ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಚ ಪಡೆವಾಗ ಬಲೆಗೆ ಬಿದ್ದ ಕಂದಾಯ ಅಧಿಕಾರಿ

ಜಮೀನು ಖಾತೆ ಮಾಡಿಸಿಕೊಡುತ್ತೇನೆ ನನಗೆ ಇಷ್ಟು ದುಡ್ಡುಕೊಡಬೇಕೆಂದು ರೈತನಿಗೆ ಬೇಡಿಕೆಯಿಟ್ಟು ಲಂಚ ಪಡೆವಾಗ ಕಂದಾಯ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ.ನವೆಂಬರ್ 5: ಜಮೀನು ಖಾತೆ ಮಾಡಿಸಿಕೊಡುತ್ತೇನೆ ನನಗೆ ಇಷ್ಟು ದುಡ್ಡುಕೊಡಬೇಕೆಂದು ರೈತನಿಗೆ ಬೇಡಿಕೆಯಿಟ್ಟು ಲಂಚ ಪಡೆವಾಗ ಕಂದಾಯ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಅವರು ರೈತನಿಗೆ ಬೇಡಿಯಿಟ್ಟಿದ್ದು ಬರೋಬ್ಬರಿ ಒಂದು ಲಕ್ಷ ರುಪಾಯಿ ಎನ್ನಲಾಗಿದೆ.

corruption

ಇನ್ನು ಬೇಡಿಕೆಯಿಟ್ಟ ಅಧಿಕಾರಿ ಮಂಡ್ಯ ತಾಲೂಕು ಕೊತ್ತತ್ತಿ ವಿಭಾಗ-2ರ ರಾಜಸ್ವ ನಿರೀಕ್ಷಕ ಸತ್ಯನಾರಾಯಣ ಎಂಬವರೇ ಎಸಿಬಿ ಬಲೆಗೆ ಬಿದ್ದವರು. [ಲಂಚ ಮುಕ್ತ ಅಭಿಯಾನಕ್ಕೆ ಟೊಂಕ ಕಟ್ಟಿದ ಆಪ್]

ತಿಮ್ಮನಹೊಸೂರು ಗ್ರಾಮದ ರೈತ ರಮೇಶ್ ಅವರು 2 ಎಕರೆ ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಆರ್‍ಐ ಸತ್ಯನಾರಾಯಣ ಅವರನ್ನು ಕೇಳಿದ್ದರು.

ಅದರೆ ಸತ್ಯನಾರಾಯಣ ಅವರು ಖಾತೆ ಮಾಡಿಕೊಡಲು ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ['ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ' ಯಾಕಾಗಿ?]

ಈ ಬಗ್ಗೆ ರೈತ ರಮೇಶ್ ಅವರು ಎಸಿಬಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಎಸಿಬಿ ಪೊಲೀಸರ ಸಲಹೆಯಂತೆ ಸುಭಾಷ್ ನಗರದಲ್ಲಿರುವ ಆರ್‍ಐ ಸತ್ಯಮೂರ್ತಿ ಅವರ ಕಚೇರಿಗೆ ತೆರಳಿ ಮುಂಗಡವಾಗಿ 10 ಸಾವಿರ ರೂ. ಲಂಚ ನೀಡುವಾಗ ಎಸಿಬಿ ಪೊಲೀಸರು ದಾಳಿ ನಡೆಸಿ ಸತ್ಯಮೂರ್ತಿ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

English summary
Anti Corruption Bureau officers raid on Mandya, Demand the one lack bribe Revenue officer to farmar in Mandya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X