ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ದ.ಕ ಜಿಲ್ಲೆಯ ದೇವಸ್ಥಾನಗಳ ಅಭಿವೃದ್ಧಿಗೆ 1.28 ಕೋಟಿ ರು. ಅನುದಾನ'

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 22 : ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗಾಗಿ ಸರಕಾರದಿಂದ 1.28 ಕೋಟಿ ರು. ಅನುದಾನ ಮಂಜೂರು ಮಾಡಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ, ನಿಟಿಲಾಪುರ ಕ್ಷೇತ್ರ, ನೆಟ್ಲ ಗೋಳ್ತಮಜಲು ಹಾಗೂ ಶ್ರೀ ಕಾರಿಂಜೇಶ್ವರ ದೇವಸ್ಥಾನ, ಕಾವಳಪಡೂರುಗೆ ತಲಾ 15 ಲಕ್ಷ ರು.

ಪೆರಿಯೋಡಿಬೀಡುಶ್ರೀ ಕನಪಡಿತ್ತಾಯ ದೈವಸ್ಥಾನ, ಕಳ್ಳಿಗೆ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ, ಸಜೀಪಮುನ್ನೂರು, ಶ್ರೀ ಈಶ್ವರ ಮಂಗಲ ಸದಾಶಿವ ದೇವಸ್ಥಾನ, ಸಜೀಪಮೂಡ, ಶ್ರೀ ಆದಿನಾಥ ಸ್ವಾಮಿ ಬಸದಿ, ಪಂಜಿಕಲ್ಲಗೆ ತಲಾ 10 ಲಕ್ಷ ರು. ಮಂಜೂರಾಗಿದೆ ಎಂದು ಹೇಳಿದರು.

1.28 crore sanctioning for developing infrastructures of dakshina kannada temples says ramanatha rai

ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳ ದೈವಸ್ಥಾನ ಮಂಚಿಮಾಡ ಕೊಳ್ನಾಡು ಗ್ರಾಮ, ಶ್ರೀ ಕಾವೇಶ್ವರ ದೇವಸ್ಥಾನ, ತೆಂಕಬೆಳ್ಳೂರು, ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನ ಕರಿಂಕ ನೆಟ್ಲಮುಡ್ನೂರು, ಶ್ರೀ ಉಮಾಮಹೇಶ್ವರಿ ದೇವಸ್ಥಾನ, ಮಂಗಳಪದವು ವಿಟ್ಲ,

ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಜಾಲ್ಸೂರು, ಸುಳ್ಯ ತಾಲೂಕು,ಶ್ರೀ ಜಲದುರ್ಗಾ ದೇವಸ್ಥಾನ ಪೆರುವಾಜೆ, ಸುಳ್ಯ ತಾಲೂಕು, ಶ್ರೀ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಸುಳ್ಯ ತಾಲೂಕು, ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಬಾಳ್ತಿಲ ಗ್ರಾಮ, ಬಂಟ್ಚಾಳ ತಾಲೂಕು, ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನ ಏರಮಲೆ, ನರಿಕೊಂಬು, ಬಂಟ್ವಾಳ ತಾಲೂಕು ಇಲ್ಲಿಗೆ ತಲಾ 5 ಲಕ್ಷ ರು. ಮಂಜೂರು ಮಾಡಲಾಗಿದೆ.

ಬಂಟ್ವಾಳ ತಾಲೂಕಿನ ಶ್ರೀ ಕೊಡಮಣಿತ್ತಾಯ ದೇವಸ್ಥಾನ ಕುಂಟಲ್‍ಪಲ್ಕೆ, ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೇವಸ್ಥಾನ ನಂದನಹಿತ್ಲು, ಅಲೆತ್ತೂರು ಪಂಜುರ್ಲಿ ಧೂಮಾವತಿ ಬಂಟ ದೈವಸ್ಥಾನ, ನಂದನಬೆಟ್ಟುಕ್ಕೆ ತಲಾ 3 ಲಕ್ಷ ರು. ಹಾಗೂ ಶ್ರೀ ಧರ್ಮದೈವದ ದೈವಸ್ಥಾನ ಗುಬ್ಯ ಮಾಯಿಲರ ಕಾಲನಿ, ಕರೋಪಾಡಿ ಗ್ರಾಮಕ್ಕೆ 2.50 ಲಕ್ಷ ರು ಮಂಜೂರಾಗಿದೆ ಎಂದು ತಿಳಿಸಿದರು.

English summary
1.28 crore sanctioning for developing infrastructures of dakshina kannada temples, said forest minister Ramanath Rai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X