ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ನಿಲ್ಲದ ಜನಾಕ್ರೋಶ

By ಮಂಡ್ಯ ಪತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 7: ಮಂಡ್ಯ ಸೇರಿದಂತೆ ಕಾವೇರಿ ಕಣಿವೆ ಜನರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದರಿಂದ ಜನರ ಆಕ್ರೋಶಕ್ಕೆ ಇನ್ನಷ್ಟು ತುಪ್ಪ ಸುರಿದಂತಾಗಿದೆ.

ಮಂಡ್ಯದಾದ್ಯಂತ ರೈತರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬುಧವಾರವೂ ಬೀದಿಗಿಳಿದು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮತ್ತಿತರ ರಾಜಕೀಯ ನಾಯಕರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.[ಸುಪ್ರೀಂ ತೀರ್ಪು: ಹಾಸನದಲ್ಲಿ ಕರವೇ, ಬಿಜೆಪಿ, ಜೆಡಿಎಸ್ ಪ್ರತಿಭಟನೆ]

Voilence continue in Mandya after Supreme direction

ಬೆಳಿಗ್ಗೆಯಿಂದ ಮಂಡ್ಯದಲ್ಲಿ ಏನಾಯಿತು ಎಂಬುದರ ಸಂಕ್ಷಿಪ್ತ ವರದಿ ಇಲ್ಲಿದೆ:
ಕರ್ನಾಟಕ ಜನಶಕ್ತಿ, ಕ್ರಾಂತಿ ಯುವ ಶಕ್ತಿ, ಜನಪರ ಕ್ರಿಯಾ ವೇದಿಕೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರವೇ ನಾರಾಯಣಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ಶಿವರಾಮೇಗೌಡ ಬಣದ ಕಾರ್ಯಕರ್ತರು ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಕೋಪ, ಆವೇಶ, ರೋಷವನ್ನು ವ್ಯಕ್ತಪಡಿಸಿದರು.

Voilence continue in Mandya after Supreme direction

ಕಲ್ಲಹಳ್ಳಿ ಹಾಗೂ ಕಿರಗಂದೂರು ಗ್ರಾಮಸ್ಥರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಣಕು ಶವಯಾತ್ರೆ ನಡೆಸಿ, ಬಳಿಕ ಪ್ರತಿಕೃತಿಯನ್ನು ದಹಿಸಿದರು. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಹಾಗೂ ಕರ್ನಾಟಕದ ಪರ ವಕೀಲ ನಾರಿಮನ್ ಅವರ ಭಾವಚಿತ್ರಗಳನ್ನು ಚಟ್ಟದ ಮೇಲಿಟ್ಟು ಮೆರವಣಿಗೆಯಲ್ಲಿ ತಂದ ಪ್ರತಿಭಟನಾಕಾರರು, ನಗರದ ಜೆ.ಸಿ. ವೃತ್ತದಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.[ಮಂಡ್ಯದಲ್ಲಿ ಪ್ರತಿಭಟನೆ: ಕಬಿನಿ ಜಲಾಶಯಕ್ಕೆ ಪೊಲೀಸ್ ಭದ್ರತೆ]

Voilence continue in Mandya after Supreme direction

ಮುಖ್ಯಮಂತ್ರಿ ಭಾವಚಿತ್ರಕ್ಕೆ ಚಪ್ಪಲಿ ಏಟು: ತಾಲೂಕಿನ ಉಮ್ಮಡಹಳ್ಳಿ, ಮಂಗಲ, ಕಾರಸವಾಡಿ, ಸಂತೆಕಸಲಗೆರೆ, ಹೆಬ್ಬಕವಾಡಿ, ಗೊರವಾಲೆ, ಬಿ.ಯರಹಳ್ಳಿ, ಚನ್ಮನಪ್ಪನದೊಡ್ಡಿ, ಬೇಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಎತ್ತಿನ ಗಾಡಿ ಹಾಗೂ ಕಬ್ಬಿನ ಜಲ್ಲೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವನ್ನು ತಂದು ಜೆ.ಸಿ. ವೃತ್ತದಲ್ಲಿ ಚಪ್ಪಲಿ ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜೈನರ ಬೀದಿ, ಪೇಟೆ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಜನಪರ ಕ್ರಿಯಾ ವೇದಿಕೆ ಕಾರ್ಯಕರ್ತರು ಎಂದಿನಂತೆ ಅಂಗಡಿ-ಮುಂಗಟ್ಟುಗಳು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದನ್ನು ಬಲವಂತವಾಗಿ ಮುಚ್ಚಿಸಿದರು. ಒಂದೆರಡು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ, ಭಯದ ವಾತಾವರಣವನ್ನು ಮೂಡಿಸಿದರು.[ಬೆಂಗಳೂರಿಗರೇ ಎಚ್ಚರ!, ಕುಡಿಯೋಕೆ ಕಾವೇರಿ ನೀರು ಸಿಗಲ್ಲ!]

Voilence continue in Mandya after Supreme direction

ಸುದೀಪ್ ಕಟೌಟ್ ಗೆ ಬೆಂಕಿ: ನಗರದ ಜಯಚಾಮರಾಜೇಂದ್ರ ವೃತ್ತಕ್ಕೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಪ್ರತಿಭಟನಾಕಾರರು, ಸಮೀಪದಲ್ಲೇ ಇದ್ದ ಸಿದ್ಧಾರ್ಥ ಚಿತ್ರಮಂದಿರದತ್ತ ಧಾವಿಸಿ ಚಿತ್ರನಟ ಸುದೀಪ್ ಕಟೌಟ್ ಧ್ವಂಸಗೊಳಿಸಿ, ಜೆ.ಸಿ. ವೃತ್ತದಲ್ಲಿ ಸುಟ್ಟು ಹಾಕಿದರು.

Voilence continue in Mandya after Supreme direction

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಚಿತ್ರಮಂದಿರಗಳ ಮಾಲೀಕರು ಬೆಂಬಲ ವ್ಯಕ್ತಪಡಿಸಿ ತಮ್ಮ ಚಿತ್ರ ಪ್ರದರ್ಶನ ಬಂದ್ ಮಾಡಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಭತ್ತ ನಾಟಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಮುಖಂಡರಾದ ರವಿ, ಸೋಮಶೇಖರ್, ಹೊನ್ನೇಗೌಡ ಸೇರಿದಂತೆ ಇತರರು ವೃತ್ತದಲ್ಲಿ ಭತ್ತ ನಾಟಿ ಮಾಡಿ, ಪ್ರತಿಭಟಿಸಿದರು.

English summary
Voilence continued in Mandya after supreme court direct Karnataka state government to release water to Tamilnadu. Huge protest continued by different pro kannada organisations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X