ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ನ.10 ರಂದು ಟಿಪ್ಪು ಸುಲ್ತಾನ್ ಜಯಂತಿಗೆ ಸಿದ್ಧತೆ

By Mahesh
|
Google Oneindia Kannada News

ಮಂಡ್ಯ ಅಕ್ಟೋಬರ್ 25: ಮಂಡ್ಯ ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದಲ್ಲಿ ನವೆಂಬರ್ 10 ರಂದು ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಡೆಸಲಾಯಿತು. ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ನವೆಂಬರ್ 10 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂಭಾಗದಲ್ಲಿ ವಿವಿಧ ಕಲಾತಂಡದೊಂದಗೆ ಟಿಪ್ಪು ಸುಲ್ತಾನ್ ಭಾವಚಿತ್ರದ ಮೆರವಣಿಗೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 10:30 ಗಂಟೆಗೆ ಕಲಾಮಂದಿರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು.[ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಪ್ರವೇಶ ಶುಲ್ಕ ಏರಿಕೆ]

Tipu Sultan Jayanti on November 10 : DC S Ziyaullah

ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರ ಮಾತನಾಡಿ, 'ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಆಚರಿಸಲು ಸರ್ಕಾರ ಜಿಲ್ಲೆಗೆ ರೂ 50,000 ಹಾಗೂ ಪ್ರತಿ ತಾಲ್ಲೂಕಗಳಿಗೆ ರೂ 25,000 ಅನುದಾನವನ್ನು ನಿಗದಿ ಮಾಡಿದೆ. ಜಿಲ್ಲಾಡಳಿತ ಶಿಷ್ಟಚಾರದಂತೆ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿದೆ. ನಗರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದ ಪ್ರಚಾರಕ್ಕೆ ಬ್ಯಾನರ್ ಅಳವಡಿಸಬೇಕಾದರೆ ಮಂಡ್ಯ ನಗರ ಸಭೆ ಅನುಮತಿ ಪಡೆಯಬೇಕು ಎಂದು ತಿಳಿಸಿದರು.[ ಬೆಂ-ಮೈ ಜೋಡಿ ಹಳಿಗೆ ಅಡ್ಡಿಯಾದ ಟಿಪ್ಪು ಮದ್ದಿನ ಮನೆ]

ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಮಾತನಾಡಿ ಕಳೆದ ವರ್ಷದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ಆಚರಿಸಲಾಯಿತು.[ಟಿಪ್ಪು ಗೋಹತ್ಯೆ ಮಾಡಿದ ಉಲ್ಲೇಖ ಇತಿಹಾಸದಲ್ಲಿ ಇಲ್ಲ']

ಈ ವರ್ಷವೂ ಸಹ ಅರ್ಥಪೂರ್ಣ ಹಾಗೂ ಶಾಂತಿಯುತವಾಗಿ ಆಚರಿಸಲು ಜಿಲ್ಲಾಡಳಿತಕ್ಕೆಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು. ಕಾರ್ಯಕ್ರಮವಲ್ಲಿ ಭಾಗವಹಿಸವವರಿಗೆ ಉಪಹಾರದ ವ್ಯವಸ್ಥೆಯ ಸಂಘ ಸಂಸ್ಥೆಗಳು ವಹಿಸಲಿವೆ. ಜಿಲ್ಲಾಡಳಿದಿಂದ ಸಿಹಿ ವಿತರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಕೋರಿದರು.[ತಮಿಳುನಾಡಿಗೂ ಹಬ್ಬಿದ ಟಿಪ್ಪು ಜಯಂತಿ 'ಜ್ವರ'!]

ಮಂಡ್ಯ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಕೆ.ಎಂ.ಬೀರಪ್ಪ, ಮಂಡ್ಯ ನಗರ ಸಭೆ ಸದಸ್ಯರಾದ ನಯಾಜ್, ಮುಜಾಹಿದ್, ಅಪರ ಜಿಲ್ಲಾಧಿಕಾರಿ ಪೂರ್ಣಿಮ, ಮಂಡ್ಯ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ಮಂಡ್ಯ ನಗರ ಸಭೆ ಆಯುಕ್ತರಾದ ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಶಾಂತಮ್ಮ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದರು.

English summary
Mandya district administration has decided to celebrate Hazrat Tipu Sultan Jayanti on November 10 in grand manner, Deputy Commissioner S Ziyaulla has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X