ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಲುಕೋಟೆ ಕಲ್ಲು ಮಂಟಪದಲ್ಲಿ ಚಿತ್ರೀಕರಣಕ್ಕೆ ಶುಲ್ಕ ನಿಗದಿ

|
Google Oneindia Kannada News

ಮಂಡ್ಯ, ಜುಲೈ 21 : ರಜನಿಕಾಂತ್ ಅಭಿನಯದ ಪಡೆಯಪ್ಪ, ಲಿಂಗಾ, ಅಭಿಷೇಕ್ ಬಚ್ಚನ್-ಐಶ್ವರ್ಯಾ ಅಭಿನಯದ ಗುರು ಮುಂತಾದ ಚಿತ್ರಗಳಲ್ಲಿ ಮೇಲುಕೋಟೆಯ ಕಲ್ಲುಮಂಟಪದ ಸೌಂದರ್ಯವನ್ನು ಸುಂದರವಾಗಿ ಚಿತ್ರಿಸಲಾಗಿದೆ. ಆದರೆ, ಈಗ ಇಲ್ಲಿ ಚಿತ್ರೀಕರಣ ಮಾಡಲು ಶುಲ್ಕ ವಿಧಿಸಲು ಗ್ರಾಮ ಪಂಚಾಯಿತಿ ತೀರ್ಮಾನಿಸಿದೆ.

ಕಲ್ಲು ಮಂಟಪದ ಚಿತ್ರೀಕರಣ ಮಾಡಲು ಬರುವವರು ಗ್ರಾಮದಲ್ಲಿ ಕಸವನ್ನು ಹಾಗೆಯೇ ಬಿಟ್ಟು ಹೋಗುತ್ತಾರೆ. ಅದನ್ನು ಸ್ವಚ್ಚಗೊಳಿಸುವ ಹೊಣೆ ಗ್ರಾಮಸ್ಥರ ಮೇಲೆ ಬೀಳುತ್ತಿದೆ. ಆದ್ದರಿಂದ, ಚಿತ್ರೀಕರಣಕ್ಕೆ ಶುಲ್ಕ ವಿಧಿಸಲು ಗ್ರಾಮ ಪಂಚಾಯಿತಿ ನಿರ್ಧರಿಸಿದೆ.[ಮೇಲುಕೋಟೆಗೆ ಕೇಳಿದ್ದು 500 ಕೋಟಿ ರು ಸಿಕ್ಕಿದ್ದು 20 ಕೋಟಿ]

Now pay money for film shooting money in Melukote

ದರಪಟ್ಟಿ : ಕಲ್ಲು ಮಂಟಪ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕನ್ನಡ ಭಾಷೆಯ ಚಿತ್ರಗಳು ಒಂದು ದಿನ ಚಿತ್ರೀಕರಣ ಮಾಡಲು 3 ಸಾವಿರ ರೂ., ಧಾರವಾಹಿಗಳ ಚಿತ್ರೀಕರಣಕ್ಕೆ 1,500 ರೂ.. ದರ ನಿಗದಿ ಮಾಡಲಾಗಿದೆ. ಇತರ ಭಾಷೆಯ ಸಿನಿಮಾ ಚಿತ್ರೀಕರಣಕ್ಕೆ ದಿನಕ್ಕೆ 5 ಸಾವಿರ ರೂ., ಧಾರವಾಹಿಗಳಿಗೆ 3000 ರೂ. ಪಾವತಿಸಬೇಕು.[ಸುಲ್ತಾನ್ ಬತ್ತೇರಿಯಲ್ಲಿ ಚಿತ್ರೀಕರಣಕ್ಕೆ ದುಬಾರಿ ದರ]

ಮೇಲುಕೋಟೆ ಕಲ್ಲುಮಂಟಪದಲ್ಲಿ ಹಿಂದಿ, ತಮಿಳು, ಕನ್ನಡ ಸೇರಿದಂತೆ 60ಕ್ಕೂ ಅಧಿಕ ಚಿತ್ರಗಳ ಚಿತ್ರೀಕರಣ ನಡೆದಿದೆ. ಇಲ್ಲಿ ಚಿತ್ರೀಕರಣ ಮಾಡಲು ಮಂಡ್ಯ ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕು. ಆದರೆ, ಯಾವುದೇ ಶುಲ್ಕ ಪಾವತಿ ಮಾಡಬೇಕಾಗಿಲ್ಲ.

ಕಲ್ಲುಮಂಟಪದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 10 ಸಾವಿರ ಜನರು ವಾಸ ಮಾಡುತ್ತಾರೆ. ಈ ಸ್ಥಳದಲ್ಲಿ ಚಿತ್ರೀಕರಣ ಮಾಡಿದವರು ಕಸ, ಪ್ಲಾಸ್ಟಿಕ್ ತಟ್ಟೆ, ಲೋಟ ಮುಂತಾದವುಗಳನ್ನು ಬಿಟ್ಟು ಹೋಗುತ್ತಾರೆ. ಅದನ್ನು ಸ್ವಚ್ಛಗೊಳಿಸಲು ಪಂಚಾಯಿತಿ ಹಣ ವಿನಿಯೋಗಿಸಬೇಕು.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾಯ್ದೆಯಡಿ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ಈ ತರಹದ ಶುಲ್ಕವನ್ನು ವಿಧಿಸಲು ಅವಕಾಶವಿದೆ. ಇದನ್ನು ಬಳಸಿಕೊಂಡು ಪಂಚಾಯಿತಿ ಈಗ ಚಿತ್ರೀಕರಣಕ್ಕೆ ದರ ನಿಗದಿ ಮಾಡಿದೆ.

English summary
Mandya district Melukote ringed by hillocks full of thick greenery. More than 60 movies and several serials have been shot here. The local gram panchayat now decided to collect fare for shooting. Rs. 5,000 a day for non-Kannada film production, Rs. 3,000 for Kannada movies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X