌ನ ಹ್ಯಾಂಡಲ್‌, ಪ್ಯಾಂಟ್‌ನ ಬಟನ್‌ಗಳಿಗೆ ಬೆಳ್ಳಿಯ ಬಣ್ಣ ಬಳಿಯಾಗಿದ್ದು, ಅದರೊಳಗೆ ಚಿನ್ನವನ್ನು ಇಟ್ಟುಕೊಂಡು ಸಾಗಣೆ ಮಾಡಲಾಗುತ್ತಿತ್ತು. ಈ ಬಗ್ಗೆ ತನಿಖೆ ಮುಂದುವರೆದಿದೆ.

English summary
The officers of Customs at Mangaluru International Airport seized gold brought in the form of silver paint coated suitcase handle buckle holders, ladies handbag buckles and jeans trouser buttons totally weighing 1033 grams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X