ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧ್ಯಯನ ತಂಡದ ಜತೆ ರಮ್ಯಾ, ಅಂಬಿಯಣ್ಣ ಎಲ್ಲಿ?

By Mahesh
|
Google Oneindia Kannada News

ಮಂಡ್ಯ, ಅಕ್ಟೋಬರ್ 08: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿ ಅಧ್ಯಯನ ಮಾಡಲು ಆಗಮಿಸಿರುವ ಕೇಂದ್ರ ಜಲ ಆಯೋಗ ತಜ್ಞರ ತಂಡದ ಜೊತೆ ಮಾಜಿ ಸಂಸದೆ ರಮ್ಯಾ ಕಾಣಿಸಿಕೊಂಡರು. ಆದರೆ, ಮಾಜಿ ಸಚಿವ, ಶಾಸಕ ಅಂಬರೀಶ್ ಗೈರು ಹಾಜರಾಗಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.

'ನಾನು ಈ ಮಟ್ಟಕ್ಕೆ ಬರಲು ಮಂಡ್ಯ ಜಿಲ್ಲಾ ಜನತೆಯ ಅಭಿಮಾನ, ಪ್ರೀತಿ-ವಿಶ್ವಾಸವೇ ಕಾರಣ ಎಂದು ಹೇಳಿಕೊಳ್ಳುವ ಅಂಬರೀಶ್, ಕೇಂದ್ರ ಜಲ ಆಯೋಗ ತಜ್ಞರ ತಂಡ ಕೆ.ಆರ್.ಎಸ್. ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಂಬರೀಶ್ ಗೈರಾಗುವ ಮೂಲಕ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದರು.

Former MP Ramya shares information with Cauvery basin Technical Team

ಸೆ.30ರಂದು ಸುಪ್ರೀಂ ಕೋರ್ಟ್ ನೀಡುವ ಆದೇಶವನ್ನು ಅರಿತು ನಂತರ ಮಂಡ್ಯಕ್ಕೆ ಹೋಗಿ ಜನತೆಯನ್ನು ಕಾಣುತ್ತೇನೆ ಎಂದು ಹೇಳಿದ್ದ ಅಂಬರೀಶ್, ಸುಪ್ರೀಂ ಆದೇಶ ಬಂದು 7 ದಿನಗಳೇ ಕಳೆದರೂ ಇತ್ತ ಅವರ ಸುಳಿವೇ ಇಲ್ಲ.

ಅಲ್ಲೊಮ್ಮೆ, ಇಲ್ಲೊಮ್ಮೆ ಕಾಣಿಸಿಕೊಂಡು, ಟ್ವೀಟ್ಟರ್ ನಲ್ಲೇ ಕಾವೇರಿ ನದಿ ನೀರಿನ ವಿವಾದದ ಬಗ್ಗೆ ತನ್ನ ಅಭಿಪ್ರಾಯ ಹೇಳುತ್ತಿದ್ದ ಮಾಜಿ ಸಂಸದೆ ರಮ್ಯಾ ಮದ್ದೂರಿನಲ್ಲಿ ಕಾಣಿಸಿಕೊಂಡು, ತಜ್ಞರ ತಂಡದ ಮುಖ್ಯಸ್ಥ ಜಿ.ಎಸ್. ಝಾ ಅವರನ್ನು ಭೇಟಿ ಮಾಡಿ ಜಿಲ್ಲೆಯ ಬರದ ಬಗ್ಗೆ ವಾಸ್ತವ ಸ್ಥಿತಿ ಮತ್ತು ಸಮಸ್ಯೆಯನ್ನು ಸುಪ್ರೀಂ ಹಾಗೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ಮನವಿ ಮಾಡಿದರು.

English summary
Former MP of Mandya Ramya said she shared the information with Cauvery basin Technical Team about the shortage of drinking water, withering of farmers standing crops due to lack of water, and on the depleting water levels in the four reservoirs in the Cauvery basin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X